NEWSನಮ್ಮಜಿಲ್ಲೆ

ಕೇಂದ್ರದಿಂದ ಮಾಹಿತಿ ಬಾರದ ಹಿನ್ನೆಲೆ: ವಿದ್ಯುತ್ ಬಿಲ್ ಪಾವತಿಸಿ

ಗ್ರಾಹಕರಿಗೆ ಅಪರ ಮುಖ್ಯಕಾರ್ಯದರ್ಶಿ ಮಹೇಂದ್ರ ಜೈನ್ ಮನವಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ಉತ್ಪಾದಕರ ಬಿಲ್‍ನ್ನು ಪಾವತಿಸಲು ಹಾಗೂ ಗ್ರಾಹಕರಿಗೆ ಅಡಚಣೆ ರಹಿತ ವಿದ್ಯುತ್ ಸರಬರಾಜು ಮಾಡಲು ಅನುವಾಗುವಂತೆ ಮಾಡಲು ಗ್ರಾಹಕರನ್ನು ಆನ್‍ಲೈನ್, ಡಿಜಿಟಲ್ ವಿಧಾನಗಳ ಮೂಲಕ ವಿದ್ಯುತ್ ಬಿಲ್ಲನ್ನು ಪಾವತಿಸಲು ಇಂಧನ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಮಹೇಂದ್ರ ಜೈನ್ ವಿನಂತಿಸಿದ್ದಾರೆ.

ವಿದ್ಯುತ್ ಗ್ರಾಹಕರು ಮೂರು ತಿಂಗಳ ಅವಧಿಗೆ ಬಿಲ್ ಪಾವತಿಸುವುದನ್ನು  ಮುಂದೂಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಆದರೆ ಬಿಲ್ ಪಾವತಿಯ ಬಗ್ಗೆ ಕೇಂದ್ರ ಇಂಧನ ಸಚಿವಾಲಯದಿಂದ ರಾಜ್ಯ ಸರ್ಕಾರ ಅಥವಾ ವಿದ್ಯುತ್ ಸರಬರಾಜು ಕಂಪನಿಗಳು ಯಾವುದೇ ನಿರ್ದೇಶನಗಳನ್ನು ನೀಡಿಲ್ಲ ಎಂದು ತಿಳಿಸಿದ್ದಾರೆ.

ಏಪ್ರಿಲ್ ಮಾಹೆಯ ಮಾಸಿಕ ಮಾಪಕ ಓದುವಿಕೆ ಹಾಗೂ ಬಿಲ್ ವಿತರಣೆಯನ್ನು  ಸರಾಸರಿ ಬಿಲ್ ಅಥವಾ ಹಿಂದಿನ ತಿಂಗಳ  ಬಿಲ್‍ನ್ನು ನೀಡುವ ಮೂಲಕ  ನಿರ್ವಹಿಸಲಾಗುವುದು.

ಹಾಲಿ ತಂತ್ರಾಂಶದಲ್ಲಿ ನೋಂದಣಿಯಾಗಿರುವ ಎಲ್ಲಾ ವಿದ್ಯುತ್ ಗ್ರಾಹಕರಿಗೆ ವಿದ್ಯುತ್  ಬಿಲ್‍ನ್ನು ಇ-ಮೇಲ್, ಎಸ್‍ಎಮ್‍ಎಸ್, ಪಾಟ್ಸಾಪ್ ಮುಖಾಂತರ ಕಳುಹಿಸಲಾಗುವುದು. ಗ್ರಾಹಕ ಸಹಾಯವಾಣಿ 1912 ಗೆ ಕರೆ ಮಾಡಿ, ಅಕೌಂಟ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿ ಬಿಲ್ ವಿವರಗಳನ್ನು ಪಡೆಯಬಹುದು. ಅಲ್ಲದೇ ವಿದ್ಯುತ್ ಸರಬರಾಜು ಕಂಪನಿಯ ಮೊಬೈಲ್ ಆಪ್,  ಜಾಲತಾಣದಲ್ಲಿ ನೋಂದಾಯಿಸಿಕೊಂಡು ಸಹ ಬಿಲ್ ವಿವರಗಳನ್ನು ಪಡೆಯಬಹುದಾಗಿದೆ. ಗ್ರಾಹಕರು ಸಂಬಂಧಪಟ್ಟ ಉಪವಿಭಾಗ ಕಛೇರಿಯನ್ನು ಸಂಪರ್ಕಿಸಿ ಬಿಲ್ ವಿವರಗಳನ್ನು ಪಡೆಯಬಹುದಾಗಿದೆ.

ಆನ್‍ಲೈನ್ ಪಾವತಿಗಳನ್ನು ವಿದ್ಯುತ್ ಸರಬರಾಜು ಕಂಪನಿಗಳ ಜಾಲತಾಣದಲ್ಲಿ, ಕರ್ನಾಟಕ-1 ರ ಜಾಲತಾಣ,  ಮೊಬೈಲ್ ಆಪ್‍ಗಳಲ್ಲ, ಬಿಬಿಪಿಎಸ್ ಮೂಲಕ ಪಾವತಿಸಲು ಎಲ್ಲಾ ಬ್ಯಾಂಕುಗಳ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ವಾಲೆಟ್ ಪೇಮೆಂಟ್, ಯುಪಿಐ ಪೇಮೆಂಟ್, ಪೇಯು ಆಪ್ ಹಾಗೂ ಐಎಂಐ ಮೊಬೈಲ್ ಆಪ್ ಇವುಗಳಲ್ಲಿ ಯಾವುದೇ ವಿಧಾನದ   ಮೂಲಕ  ಪಾವತಿಸಬಹುದಾಗಿದೆ.

ಯಾವುದೇ ಗ್ರಾಹಕರು ಬಿಲ್ ಪಾವತಿಸಲು ಅನಿವಾರ್ಯ ಕಾರಣಗಳಿಂದ ಸಾಧ್ಯವಾಗದಿದ್ದಲ್ಲಿ, ಅಂತಹ ಗ್ರಾಹಕರು ಸ್ಥಳೀಯ ವಿದ್ಯುತ್ ಸರಬರಾಜು ಕಂಪನಿಗಳ ಉಪವಿಭಾಗಾಧಿಕಾರಿಗಳ ಕಛೇರಿಗೆ ಲಿಖಿತ ಮನವಿ ಸಲ್ಲಿಸಲು ಕೋರಿರುತ್ತಾರೆ.

ಈ ವಿಧಾನವು ಪ್ರಸ್ತುತ ಮಾಹೆಗೆ ಮಾತ್ರ ಅನ್ವಯವಾಗಲಿದ್ದು, ಮೇ 1  ರಿಂದ ಹಿಂದಿನಂತೆ ಮಾಪಕ ಓದುವಿಕೆ, ಬಿಲ್ ಹಂಚುವಿಕೆ ಹಾಗೂ ಬಿಲ್ ಸ್ವೀಕೃತಿ ಚಟುವಟಿಕೆಗಳನ್ನು ನಿರ್ವಹಿಸಲಾಗುವುದು ಮತ್ತು ಸರಾಸರಿ ಬಿಲ್ಲಿನಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಮುಂದಿನ ಮಾಹೆಯ ಬಿಲ್ಲಿನಲ್ಲಿ ಸರಿಪಡಿಸಲಾಗುವುದು ಎಂದು  ತಿಳಿಸಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ