NEWSವಿಜ್ಞಾನ

ಕೈಗಾರಿಕೆಗಳ ಸಮಸ್ಯೆ  ಅರಿವು ಸರ್ಕಾರಕ್ಕಿದೆ

ಎಫ್ ಕೆಸಿಸಿಐ ಪದಾಧಿಕಾರಿಗಳಿಗೆ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಕೈಗಾರಿಕೆಗಳ ಸಮಸ್ಯೆಗಳ ಬಗ್ಗೆ ಸರ್ಕಾರದ ಅರಿವಿದೆ. ಕೈಗಾರಿಕಾ ಸಚಿವರು ನಿಮ್ಮ ಹಲವಾರು ಸಮಸ್ಯೆಗಳ ಬಗ್ಗೆ ಸಂಪುಟದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತಲೇ ಇದ್ದಾರೆ. ಇನ್ನು ನೀವೂ ಸಹ ನಿಮ್ಮ ಸಮಸ್ಯೆಗಳನ್ನು ನನ್ನ ಗಮನಕ್ಕೆ ತನ್ನಿ. ನಾನು ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹರಿಸಲು ಯತ್ನಿಸುತ್ತೇನೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಎಫ್ ಕೆಸಿಸಿಐ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಸಚಿವರು, ಸರ್ಕಾರ ತೆಗೆದುಕೊಳ್ಳುವ ನಿರ್ಧಾರದಿಂದ ಇಡೀ ರಾಜ್ಯದ ಕೈಗಾರಿಕೆಗಳಿಗೆ ಅನುಕೂಲವಾಗಬೇಕು. ಈ ನಿಟ್ಟಿನಲ್ಲಿ ಎಲ್ಲರಿಗೂ ಸಹಕಾರಿಯಾಗುವಂತೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಸರ್ಕಾರ, ಮೈಸೂರು ಜಿಲ್ಲಾಡಳಿತ ಹಾಗೂ ಮೈಸೂರು ಉಸ್ತುವಾರಿ ಸಚಿವರು ಕೈಗಾರಿಕೆಗಳ ಪರ ಇರುವುದಾಗಿ ತಿಳಿಸಿದರು.

ಅದೃಷ್ಟವಶಾತ್ ಕರೋನಾ ನಿಯಂತ್ರಣಕ್ಕೆ ಬಂದಿದೆ. ಇದಕ್ಕೆ ಜಿಲ್ಲಾಧಿಕಾರಿ, ಪೆÇಲೀಸ್ ಅಧಿಕಾರಿಗಳು, ವೈದ್ಯರು, ನರ್ಸ್ ಹಾಗೂ ಆಶಾಕಾರ್ಯಕರ್ತೆಯರು ಸಾಕಷ್ಟು ಶ್ರಮ ಹಾಕಿದ್ದಾರೆ. ಅವರ ಈ ಸೇವೆಗೆ ನಾನು ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುವೆ ಎಂದು ತಿಳಿಸಿದರು.

ಕೈಗಾರಿಕಾ ಪ್ರತಿನಿಧಿಗಳ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್ ಅವರು ಕಾರ್ಖಾನೆಗಳು ನೌಕರರಿಗೆ ನೀಡಿರುವ ಕಂಪನಿಯ ಗುರುತಿನ ಚೀಟಿ ಹೊಂದಿದ್ದರೆ ಪಾಸ್ ಕಡ್ಡಾಯ ಮಾಡುವುದಿಲ್ಲ. ಅಗರಬತ್ತಿ ಮುಂತಾದ ಅಸಂಘಟಿತ ಗೃಹ ಕೈಗಾರಿಕೆಗಳ ಪ್ರತಿನಿಧಿಗಳಿಗೆ ಅಗತ್ಯವಿದ್ದಲ್ಲಿ ಪಾಸ್ ನೀಡಲಾಗುವುದು ಎಂದರು.

ಕಂಪನಿಯಲ್ಲಿ ಕಾರ್ಯನಿರ್ವಹಿಸುವಾಗ ಹವಾ ನಿಯಂತ್ರಣಗಳನ್ನು ಕಡ್ಡಾಯವಾಗಿ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗಳು ಕೈಗಾರಿಕಾ ಉದ್ಯಮಿಗಳಿಗೆ ಸೂಚನೆ ನೀಡಿದರು.

ನಗರವು ಕೆಂಪು ವಲಯಕ್ಕೆ ಸೇರಿರುವದರಿಂದ ಟ್ಯಾಕ್ಸಿ, ಆಟೋ, ಗೂಡ್ಸ್, ಟೆಂಪೋಗಳ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಸೋಮವಾರದಿಂದ ಟ್ಯಾನ್ಸ್‍ಫೋರ್ಟ್ ಇಂಡಸ್ಟ್ರಿಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಮಾರುಕಟ್ಟೆ ಸಂಕಿರಣಗಳನ್ನು ತೆರೆಯುವಂತಿಲ್ಲ ಎಂಬ ಸೂಚನೆ ಇದೆ. ದೇವರಾಜ ಮಾರುಕಟ್ಟೆಯನ್ನು ಹೇಗೆ ಪರಿಗಣಿಸಬೇಕು ಎಂಬ ಸ್ಪಷ್ಟತೆ ಇಲ್ಲ. ಆ ಬಗ್ಗೆ ಒಂದೆರಡು ದಿನದಲ್ಲಿ ತಿಳಿಸಲಾಗುವುದು. ದೇವರಾಜ ಅರಸು ರಸ್ತೆ ಹಾಗೂ ಇತರೆ ಜನಸಂದಣಿ ಸೇರುವ ಅಂಗಡಿಗಳನ್ನು ತೆರೆಯಲು ಸದ್ಯಕ್ಕೆ ಅವಕಾಶ ನೀಡುವುದಿಲ್ಲ. ಈ ಬಗ್ಗೆ ಸ್ಪಷ್ಟನೆ ಪಡೆದು ಕ್ರಮ ವಹಿಸಲಾಗುವುದು ಎಂದರು.

Leave a Reply

error: Content is protected !!
LATEST
ಸಾವಿರ ವರ್ಷಗಳ ಇತಿಹಾಸವಿರುವ ಈಶ್ವರ ದೇವಾಲಯ ಜೀರ್ಣೋದ್ಧಾರಕ್ಕೆ ಚಾಲನೆ: ನೇಮಿರಾಜ್ ಕೃಷಿ ಸಚಿವರ ತವರು ನೆಲದಲ್ಲೇ ಕೊಬ್ಬರಿ ಮಾರಿದ ರೈತರ ಪರದಾಟ : ರೈತ ಸಂಘ ಕಿಡಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಪಿಎಸ್ ಪಿಂಚಣಿಗಾರರ ಬೃಹತ್ ಪ್ರತಿಭಟನೆ- ಆಕ್ರೋಶ ಮಳೆ ನೀರ ನೇರವಾಗಿ ಒಳಚರಂಡಿಗೆ ಬಿಡುವವರ ವಿರುದ್ಧ ಜಲಮಂಡಳಿ ಕ್ರಮಕ್ಕೆ ಆಕ್ಷೇಪ: ಡಿಸಿಎಂ ಡಿಕೆಶಿಗೆ ಎಎಪಿ ಬಹಿರಂಗ ಪತ್ರ ಕಿಟಕಿ ಮೂಲಕ ನುಸುಳಿ ಹಣ ದೋಚುತ್ತಿದ್ದ ಖತರ್ನಾಕ್‌ ಅಕ್ಕ-ತಮ್ಮ ಅಂದರ್‌ KSRTC: ನೌಕರರ ಸಮಸ್ಯೆ ನೀಗಿಸುವ ಸಮರ್ಥ ಪಡೆಯೂ ಇಲ್ಲ ಸಮರ್ಥ ನಾಯಕನೂ ಇಲ್ಲ! ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ ಆರೋಪ ಮಹರ್ಷಿ ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ: ಸಚಿವ ನಾಗೇಂದ್ರ ಸ್ಪಷ್... ಪಿ.ಚಂದ್ರಶೇಖರನ್‌ ಆತ್ಮಹತ್ಯೆ ಪ್ರಕರಣ: ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವ ಮಂತ್ರಿಯ ಸಂಪುಟದಿಂದ ಕಿತ್ತುಹಾಕಿ: ಎಎಪಿ KKRTC: ಡಬಲ್ ಡ್ಯೂಟಿ, ದೂರದ ಪ್ರಯಾಣಕ್ಕೆ ವಿಶ್ರಾಂತಿ ಕಡ್ಡಾಯ ಆದರೆ ದೇವದುರ್ಗ ಘಟಕದ ನೌಕರರಿಗೆ ಮರೀಚಿಕೆ!