NEWS

ಕೊರೊನಾಗೆ ರಾಜ್ಯದಲ್ಲಿ ಎರಡನೇ ಬಲಿ

ಕರ್ನಾಟಕದಲ್ಲಿ 55ಕ್ಕೇರಿದ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ: ಆತಂಕ ವ್ಯಕ್ತಪಡಿಸಿದ ಸಚಿವ ಸುಧಾಕರ್‌

ವಿಜಯಪಥ ಸಮಗ್ರ ಸುದ್ದಿ

ಮೈಸೂರು:  ವಿಶ್ವಮಾರಿ ಕೊರೊನಾಗೆ ರಾಜ್ಯದಲ್ಲಿ ಮತ್ತೊಂದು ಜೀವ ಬಲಿಯಾಗಿದ್ದು, ಇದು ಎರಡನೇ ಸಾವಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನಲ್ಲಿ ಓರ್ವ ವೃದ್ಧೆ ಇಂದು ಮೃತಪಟ್ಟಿದ್ದು ಅವರ ಅಂತ್ಯಕ್ರಿಯೆಯನ್ನು ಜಾಗರೂಕವಾಗಿ ಮಾಡಲಾಗಿದೆ.

ಇನ್ನು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿ ಓರ್ವ ವ್ಯಕ್ತಿಗೆ ಕೊರೊನಾ ವೈರಸ್‌ ಸೋಂಕು ಹರಡಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಮೂರಕ್ಕೆ ಏರಿಕೆ ಆದಂತಾಗಿದೆ.

ರಾಜ್ಜದಲ್ಲಿ ದಿನದಿಂದ ದಿನಕ್ಕೆ ಸೋಂಕು ಪೀಡಿತರಸಂಖ್ಯೆ ಹೆಚ್ಚಾಗುತಿದ್ದು ಇಲ್ಲಿಯವರೆಗೆ  55 ಜನರಿಗೆ ಸೋಂಕು ತಗುಲಿದೆ. ಆದರೂ ಕೊರೊನಾ ವೈರಸ್‌ ತನ್ನ ಅಟ್ಟಹಾಸವನ್ನು ಮುಂದುವರಿಸಿದ್ದು ಜನರಲ್ಲಿ ಇನ್ನಷ್ಟು ಭೀತಿಯನ್ನು ಉಂಟುಮಾಡಿದೆ ಮತ್ತೊಂದೆಡೆ ಜನರು ಗುಂಪು ಗುಂಪಾಗಿ ಸೇರುವ ಮೂಲಕ ವೈರಸ್‌ಅನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.

ಇನ್ನಾದರೂ ಈ ಮಹಾಮಾರಿಯನ್ನು ದೂರವಿರಿಸಲು ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳಬೇಕಿದೆ ಜತೆಗೆ ತಮ್ಮ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಲ್ಲೂ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿ ಜಾಗೃತಿ ಮೂಡಿಸಬೆಕಿದೆ.

ಆತಂಕ ಮೂಡಿಸಿದ ಸಚಿವ ಸುಧಾಕರ್‌ ಹೇಳಿಕೆ

ಕಳೆದ ಮೂರು ದಿನಗಳಿಂದ ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕು ಹರಡುವ ವೇಗ ಹೆಚ್ಚಾಗಿದೆ. ಈಗ ನಮಗೂ ಆತಂಕ ಶುರುವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ನೀಡಿರುವ ಹೇಳಿಕೆ ಆತಂಕ ಸೃಷ್ಟಿಸುವಂತಿದೆ.

10 ವರ್ಷದ ಒಳಗಿನ ಮಕ್ಕಳು ಹಾಗೂ 60 ದಾಟಿದವರಲ್ಲಿ ಹೆಚ್ಚಿನ ಸೋಂಕು ಕಾಣುತ್ತಿದೆ. 60 ವರ್ಷ ಮೇಲ್ಪಟ್ಟ ಹಿರಿಯರು ಮನೆಯಿಂದ ಹೊರ ಬಾರದಂತೆ ನೋಡಿಕೊಳ್ಳಬೇಕಿದೆ. ಸೋಂಕಿನ ಪ್ರಮಾಣ ಇನ್ನೂ ಎಷ್ಟಾಗುತ್ತೋ ಎಂದು ಆತಂಕವನ್ನು ಸಚಿವರು  ಹೊರ ಹಾಕಿದ್ದಾರೆ.

ರಾಜ್ಯದಲ್ಲಿ‌ ಕೊರೊನಾ ಸೊಂಕಿತರ ಸಂಖ್ಯೆ 55ಕ್ಕೆ ಏರಿದೆ. ಇಬ್ಬರು ಮೃತರಾಗಿದ್ದಾರೆ. ಗೌರಿಬಿದನೂರಿನಲ್ಲಿ ಒಂದು ಸಾವು ಆಗಿದೆ, ಅದನ್ನ ನಾವು ಕೋವಿಡ್-19, ಅಂತಾನೇ ಭಾವಿಸಿದ್ದೇವೆ. ಅಂತಿಮ ರಿಪೋರ್ಟ್ ಬಾರದಿದ್ದರು ಕೆಲವು ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕೊರೊನಾ ಹರಡುತ್ತಿರುವುದನ್ನು ನೋಡಿ ಇಟಲಿ ಸರ್ಕಾರ ಕೈ ಚೆಲ್ಲಿ ಕುಳಿತಿದೆ. ರಾಜ್ಯದಲ್ಲೂ ಏರಿಕೆಯಾಗುತ್ತಿದೆ. 1.25 ಲಕ್ಷದಷ್ಟು ಅಂತಾರಾಷ್ಟ್ರೀಯ ವ್ಯಕ್ತಿಗಳನ್ನ ಕ್ವಾರಂಟೈನ್ ಮಾಡ್ತಿದ್ದೇವೆ. ಪತ್ತೆ, ಪರೀಕ್ಷೆ ಮತ್ತು ಚಿಕಿತ್ಸೆ ರೂಪದಲ್ಲಿ ಕಾರ್ಯ ಆರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ.

Leave a Reply