NEWSದೇಶ-ವಿದೇಶ

ಕೊರೊನಾ ನಿಗ್ರಹಕ್ಕಾಗಿ ಭಾರತಕ್ಕೆ 2.9 ಮಿಲಿಯನ್ ಡಾಲರ್ ಘೋಷಿಸಿದ ದೊಡ್ಡಣ್ಣ

ವಿಶ್ವದ 64 ರಾಷ್ಟ್ರಗಳಿಗೆ ಸೋಕು ತಡೆಗೆ 174 ಮಿಲಿಯನ್ ಡಾಲರ್ ನೆರವು ನೀಡುತ್ತಿದೆ ಅಮೆರಿಕ

ವಿಜಯಪಥ ಸಮಗ್ರ ಸುದ್ದಿ

ವಾಷಿಂಗ್ಟನ್: ವಿಶ್ವದ 64 ರಾಷ್ಟ್ರಗಳಿಗೆ  ಕೊರೊನಾ ವೈರಸ್‌ ಸೋಕು ತಡೆಗೆ ಅಮೆರಿಕ 174 ಮಿಲಿಯನ್ ಡಾಲರ್ ಅನ್ನು ನೀಡುವುದಾಗಿ ಘೋಷಣೆ ಮಾಡಿದೆ.

ಫೆಬ್ರವರಿಯಲ್ಲಿ ಅಮೆರಿಕಾ 100 ಮಿಲಿಯನ್ ಡಾಲರ್ ಹಣವನ್ನು ನೀಡಿತ್ತು. ಈಗ ಹೊಸದಾಗಿ ಬಿಡುಗಡೆ ಮಾಡುವ ಹಣವೂ ಸೇರಿ 174 ಮಿಲಿಯನ್ ಡಾಲರ್ ಆಗಿದೆ. ಕೊರೊನಾ ವೈರಸ್‌ನಿಂದ ಹೆಚ್ಚು ತೊಂದರೆ ಅನುಭವಿಸುತ್ತಿರುವ ರಾಷ್ಟ್ರಗಳಿಗೆ ಈ ನೆರವು ನೀಡಲಾಗುತ್ತಿದೆ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಟ್‌ ತಿಳಿಸಿದ್ದಾರೆ.

ಅಮೆರಿಕ ಘೋಷಿಸಿದ ಹಣದಲ್ಲಿ ಭಾರತಕ್ಕೆ 2.9 ಮಿಲಿಯನ್ ಡಾಲರ್ ಸಿಗುತ್ತಿದೆ. ಇದನ್ನು ಪ್ರಯೋಗಾಲಯ ವ್ಯವಸ್ಥೆಗಳಿಗೆ, ತಾಂತ್ರಿಕ ತಜ್ಞರಿಗೆ, ಚಿಕಿತ್ಸೆಗೆ ಬಳಸುವಂತೆ ತಿಳಿಸಿದೆ.

ಈಗ ಬಿಡುಗಡೆ ಮಾಡಿರುವ ಹಣದಿಂದ ಹೆಚ್ಚಿನ ಆರೋಗ್ಯ ನೆರವು ಸಿಗುತ್ತದೆ ಎಂದು ಸ್ಟೇಟ್ ಡಿಪಾರ್ಟ್ಮೆಂಟ್ ಹೇಳಿದೆ.

ಈ ನೂತನ  ನೆರವು ಘೋಷಣೆ ಮಾಡಿರುವುದು ಜಾಗತಿಕ ಆರೋಗ್ಯ ನಾಯಕತ್ವದ ದಾಖಲೆಯನ್ನು ನಿರ್ಮಿಸುತ್ತದೆ. ದಶಕಗಳಿಂದ ಯುನೈಟೆಡ್ ಸ್ಟೇಟ್ಸ್ ಸಾರ್ವಜನಿಕ ಆರೋಗ್ಯದಲ್ಲಿ ದ್ವಿಪಕ್ಷೀಯ ನೆರವು ನೀಡುವ ವಿಶ್ವದ ಅತಿದೊಡ್ಡ ಪೂರೈಕೆದಾರ ರಾಷ್ಟ್ರವಾಗಿದೆ.

ಇದು ಆರೋಗ್ಯಕ್ಕೆ ನೀಡುತ್ತಿರುವ ನೆರವಿನಿಂದ ಲೆಕ್ಕವಿಲ್ಲದಷ್ಟು ಜೀವಗಳು ಉಳಿದಿವೆ ಎಂದು ಹೇಳುವುದರಲ್ಲಿ ಯಾವುದೇ ಸಂಶಯವಿಲ್ಲ. ಆರೋಗ್ಯ ಸಂಸ್ಥೆಗಳನ್ನು ನಿರ್ಮಿಸುವ ಜತೆಗೆ ಸಮುದಾಯಗಳು ಮತ್ತು ರಾಷ್ಟ್ರಗಳ ಸ್ಥಿರತೆಯನ್ನು ಉತ್ತೇಜಿಸಿದೆ ಎಂದು ಯುಎಸ್‌ಎಐಡಿ ಉಪ ಆಡಳಿತಾಧಿಕಾರಿ ಬೊನೀ ಗ್ಲಿಕ್ ತಿಳಿಸಿದ್ದಾರೆ.

ಭಾರತದಲ್ಲಿ 800ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಅಮೆರಿಕದಲ್ಲಿ ಒಂದು ಲಕ್ಷ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ನಡುವೆ ಮೂರನೇ ಹಂತವನ್ನು ತಲುಪಿರುವ ಕೊರೊನಾ ವೈರಸ್‌ ನಿಯಂತ್ರಣಕ್ಕೆ ಭಾರತ ಸೇರಿದಂತೆ ಎಲ್ಲಾ ರಾಷ್ಟ್ರಗಳು ಅತ್ಯಂತ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.

ಭಾರತದಲ್ಲಿ ಇಲ್ಲಿಯವರೆಗೂ ಸೋಂಕಿತರ ಪ್ರಮಾಣದ 910 ತಲುಪಿದು, ಇನ್ನೂ ಏರಿಕೆಯಾಗುತ್ತಿರುವುದನ್ನು ಎಲ್ಲರೂ ಗಮನಿಸುತ್ತಿದ್ದೇವೆ.  ಜತೆಗೆ 20 ಜನರು ಮೃತಪಟ್ಟಿದ್ದಾರೆ. ಅಂದರೆ ಇಂದು ಇಬ್ಬರು ಸಾವನ್ನಪ್ಪಿದ್ದಾರೆ.  ಆದ್ದರಿಂದ ಜನರು ಸಹ ಮುಂಜಾಗ್ರತೆ ವಹಿಸಿ ಆದಷ್ಟು ಮನೆಯಲ್ಲೇ ಕಾಲಕಳೆಯಬೇಕು ಎಂದು ಆರೋಗ್ಯ ಇಲಾಖೆ ಮತ್ತು ಪ್ರಧಾನಿಯವರು ಮನವಿ ಮಾಡುತ್ತಿದ್ದಾರೆ.

Leave a Reply

error: Content is protected !!
LATEST
ಸಾವಿರ ವರ್ಷಗಳ ಇತಿಹಾಸವಿರುವ ಈಶ್ವರ ದೇವಾಲಯ ಜೀರ್ಣೋದ್ಧಾರಕ್ಕೆ ಚಾಲನೆ: ನೇಮಿರಾಜ್ ಕೃಷಿ ಸಚಿವರ ತವರು ನೆಲದಲ್ಲೇ ಕೊಬ್ಬರಿ ಮಾರಿದ ರೈತರ ಪರದಾಟ : ರೈತ ಸಂಘ ಕಿಡಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಪಿಎಸ್ ಪಿಂಚಣಿಗಾರರ ಬೃಹತ್ ಪ್ರತಿಭಟನೆ- ಆಕ್ರೋಶ ಮಳೆ ನೀರ ನೇರವಾಗಿ ಒಳಚರಂಡಿಗೆ ಬಿಡುವವರ ವಿರುದ್ಧ ಜಲಮಂಡಳಿ ಕ್ರಮಕ್ಕೆ ಆಕ್ಷೇಪ: ಡಿಸಿಎಂ ಡಿಕೆಶಿಗೆ ಎಎಪಿ ಬಹಿರಂಗ ಪತ್ರ ಕಿಟಕಿ ಮೂಲಕ ನುಸುಳಿ ಹಣ ದೋಚುತ್ತಿದ್ದ ಖತರ್ನಾಕ್‌ ಅಕ್ಕ-ತಮ್ಮ ಅಂದರ್‌ KSRTC: ನೌಕರರ ಸಮಸ್ಯೆ ನೀಗಿಸುವ ಸಮರ್ಥ ಪಡೆಯೂ ಇಲ್ಲ ಸಮರ್ಥ ನಾಯಕನೂ ಇಲ್ಲ! ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ ಆರೋಪ ಮಹರ್ಷಿ ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ: ಸಚಿವ ನಾಗೇಂದ್ರ ಸ್ಪಷ್... ಪಿ.ಚಂದ್ರಶೇಖರನ್‌ ಆತ್ಮಹತ್ಯೆ ಪ್ರಕರಣ: ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವ ಮಂತ್ರಿಯ ಸಂಪುಟದಿಂದ ಕಿತ್ತುಹಾಕಿ: ಎಎಪಿ KKRTC: ಡಬಲ್ ಡ್ಯೂಟಿ, ದೂರದ ಪ್ರಯಾಣಕ್ಕೆ ವಿಶ್ರಾಂತಿ ಕಡ್ಡಾಯ ಆದರೆ ದೇವದುರ್ಗ ಘಟಕದ ನೌಕರರಿಗೆ ಮರೀಚಿಕೆ!