NEWSದೇಶ-ವಿದೇಶಸಂಸ್ಕೃತಿ

ಕೊರೊನಾ ನಿಯಂತ್ರಣದಲ್ಲಿ ಬೆಂಗಳೂರು-ತುಮಕೂರು ನಗರಗಳು ದೇಶಕ್ಕೇ ಮಾದರಿ

ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ ಅಗರ್ ವಾಲ್ ಹೇಳಿಕೆ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಕೋವಿಡ್ 19 ಸೋಂಕು ನಿಯಂತ್ರಣ ಕ್ರಮಗಳ ಅಂಗವಾಗಿ ಬೆಂಗಳೂರು ಮತ್ತು ತುಮಕೂರು ನಗರಗಳು ಮಾದರಿಯಾಗಿದ್ದು, ಸ್ಮಾರ್ಟ್ ಸಿಟಿ ಅಭಿಯಾನದಡಿ ಕ್ವಾರೆಂಟೇನ್ ನಲ್ಲಿರುವವರ ಮೇಲೆ ಕಣ್ಗಾವಲು ಹಾಕುವ, ಅವರ ಚಟುವಟಿಕೆಗಳನ್ನು ಸಮಗ್ರವಾಗಿ ಪರಿಶೀಲಿಸುವ ಸ್ಮಾರ್ಟ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ದೇಶಕ್ಕೆ ಮಾದರಿಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಲವ ಅಗರ್ ವಾಲ್ ಹೇಳಿದ್ದಾರೆ.

ನ್ಯೂಡೆಲ್ಲಿಯಲ್ಲಿ ಮಾತನಾಡುತ್ತಿದ್ದ ಅವರು ಸ್ಮಾರ್ಟ್ ಸಿಟಿ ಯೋಜನೆಗೆ ಒಳಪಡುವ ಸೂರತ್ ಮತ್ತು ಪುಣೆ ನಗರಗಳು ಸಹ ಇದೇ ತಂತ್ರಜ್ಞಾನವನ್ನು ಅಡಕಗೊಳಿಸಿಕೊಂಡಿವೆ. ಹೋಮ್ ಕ್ವಾರೆಂಟೇನ್ ನಲ್ಲಿರುವವರ ನಿರ್ವಹಣೆ, ನಿಗಾ, ಪತ್ತೆ ಹಚ್ಚುವ, ಮಾಹಿತಿ ಪ್ರಸರಣ, ತರಬೇತಿ ನೀಡುವ, ವಿಶ್ಲೇಷಣೆ ಮಾಡುವ, ಕೌನ್ಸಿಲಿಂಗ್ ಸೌಲಭ್ಯ ಮತ್ತಿತರ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ದಿಗ್ಭಂಧನದಲ್ಲಿರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಕೋವಿಡ್ 19 ಪ್ರಕರಣಗಳನ್ನು ದೇಶದಲ್ಲಿ ಮೂರು ಹಂತಗಳನ್ನಾಗಿ ವಿಂಗಡಿಸಲಾಗಿದೆ. ವಸತಿ ನಿಲಯಗಳು, ಕ್ರೀಡಾಂಗಣಗಳಂತಹ ಪ್ರದೇಶಗಳಲ್ಲಿ ಮೊದಲ ಹಂತದ ಪ್ರಕರಣಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಎರಡನೇ ಹಂತದ ಕೇಂದ್ರಗಳು ಸಂಪೂರ್ಣವಾಗಿ ಉನ್ನತ ಚಿಕಿತ್ಸೆಗೆ ಮೀಸಲಾಗಿದ್ದು, ಇದಕ್ಕಾಗಿ. ಆಸ್ಪತ್ರೆಗಳನ್ನು ಮೀಸಲಿಡಲಾಗಿದೆ. ತೀವ್ರ ಸಂಕಿರ್ಣ ಪರಿಸ್ಥಿತಿಯಲ್ಲಿರುವವರಿಗೆ ವೆಂಟಿಲೇಟರ್ ಸೇರಿದಂತೆ ಉನ್ನತ ತಂತ್ರಜ್ಞಾನದ ಮೂಲಕ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಲವ ಅಗರ್ ವಾಲ್ ಸ್ಪಷ್ಟಪಡಿಸಿದರು.

ಲಾಕ್ ಡೌನ್ ವಿಸ್ತರಣೆ ಮಾಡುವ ಕುರಿತಂತೆ  ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ

ದೇಶದಲ್ಲಿ ಏಪ್ರಿಲ್ 14 ರ ನಂತರ ಲಾಕ್ ಡೌನ್ ವಿಸ್ತರಣೆ ಮಾಡುವ ಕುರಿತಂತೆ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಖಚಿತ ಇಲ್ಲದೇ ಇರುವ ಸುದ್ದಿಗಳು ಪ್ರಸಾರವಾಗುತ್ತಿದ್ದು, ಇವುಗಳನ್ನು ಜನತೆ ನಂಬಬಾರರದು. ಯಾವುದೇ ಮಾಧ್ಯಮಗಳು ಊಹಾಪೋಹಗಳನ್ನು ಹರಡಬಾರದು ಎಂದರು.

ಸಾಮಾಜಿಕ ಅಂತರ ಮತ್ತು ಲಾಕ್ ಡೌನ್ ಬಗ್ಗೆ ಅಧ್ಯಯನ ಮಾಡಲಾಗಿದ್ದು, ಈ ಸಂಬಂಧ ಐಸಿಎಂಆರ್ ವರದಿ ಸಿದ್ಧಪಡಿಸಿದೆ. ಒಬ್ಬ ವ್ಯಕ್ತಿ 405 ಮಂದಿಗೆ ಸೋಂಕು ಹರಡುವ ಸಾಮರ್ಥ್ಯ ಹೊಂದಿರುತ್ತಾನೆ. ಹೀಗಾಗಿ ಸಾಮಾಜಿಕ ಅಂತರ ಸಾಮಾಜಿಕ ಲಸಿಕೆಯಾಗಿದೆ ಎಂದು ಲವ ಅಗರ್ ವಾಲ್ ಹೇಳಿದರು.

ಎನ್ 95 ಮಾಸ್ಕ್ ಗಳು ಸೇರಿದಂತೆ ವೈದ್ಯಕೀಯ ಪರಿಕರಗಳಿಗೆ ಗುಣಮಟ್ಟ ನಿಗದಿಪಡಿಸಿದ್ದು, ಯಾವುದೇ ದೇಶ, ಯಾವುದೇ ಭಾಗದಿಂದ ಇವುಗಳನ್ನು ಖರೀದಿ ಅಥವಾ ಆಮದು ಮಾಡಿಕೊಂಡರೂ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುವುದು ಎಂದರು.

ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಪುಣ್ಯ ಸಲಿಲ ಶ್ರೀವಾತ್ಸವ್ ಮಾತನಾಡಿ, ಲಾಕ್ ಡೌನ್ ಪಾಲನೆಗೆ ಎಲ್ಲರ ಸಹಕಾರ ಅಗತ್ಯವಾಗಿದ್ದು, ಟ್ರಕ್ ಗಳ ಮೂಲಕ ಔಷಧಗಳನ್ನು ಸಾಗಾಟ ಮಾಡಲಾಗುತ್ತಿದೆ. ಈವರೆಗೆ 152 ವಿಮಾನಗಳನ್ನು ಇದಕ್ಕಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಕಾಳಸಂತೆಕೋರರ ಸಮಸ್ಯೆ ನಿಯಂತ್ರಿಸುವಂತೆಯೂ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ ಎಂದರು.

ಐಸಿಎಂಆರ್ ನ ಪ್ರಧಾನ ವಿಜ್ಞಾನಿ ಡಾ. ಗಂಗಾ ಖೇಡ್ಕರ್ ಮಾತನಾಡಿ, ಸರ್ಕಾರಿ ಮತ್ತು ಖಾಸಗಿ ಪ್ರಯೋಗಾಲಯಗಳ ಮೂಲಕ ಒಂದು ಲಕ್ಷ ಮಾದರಿಗಳನ್ನು ಈವರೆಗೆ ಪರೀಕ್ಷೆಗಳನ್ನು ನಡೆಸಲಾಗಿದೆ. ಸೋಂಕು ಪತ್ತೆಗೆ ಖಾಸಗಿ ಮತ್ತು ಸಾರ್ವಜನಿಕ ವಲಯದಿಂದ ಹೆಚ್ಚು ಪ್ರಯೋಗಾಲಯಗಳನ್ನು ತೆರೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Leave a Reply

error: Content is protected !!
LATEST
ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಗೆ ಹರಿದು ಬಂತು ಕೋಟಿ ಕೋಟಿ ಹಣ