NEWSನಮ್ಮಜಿಲ್ಲೆ

ಕೊರೊನಾ ಪಾಸಿಟಿವ್‌ ವ್ಯಕ್ತಿ ಮನೆ ಸುತ್ತ  ನಿಷೇಧಿತ ಪ್ರದೇಶವೆಂದು ಘೋಷಣೆ

ವಿಜಯಪಥ ಸಮಗ್ರ ಸುದ್ದಿ

ದಾವಣಗೆರೆ:  ಮಾರ್ಚ್ 26ರಂದು ಪಾಸಿಟಿವ್ ಕೇಸ್ ವರದಿಯಾದ ರೋಗಿ-63ರ ವಾಸಸ್ಥಳ ಅಂದರೆ ಅವರ ಮನೆ (ನಿಜಲಿಂಗಪ್ಪ ಬಡಾವಣೆಯ) ಇರುವ ರಸ್ತೆಯನ್ನು ಒಳಗೊಂಡ ಭೌತಿಕ 100 ಮೀ. ಪರಿಧಿಯ ಇಡೀ ಪ್ರದೇಶವನ್ನು ನಿಯಂತ್ರಿತ ವಲಯವೆಂದು ಹಾಗೂ ಈ ವಲಯದ ಸುತ್ತ ಇರುವ ಪ್ರದೇಶ 5 ಕಿ.ಮೀ. ವ್ಯಾಪ್ತಿ ಪ್ರದೇಶವನ್ನು ಬಫರ್ ಜೋನ್ ಎಂದು ಘೋಷಿಸಲಾಗಿದೆ.

ಕೋವಿಡ್-19 ವೈರಸ್ ನಿಯಂತ್ರಣ ಕಾರ್ಯತಂತ್ರಗಳ ಸುಲಭ ಅನುಷ್ಠಾನಕ್ಕಾಗಿ ನಿಯಂತ್ರಿತ ವಲಯ, ಬಫರ್ ವಲಯಗಳನ್ನಾಗಿ ವಿಭಾಗಿಸಿ ಅವುಗಳ ನಿರ್ವಹಣೆಗಾಗಿ ಕಾರ್ಯತಂತ್ರ ರೂಪಿಸಲು ಸರ್ಕಾರ ಕ್ರಮ ಕೈಗೊಂಡಿದೆ.

ಈ ಮೇರೆಗೆ ಏ.17ರಂದು ನಿಗದಿಪಡಿಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ನಿಯಂತ್ರಿತ ವಲಯ (ನೋವೆಲ್ ಕೊರೊನಾ ವೈಸರ್-ಪಾಸಿಟಿವ್ ವ್ಯಕ್ತಿಯ ನಿವಾಸ ಇರುವ ಸುತ್ತಮುತ್ತಲಿನ ಪ್ರದೇಶ) ಪ್ರದೇಶದಲ್ಲಿ ವೈರಸ್ ಸೋಂಕು ಹರಡದಂತೆ ತೀವ್ರ ತರಹದ ಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕಾದ ಅಗತ್ಯವಿದೆ.

ಈ ಪ್ರದೇಶದಲ್ಲಿ ಹಿಂದಿನ ಬಾರಿ ಪಾಸಿಟಿವ್ ಪ್ರಕರಣ ವರದಿಯಾದ 28 ದಿನಗಳ ಅವಧಿಯಲ್ಲಿ ಯಾವುದೇ ಹೊಸ ಕೋವಿಡ್-19 ಪ್ರಕರಣ ಆ ಪ್ರದೇಶದಲ್ಲಿ ವರದಿಯಾಗಿರಬಾರದು ಅಥವಾ ನಿಯಂತ್ರಿತ ವಲಯದಲ್ಲಿ ಹತ್ತಕ್ಕಿಂತ ಕಡಿಮೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿರುವ ವ್ಯಕ್ತಿಗಳು ಸಕ್ರಿಯ ಗೃಹ ದಿಗ್ಭಂಧನಲ್ಲಿ ಇಡಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಘೋಷಣೆ ಮಾಡಲಾಗಿದೆ.

ಘಟನಾ ಕಮಾಂಡರ್ ನೇಮಕ

ಪ್ರತಿಯೊಂದು ನಿಯಂತ್ರಿತ ವಲಯಕ್ಕೆ ಒಬ್ಬ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಅಥವಾ ಒಂದನೇ ದರ್ಜೆಯ ಅಧಿಕಾರಿಗೆ ದಂಡಾಧಿಕಾರಿಯ ಅಧಿಕಾರಿಗಳನ್ನು ನೀಡಿ ಅವರನ್ನು ಘಟನಾ ನಿಯಂತ್ರಕನನ್ನಾಗಿ ನೇಮಿಸಬೇಕಾದ ಹಿನ್ನೆಲೆಯಲ್ಲಿ ಘಟನಾ ಕಮಾಂಡರ್ ಆಗಿ ದಾವಣಗೆರೆ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

Leave a Reply

error: Content is protected !!
LATEST
KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ