NEWSದೇಶ-ವಿದೇಶಸಿನಿಪಥ

ಕೊರೊನಾ ವಿರುದ್ಧದ ಸಮರಕ್ಕೆ ಹರಿದು ಬರುತ್ತಿದೆ ದೇಣಿಗೆ

ಈಗಾಗಲೇ ಪರಿಹಾರ ನಿಧಿಗೆ ಹರಿದು ಬಂತು 2.5 ಸಾವಿರ ಕೋಟಿ ರೂ.ಗೂ ಹೆಚ್ಚು ಹಣ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಕೊರೊನಾ ವೈರಸ್‌ ಬಾಧೆಯಿಂದ ತತ್ತರಿಸುತ್ತಿರುವ ಜನರು ಸೇರಿದಂತೆ ದೇಶದಲ್ಲಿ ಹಸಿವನ್ನು ತಣಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ದೇಣಿಗೆ ನೀಡುವ ಮನವಿಗೆ ಈಗಾಗಲೇ ಹಲವರು ಮುಂದಾಗಿ ತಮ್ಮ ಉದಾರ ಮನಸ್ಸಿನಿಂದ ದಾನ ಮಾಡಿದ್ದಾರೆ. ಮಾಡುತ್ತಲೂ ಇದ್ದಾರೆ.

ಅವರಲ್ಲಿ ಜೆಮ್‌ಶಟ್‌ಜಿ ರತನ್‌ಟಾಟಾ, ಹಿಂದಿ, ಕನ್ನಡ, ತೆಲುಗು ತಮಿಳು ಸೇರಿದಂತೆ ಎಲ್ಲಾ ಭಾಷೆಯ ಸಿನಿಮಾ ತಾರೆಯರು ದೇಣಿಗೆ ನೀಡಿದ್ದಾರೆ. ಅವರಲ್ಲಿ ನಮ್ಮ ಸ್ಯಾಂಡಲ್‌ವುಡ್‌ ತಾರೆಯರಾದ ಪುನೀತ್‌ ರಾಜ್‌ಕುಮಾರ್‌, ಡಾ.ಶಿವರಾಜ್‌ಕುಮಾರ್‌, ನಿಖಿಲ್‌ ಕುಮಾರಸ್ವಾಮಿ ಹೀಗೆ ಪಟ್ಟಿ ಬೆಳೆಯುತ್ತದೆ.

ಅದರಂತೆ ಸಾಮಾಜಿಕ ದತ್ತಿಗೆ ಹೆಸರಾಗಿರುವ ವಿಪ್ರೋ ಸಮೂಹ ಮತ್ತು ಅಜೀಂ ಪ್ರೇಮ್‌ಜೀ ಫೌಂಡೇಷನ್ ವತಿಯಿಂದ ಕೊರೋನಾ ವಿರುದ್ಧದ ಸಮರಕ್ಕೆ ಸಾವಿರ ಕೋಟಿ ರೂ. ನೆರವು ನೀಡಲಾಗುತ್ತಿದೆ.

ಇಂದು ದೇಶ ಅತ್ಯಂತ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದು ಅದನ್ನು ಹೋಗಲಾಡಿಸಲು ಎಲ್ಲರೂ ಸಹಕಾರ ಮನೋಭಾವಬನೆ ತಾಳಬೇಕು.  ಹೀಗಾಗಿ  ಫೌಂಡೇಷನ್‌ನಿಂದ 1125 ಕೋಟಿ ರೂ.ಗಳನ್ನು ಕೊರೋನಾ ವಿರುದ್ಧದ ಹೋರಾಟಕ್ಕೆ ಮಿಸಲಿಡುವುದಾಗಿ ಕಂಪನಿಯ ಮುಖ್ಯಸ್ಥರು ತಿಳಿಸಿದ್ದಾರೆ.

ದೇಶದಲ್ಲೇ ಅತಿದೊಡ್ಡ ಉದ್ದಿಮೆಗಳಾದ ಟಾಟಾ 1.5 ಸಾವಿರ ಕೋಟಿ ರೂ., ರಿಲಯನ್ಸ್ 500 ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿವೆ. ಇದರ ಬೆನ್ನಲ್ಲಿಯೇ ವಿಪ್ರೋ ಸಹ ತನ್ನ ಸಾಮಾಜಿಕ ಕಳಕಳಿ ಮೆರೆದಿರುವುದು ಶ್ಲಾಘನೀಯವೇ ಆದರೆ ಇವರು ಸೇರಿದಂತೆ ಲಕ್ಷಾಂತರ ಜನರು ನೀಡುವ ದೇಣಿಗೆ ನಿಜವಾಗಿರುವ ನೊಂದವರ ಕಣ್ಣೀರು ನೀಗಿಸುವಂತಾದರೆ ಅದು ಸಾರ್ಥಕತೆ ಪಡೆಯುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ಶ್ರಮಿಸಬೇಕು ಎಂಬುವುದು ದೇಶದ ಸಮಸ್ತೆ ಪ್ರಜೆಗಳ ಮನವಿಯಾಗಿದೆ.

ಅಂದಹಾಗೆ ಮೂರು ದಿನದ ಹಿಂದೆ ತೆರೆಯಲಾದ ವಿಶೇಷ ದೇಣಿಗೆ ಸಂಗ್ರಹದ ಪ್ರಧಾನಮಂತ್ರಿ ನಿಧಿಗೆ ಈಗಾಗಲೇ 2.5 ಸಾವಿರ ಕೋಟಿಗೂ ಹೆಚ್ಚು ಹಣ ಹರಿದು ಬಂದಿದೆ.

ಇನ್ನು ರಾಜ್ಯದಲ್ಲೂ ಅಪಾರ ಪ್ರಮಾಣದ ದೇಣಿಗೆ ಸಂಗ್ರಹವಾಗುತ್ತಿದ್ದು, ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ತಮ್ಮ ಒಂದು ವರ್ಷದ ಪೂರ್ಣವೇತನವನ್ನು ದೇಣಿಗೆಯಾಗಿ ನೀಡುವುದಾಗಿ ತಿಳಿಸಿದ್ದಾರೆ.

Leave a Reply

error: Content is protected !!
LATEST
ಭ್ರಷ್ಟಾಚಾರ, ಕಮಿಷನ್‌ ದಂಧೆ ನಿಲ್ಲಿಸಿದರೆ ಗ್ಯಾರಂಟಿ ಯೋಜನೆಗಳಿಗೂ ಕೊಟ್ಟು ಹಣ ಉಳಿಯುತ್ತದೆ : ಎಎಪಿ ಜೂ.24ರಂದು ಶಿವಮೊಗ್ಗದಲ್ಲಿ ರಾಷ್ಟ್ರ, ರಾಜ್ಯ ರೈತ ಮುಖಂಡರ ಸಮಾವೇಶ: ಕುರುಬೂರ್ ಶಾಂತಕುಮಾರ್ ಸಂತ್ರಸ್ತೆ ಅಪರಹರಣ ಪ್ರಕರಣ: ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ಮಂಜೂರು KSRTCಯಿಂದ 300ಕ್ಕೂ ಹೆಚ್ಚು ಹೊಸ ಮಾರ್ಗಗಳಲ್ಲಿ ಬಸ್‌ ಓಡಾಟ: ಸಚಿವ ರಾಮಲಿಂಗಾರೆಡ್ಡಿ BMTC: 50ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್​​ಗಳ ಚಾಲಕರಿಗೆ ಗೇಟ್‌ಪಾಸ್‌ ಅತ್ಯಾಚಾರ ಆರೋಪಿ ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣನ ಎಸ್‌ಐಟಿ ಕಸ್ಟಡಿ ಅಂತ್ಯ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ವಿರೋಧಿಸಿ ನಾಳೆ ರಾಜ್ಯಾದ್ಯಂತ ಎಎಪಿ ಪ್ರತಿಭಟನೆ ನಟ ದರ್ಶನ್‌ ಸ್ಥಿತಿಗೆ ಮರುಗಿ ಅಭಿಮಾನಿ ಅನ್ನನೀರು ಬಿಟ್ಟು ಆತ್ಮಹತ್ಯೆಗೆ ಶರಣು? KSRTC ‘ಅಶ್ವಮೇಧ’ಗಳಿಂದ ಸಂಸ್ಥೆಗೆ ಶೇ.10ಕ್ಕೂ ಹೆಚ್ಚು ಲಾಭ : ಸಚಿವ ರಾಮಲಿಂಗಾರೆಡ್ಡಿ ಅತೀ ಶೀಘ್ರದಲ್ಲೇ NWKRTC ಒಡಲು ಸೇರಲಿವೆ 350 ಹೊಸ ಎಲೆಕ್ಟ್ರಿಕ್​ ಬಸ್‌ಗಳು