NEWSದೇಶ-ವಿದೇಶ

ಕೊರೊನಾ ವೈರಸ್‌ ಕುರಿತು ಅಮೆರಿಕಕ್ಕೆ ತಿರುಗೇಟು ನೀಡಿದ ಚೀನಾ

ವಿಜಯಪಥ ಸಮಗ್ರ ಸುದ್ದಿ

ಬೀಜಿಂಗ್:‌ ಕೊರೊನಾ ವೈರಸ್ ಉಗಮದ ಕುರಿತಂತೆ ಅಮೆರಿಕ ಈವರೆಗೆ ಮಾಡಿರುವ ಎಲ್ಲ ಆರೋಪಿಗಳಿಗೆ ಚೀನಾ ಕಿರುಚಿತ್ರದ ಮೂಲಕ ವ್ಯಂಗ್ಯಭರಿತ ತಿರುಗೇಟು ನೀಡಿದೆ.

ಅನಿಮೇಷನ್‌ ತಂತ್ರಜ್ಞಾನದ ಮೂಲಕ ಚೀನಾ ʼಒನ್ಸ್ ಅಪಾನ್‌ ಎ ವೈರಸ್‌(Once upon a virus) ಹೆಸರಲ್ಲಿ ಒಂದೂವರೆ ನಿಮಿಷದ ಕಿರುಚಿತ್ರವನ್ನು ತಯಾರು ಮಾಡಿದೆ. ಮಾಸ್ಕ್‌ ಧರಿಸಿದ ಮಾನವನ ಆಕೃತಿ (ಚೀನಾ) ಮತ್ತು ಅಮೆರಿಕದ ಲಿಬರ್ಟಿ ಪ್ರತಿಮೆಯ ನಡುವೆ ಒಂದೂವರೆ ನಿಮಿಷಗಳ ಕಾಲ ಕುತೂಹಲಕಾ,ರಿ ಸಂಭಾಷಣೆ ನಡೆಯುತ್ತಿದೆ. ಈ  ಸಂಭಾಷಣೆ ಮೂಲಕ ಚೀನಾ ಅಮೆರಿಕದ ಎಲ್ಲ ಆರೋಪಗಳಿಗೆ ತಿರುಗೇಟು ನೀಡಿದೆ.

ಮಾಸ್ಕ್‌  ಧರಿಸಿದ ಆಕೃತಿ ಚೀನಾ ಡಿಸೆಂಬರ್‌ನಲ್ಲಿ ಮೊದಲಿಗೆ , ʼನಮಗೆ ಹೊಸ ವೈರಸ್‌ ಪತ್ತೆಯಾಗಿದೆ, ʼ  ಎಂದು ಹೇಳುತ್ತಿದೆ. ಅದಕ್ಕೆ ವಿಶ್ವ  ಆರೋಗ್ಯ ಸಂಸ್ಥೆಯು ಸಂದೇಶವನ್ನು ಗ್ರಹಿಸಿರುವುದಾಗಿ ಹೇಳುತ್ತಿದೆ. ಆದರೆ , ಮಾಸ್ಕ್‌ ಧರಿಸಿದ ಅಮೆರಿಕದ ಲಿಬರ್ಟಿ ಪ್ರತಿಮೆಯು ʼಅದಕೇನು?ʼ ಎಂದು ಉಪೇಕ್ಷೆ ಮಾಡಿ ಪ್ರಶ್ನೆ ಮಾಡುತ್ತದೆ. ಅದಕ್ಕೆ ಮಾನವನ ಆಕೃತಿಯು ಮಾಸ್ಕ್‌ ಧರಿಸುವಂತೆ ಸಲಹೆ ನೀಡುತ್ತಿದೆ. ಆದರೆ ಲಿಬರ್ಟಿ ಅದನ್ನು ಉಪೇಕ್ಷಿಸುತ್ತದೆ ಈ ರೀತಿಯ ಕಿರುಚಿತ್ರವನ್ನು ತಯಾರಿಸಿ ಚೀನಾ ಅಮೆರಿಕಕ್ಕೆ ತಿರುಗೇಟು ನೀಡಿದೆ.

Leave a Reply

error: Content is protected !!
LATEST
ಭ್ರಷ್ಟಾಚಾರ, ಕಮಿಷನ್‌ ದಂಧೆ ನಿಲ್ಲಿಸಿದರೆ ಗ್ಯಾರಂಟಿ ಯೋಜನೆಗಳಿಗೂ ಕೊಟ್ಟು ಹಣ ಉಳಿಯುತ್ತದೆ : ಎಎಪಿ ಜೂ.24ರಂದು ಶಿವಮೊಗ್ಗದಲ್ಲಿ ರಾಷ್ಟ್ರ, ರಾಜ್ಯ ರೈತ ಮುಖಂಡರ ಸಮಾವೇಶ: ಕುರುಬೂರ್ ಶಾಂತಕುಮಾರ್ ಸಂತ್ರಸ್ತೆ ಅಪರಹರಣ ಪ್ರಕರಣ: ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ಮಂಜೂರು KSRTCಯಿಂದ 300ಕ್ಕೂ ಹೆಚ್ಚು ಹೊಸ ಮಾರ್ಗಗಳಲ್ಲಿ ಬಸ್‌ ಓಡಾಟ: ಸಚಿವ ರಾಮಲಿಂಗಾರೆಡ್ಡಿ BMTC: 50ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್​​ಗಳ ಚಾಲಕರಿಗೆ ಗೇಟ್‌ಪಾಸ್‌ ಅತ್ಯಾಚಾರ ಆರೋಪಿ ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣನ ಎಸ್‌ಐಟಿ ಕಸ್ಟಡಿ ಅಂತ್ಯ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ವಿರೋಧಿಸಿ ನಾಳೆ ರಾಜ್ಯಾದ್ಯಂತ ಎಎಪಿ ಪ್ರತಿಭಟನೆ ನಟ ದರ್ಶನ್‌ ಸ್ಥಿತಿಗೆ ಮರುಗಿ ಅಭಿಮಾನಿ ಅನ್ನನೀರು ಬಿಟ್ಟು ಆತ್ಮಹತ್ಯೆಗೆ ಶರಣು? KSRTC ‘ಅಶ್ವಮೇಧ’ಗಳಿಂದ ಸಂಸ್ಥೆಗೆ ಶೇ.10ಕ್ಕೂ ಹೆಚ್ಚು ಲಾಭ : ಸಚಿವ ರಾಮಲಿಂಗಾರೆಡ್ಡಿ ಅತೀ ಶೀಘ್ರದಲ್ಲೇ NWKRTC ಒಡಲು ಸೇರಲಿವೆ 350 ಹೊಸ ಎಲೆಕ್ಟ್ರಿಕ್​ ಬಸ್‌ಗಳು