NEWSಆರೋಗ್ಯನಮ್ಮಜಿಲ್ಲೆ

ಕೊರೊನಾ ವೈರಸ್ ಭೀತಿ ಹಿನ್ನೆಲೆ- ಸರ್ಕಾರಿ ಸೇವೆ ಸ್ಥಗಿತ

ವಿಜಯಪಥ ಸಮಗ್ರ ಸುದ್ದಿ

ಉಡುಪಿ: ಕೊರೊನಾ ವೈರಾಣು ವ್ಯಕ್ತಿಗೆ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರದ ಹಲವು  ಸೇವೆಗಳನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.

ಸ್ಥಗಿತಗೊಂಡ ಸೇವೆಗಳು

ಏ.15 ರ ವರೆಗೆ ಸಿಂಧುತ್ವ ಹೊಂದಿರುವ ಕಲಿಕಾ ಚಾಲನಾ ಅನುಜ್ಞಾ ಪತ್ರಗಳ ಅಭ್ಯರ್ಥಿಗಳಿಗೆ ಮಾತ್ರ ವಾಹನಾ ಚಾಲನಾ ಅನುಜ್ಞಾ ಪತ್ರಗಳಿಗೆ ಪರೀಕ್ಷೆಗೆ ಹಾಜರಾಗಲು ಈ ನಿರ್ಬಂಧ ಅನ್ವಯಿಸುವುದಿಲ್ಲ.

ಕಂದಾಯ ಇಲಾಖೆ ಆಧಾರ್ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳು, ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನೀಡಲಾಗುತ್ತಿರುವ ಹೊಸ ವಾಹನ ಚಾಲನಾ ರಹದಾರಿ, ಕಲಿಯುವವರ ಪರವಾನಿಗೆ ನೋಂದಣಿ ಇಲ್ಲ.

ನಗರ, ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಪಂ ವ್ಯಾಪ್ತಿಗಳಲ್ಲಿ ಸಾರ್ವಜನಿಕ ಹರಾಜು, ಗ್ರಾಮಸಭೆ, ಇತರ ಲೈಸೆನ್ಸ್,  ಸಹಕಾರ ಇಲಾಖೆಗೆ ಸಂಬಂಧಿಸಿದ ಸೇವೆಗಳ (ಬ್ಯಾಂಕಿಂಗ್ ಹೊರತುಪಡಿಸಿ)ನ್ನು ನಿಲ್ಲಿಸಲಾಗಿದೆ.

ಕೃಷಿ, ತೋಟಗಾರಿಕೆ , ಮೀನುಗಾರಿಕೆ ಇಲಾಖೆಯ ವಿವಿಧ ಸೇವೆಗಳು (ರೈತ ಆತ್ಮಹತ್ಯೆ, ರೈತರ ಆಕಸ್ಮಿಕ ಮರಣಗಳು ಹಾಗೂ ಇತರೆ ತುರ್ತು ವಿಷಯಗಳನ್ನು ಹೊರತುಪಡಿಸಿ), ಸಮಾಜ ಕಲ್ಯಾಣ , ಅಲ್ಪ ಸಂಖ್ಯಾತರ  ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಅಧೀನದಲ್ಲಿ ಬರುವ ನಿಗಮ ಮಂಡಳಿಗಳ ಸೇವೆಗಳು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕನ್ನಡ -ಸಂಸ್ಕೃತಿ ಇಲಾಖೆ  ಸೇವೆಗಳು ಸ್ಥಗಿತಗೊಳ್ಳಲಿವೆ.

ಸ್ಥಗಿತದ ಆದೇಶ ಅನ್ವಯವಾಗದ ಸೇವೆಗಳು

ಬ್ಯಾಂಕ್, ಅಂಚೆಕಚೇರಿ, ಪೊಲೀಸ್ ಸೇವೆಗಳು, ಅಗ್ನಿಶಾಮಕ ಸೇವೆಗಳು, ದೂರವಾಣಿ ಸೇವೆಗಳು, ಇಂಟರ್ನೆಗಟ್ ಸೇವೆಗಳು, ಕೆ.ಎಸ್.ಆರ್.ಟಿ.ಸಿ, ಸಾರಿಗೆ ಸೇವೆಗಳು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸೇವೆಗಳು. ಸ್ವಚ್ಛತಾ ಕಾರ್ಯ, ಕುಡಿಯುವ ನೀರು, ವಿದ್ಯುತ್‌  ಪೂರೈಕೆ, ಒಳಚರಂಡಿ ವ್ಯವಸ್ಥೆ, ಅಂಗಡಿಗಳು, ಆಸ್ಪತ್ರೆ , ಔಷಧಿ ಅಂಗಡಿಗಳು, ಶವ ಸಂಸ್ಕಾರ ಇತ್ಯಾದಿ ಸೇವೆಗಳು ಹಾಗೂ ತುರ್ತು ಸೇವೆಗಳಿಗೆ ಸ್ಥಗಿತದ ಆದೇಶವು ಅನ್ವಯವಾಗುವುದಿಲ್ಲ.

ಈ ಸೇವೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದರೂ ಸಹ ಸದರಿ ಕಚೇರಿಗಳಿಗೆ ರಜೆ   ಘೋಷಣೆ ಮಾಡಿಲ್ಲ ಹಾಗೂ ಸಂಬಂಧಿಸಿದ ಎಲ್ಲಾ ಅಧಿಕಾರಿ / ಸಿಬ್ಬಂದಿ ವರ್ಗದವರು ಎಂದಿನಂತೆ ಕಚೇರಿಯಲ್ಲಿ ಲಭ್ಯ ಇರಬೇಕು. ಅನಧೀಕೃತ ಗೈರು ಹಾಜರಿ ಅಥವಾ ಕಚೇರಿಯನ್ನು ತೆರೆಯದಿದ್ದಲ್ಲಿ ಅಧಿಕಾರಿ/ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

ಆದೇಶದ ಅನ್ವಯ ಸರ್ಕಾರದ ಸೇವೆಗಳನ್ನು ಒದಗಿಸುವ ಕಚೇರಿ,  ಕೇಂದ್ರಗಳಲ್ಲಿ ಸೇವೆಗಳನ್ನು ಒದಗಿಸದ ಕಾರಣ ಯಾವುದೇ ಸರ್ಕಾರಿ, ಖಾಸಗಿ, ನಿಗಮ ಮಂಡಳಿಗಳು ಯಾವುದೇ ವ್ಯಕ್ತಿಯ ದಾಖಲಾತಿಗಳನ್ನು ಹಾಜರುಪಡಿಸದ ಕಾರಣದಿಂದ ಅಂತಹ ವ್ಯಕ್ತಿಗೆ ವ್ಯತಿರಿಕ್ತವಾಗುವ ರೀತ್ಯಾ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದಲ್ಲ ಹಾಗೂ ಅಂತಹ ದಾಖಲಾತಿಯನ್ನು ಹಾಜರುಪಡಿಸಲು ಸಾಕಷ್ಟು ಕಾಲಾವಕಾಶ ನೀಡಬೇಕು.

ಸರ್ಕಾರಿ ಕಚೇರಿಗಳಿಗೆ (ಜಿಲ್ಲಾಧಿಕಾರಿಗಳು,  ಉಪವಿಭಾಗಾಧಿಕಾರಿ, ತಹಸೀಲ್ದಾರ್‌, ಸ್ಥಳೀಯ ಸಂಸ್ಥೆಗಳು,  ಇತರೆ ಕಚೇರಿಗಳು ಸೇರಿದಂತೆ) ಅಥವಾ ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕರು ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿದ್ದು, ಈ ನಿರ್ಬಂಧ ತುರ್ತು ಸಂದರ್ಭದಲ್ಲಿ ಹಾಗೂ ತುರ್ತು ವಿಷಯಗಳಿಗೆ ಅನ್ವಯವಾಗುವುದಿಲ್ಲ.

ಮೇಲ್ಕಂಡ ಸೇವೆಗಳಲ್ಲಿ ಸರ್ಕಾರ ಹಾಗೂ ನ್ಯಾಯಾಲಯಗಳಿಗೆ ಸಂಬಂಧಿಸಿದ ಪ್ರಕರಣಗಳು ಮತ್ತು ಅತಿ ತುರ್ತು ಪ್ರಕರಣಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!
LATEST
ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಕೆಡವಿ ಮಾಲ್ ಕಟ್ಟುವ ಬಿಡಿಎ ನಿರ್ಧಾರಕ್ಕೆ ಎಎಪಿ ವಿರೋಧ ಜೈಲಲ್ಲೇ ದೇವರಾಜೇಗೌಡರ ಜೀವಕ್ಕೆ ಅಪಾಯವಿದೆ : ಸುರೇಶಗೌಡ ಆತಂಕ KSRTC ಬಸ್‌- ಕಾರು ನಡುವೆ ಭೀಕರ ಅಪಘಾತ: ಕಾರು ಚಾಲಕ ಸಾವು, ನಾಲ್ವರ ಸ್ಥಿತಿ ಗಂಭೀರ ಜಿಆರ್ ಫಾರ್ಮ್ ಹೌಸ್‌ನಲ್ಲಿ ರೇವ್​ ಪಾರ್ಟಿ: ನಟಿಯರು ಸೇರಿ 80ಕ್ಕೂ ಹೆಚ್ಚು ಬಂಧನ KSRTC: ಹೆದ್ದಾರಿಯಲ್ಲಿ ಕೆಟ್ಟುನಿಂತ ಬಸ್‌ಗಳು - ಕಿಮೀ ವರೆಗೆ ಟ್ರಾಫಿಕ್ ಜಾಮ್ KSRTC: ₹185 ಟಿಕೆಟ್‌ ಕೊಟ್ಟು ₹200 ಕೇಳಿದ ಕಂಡಕ್ಟರ್‌ - ದೂರು ಕೊಟ್ಟ ಪ್ರಯಾಣಿಕ ಧೈರ್ಯವಿದ್ದರೆ ಎಎಪಿ ಮುಖಂಡರೆಲ್ಲರನ್ನೂ ಜೈಲಿಗೆ ಹಾಕಿ: ಪ್ರಧಾನಿ ಮೋದಿಗೆ ಪೃಥ್ವಿ ರೆಡ್ಡಿ ಸವಾಲು ಪತ್ನಿ, ಮಗನಿಗೆ ಮಾಸಿಕ ಜೀವನಾಂಶ ಪಾವತಿಸದ ಪತಿ ಆಸ್ತಿ ಮುಟ್ಟುಗೋಲು: ಹೈಕೋರ್ಟ್ ಮಹತ್ವದ ಆದೇಶ ಬೆಳ್ಳಂಬೆಳಗ್ಗೆ ಸರಣಿ ಅಪಘಾತ: ಕಾರು ನಜ್ಜುಗುಜ್ಜು - ಪ್ರಯಾಣಿಕರು ಸೇಫ್ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ:‌ ಶೇ.25.5 ವೇತನ ಹೆಚ್ಚಳ ಬಹುತೇಕ ಖಚಿತ