ಆರೋಗ್ಯನಮ್ಮಜಿಲ್ಲೆ

ಕೋವಿಡ್-19 ಹತೋಟಿಗೆ ಬಿಬಿಎಂಪಿ ಹರಸಾಹಸ

ಬೆಂಗಳೂರು ಶುಚಿತ್ವಕ್ಕೆ ಸೋಂಕು ನಿವಾರಕ ಔಷಧ ಸಿಂಪಡಣೆ l ತರಕಾರಿ ಮಾರಾಟಕ್ಕೆ ಕ್ರಮ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಗರದಲ್ಲಿ ಕೊರೊನಾ ವೈರೆಸ್ ಸೋಂಕು ಮತ್ತು ಸಾಂಕ್ರಾಮಿಕ ರೋಗಗಳು ಹರಡದಂತೆ ಪಾಲಿಕೆಯು ಈಗಾಗಲೇ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಪಾಲಿಕೆ ಎಲ್ಲಾ ವಾರ್ಡ್ಗಳಲ್ಲಿ ಜಟ್ಟಿಂಗ್ ಯಂತ್ರ, ಅಗ್ನಿಶಾಮಕ ವಾಹನ ಹಾಗೂ ದ್ವಿಚಕ್ರ ವಾಹನ, ಟ್ರ್ಯಾಕ್ಟರ್‌ಗಳಲ್ಲಿ ಡ್ರಮ್‌ಗಳನ್ನಿಟ್ಟು, ಟ್ಯಾಂಕರ್, ಡ್ರೋನ್ ಹಾಗೂ ಸಿಬ್ಬಂದಿ ಸಹಯೋಗದಲ್ಲಿ ಸೋಂಕು ಸಿವಾರಕ ಸಿಂಪಡಣೆ ಮಾಡಲಾಗುತ್ತಿದೆ. ಸೋಂಕು ನಿವಾರಕ ಸಿಂಪಡಿಸಲು ಹೊಸದಾಗಿ 400 ಪವರ್ ಸ್ಪ್ರೇಯರ್ ಯಂತ್ರ ಹಾಗೂ 19 ಮಿಸ್ ಬ್ಲೋವರ್ ಯಂತ್ರಗಳನ್ನು ಕರೀದಿಸಲು ಕ್ರಮವಹಸಿಲಾಗಿದೆ. ಜತೆಗೆ ಸೊಳ್ಳೆಗಳ ನಿಯಂತ್ರಣಕ್ಕೆ ಪಾಗಿಂಗ್ ಕೂಡಾ ಮಾಡಲಾಗುತ್ತಿದೆ.

ನಗರಾದ್ಯಂತ ಸ್ವಚ್ಛತಾ ಕಾರ್ಯ

ನಗರದ ಪ್ರಮುಖ ರಸ್ತೆಗಳನ್ನು ಸ್ವಚ್ಛವಾಗಿಡುವ ಉದ್ದೇಶದಿಂದ ಕಸ ಗುಡಿಸುವ ಯಂತ್ರಗಳ ಮೂಲಕ ಶುಚಿತ್ವ ಕಾಪಾಡಲಾಗುತ್ತಿದೆ. ಕೆ.ಆರ್.ಮಾರುಕಟ್ಟೆ ಪ್ರದೇಶದಲ್ಲಿದ್ದ ಸಂಪೂರ್ಣ ಕಸ, ಕಟ್ಟಡ ತ್ಯಾಜ್ಯವನ್ನು ತೆರವುಗಳಿಸಲಾಗಿದೆ. ಮಾರುಕಟ್ಟೆ ಬಳಿಯ ಮೇಲ್ಸೇತುವೆ ಕೆಳಭಾಗದಲ್ಲಿದ್ದ ತ್ಯಾಜ್ಯವನ್ನೆಲ್ಲಾ ತೆರವುಮಾಡಿ ಬ್ಲೀಚಿಂಗ್ ಪುಡಿ ಹಾಕಿ ಸ್ವಚ್ಛಗೊಳಿಸಲಾಗಿದೆ.

ಸೇವಾ ಕೇಂದ್ರ ಹಾಗೂ ನಿರಾಶ್ರಿತರಿಗೆ ಆಶ್ರಯ

ನಾಗರಿಕರಿಗೆ ಅಗತ್ಯ ಸೇವೆಗಳನ್ನು ಕಲ್ಪಿಸುವ ಉದ್ದೇಶದಿಂದ ಹಾಗೂ ಕೊರೊನಾ ವೈರೆಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿದೆ. ಪಾಲಿಕೆ ನಡೆಸುತ್ತಿರುವ 9 ನಿರಾಶ್ರಿತ ಕೇಂದ್ರಗ(ಪಶ್ಚಿಮ ವಲಯ – ಗೂಡ್ ಶೆಡ್ ರಸ್ತೆಯಲ್ಲಿ 2 ಕೇಂದ್ರ, ರಾಜಾಜಿನಗರದ ರಾಮಮಂದಿರ ಬಳಿ ಹಾಗೂ ಉಪ್ಪಾರ ಪೇಟೆ ಬಳಿ,  ಪೂರ್ವ ವಲಯ – ಮರ್ಫಿಟೌನ್ ಮಾರುಕಟ್ಟೆ ಬಳಿ, ಮಹದೇವಪುರ ವಲಯ – ಊಡಿ ಬಳಿ, ಯಲಹಂಕ ವಲಯ – ಬಾಗಲೂರು ಬಳಿ, ಬೊಮ್ಮನಹಳ್ಳಿ ವಲಯ – ಜಂಬೂ ಸವಾರಿ ದಿಣ್ಣೆ ಬಳಿ, ದಾಸರಹಳ್ಳಿ ವಲಯ – ತುಮಕೂರು ಮುಖ್ಯರಸ್ತೆ) ಳಲ್ಲಿ 380 ನಿರಾಶ್ರಿತರಿಗೆ ಊಟದ ವ್ಯವಸ್ಥೆ ಮಡಲಾಗಿದ್ದು, ಆರೋಗ್ಯ ತಪಾಸಣೆ ಕೂಡ ನಡೆಸಲಾಗುತ್ತಿದೆ.

ಇಂದಿರಾ ಕ್ಯಾಂಟೀನ್ ಮೂಲಕ ಆಹಾರ ಪೊಟ್ಟಣ ಪೂರೈಕೆ

ಜೀವನೋಪಾಯಕ್ಕಾಗಿ ದೈನಂದಿನ ಆದಾಯದ ಮೇಲೆ ಅವಲಂಬಿತರಾಗಿರುವ ಹಾಗೂ ಬಡವರ್ಗದ ಜನರಿಗೆ 91 ಕ್ಯಾಂಟೀನ್‌ಗಳ ಮೂಲಕ ಉಚಿತವಾಗಿ ಊಟದ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ.

ಮೈದಾನಗಳಲ್ಲಿ ತಾತ್ಕಾಲಿಕ ಮಾರುಕಟ್ಟೆ ವ್ಯವಸ್ಥೆ

ವ್ಯಕ್ತಿ ವ್ಯಕ್ತಿಗಳ ನಡುವೆ ಕನಿಷ್ಟ ಅಂತರ(1 ಮೀಟರ್) ಕಾಯ್ದುಕೊಳ್ಳಬೇಕಿರುವುದರಿಂದ, ತಾತ್ಕಾಲಿಕವಾಗಿ ಮಾರುಕಟ್ಟೆಗಳಲ್ಲಿ ತರಕಾರಿ ಮಾರಾಟ ಮಾಡದೆ.

ಮೈದಾನಗಳಲ್ಲಿ ತರಕಾರಿ ಮಾರಾಟ ಮಾಡಲು ಕ್ರಮವಹಿಸಲಾಗುತ್ತಿದ್ದು, ಈಗಾಗಲೇ ವಲಯವಾರು ಮೈದಾನಗಳನ್ನು ಗುರುತಿಸಲಾಗಿದೆ. ಅದರಂತೆ, ದಕ್ಷಿಣ ವಲಯದಲ್ಲಿ ಕಲಾಸಿಪಾಳ್ಯ ಮಾರುಕಟ್ಟೆಯನ್ನು ನ್ಯಾಷನಲ್ ಆಟದ ಮೈದಾನಕ್ಕೆ, ಸಾರಕ್ಕಿ ಮಾರುಕಟ್ಟೆಯನ್ನು ಜರಗನಹಳ್ಳಿ ಮೈದಾನಕ್ಕೆ, ಪೂರ್ವ ವಲಯದಲ್ಲಿ ಪುಲಕೇಶಿ ನಗರದಲ್ಲಿ ಎರಡು ಮೈದಾನಗಳನ್ನು ಗುರುತಿಸಲಾಗಿದೆ.

ಪಶ್ಚಿಮ ವಲಯದಲ್ಲಿ ಸ್ವಾಮಿ ವಿವೇಕಾನಂದ ಮೈದಾನಗಳಲ್ಲಿ ತರಕಾರಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಮೈದಾನಗಳಲ್ಲಿ ವ್ಯಕ್ತಿ-ವ್ಯಕ್ತಿ ನಡುವೆ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಮಾರ್ಕಿಂಗ್ ಮಾಡಲಾಗುತ್ತಿದೆ. ಅಲ್ಲದೆ ಅವಶ್ಯಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಮೈದಾನಗಳಲ್ಲಿ ತರಕಾರಿ ಮಾರಾಟ ಪ್ರಾರಂಭವಾಗಲಿದೆ. ಇದಲ್ಲದೆ ದಿನಸಿ ಮಾರಾಟ ಮಾಡುವ ಮಳಿಗೆಗಳಲ್ಲೂ ಮಾರ್ಕಿಂಗ್ ಮಾಡಿ ಮಾರಾಟ ಮಾಡುವಂತೆ ಸೂಚನೆ ನೀಡಲಾಗಿರುತ್ತದೆ.

ಫೀವರ್ ಕ್ಲೀನಿಕ್ ಮಾಡಲು ಕ್ರಮ

ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸುವ ನಿಟ್ಟಿನಲ್ಲಿ, ಜ್ವರ ಪ್ರಕರಣ(ಫೀವರ್ ಕ್ಲೀನಿಕ್)ಗಳನ್ನು ತಪಾಸಣೆ ನಡೆಸಲು ಕ್ರಮವಹಿಸಲಾಗಿದೆ.  ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಐ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಎಲ್ಲಾ ಜ್ವರ ಪ್ರಕರಣಗಳನ್ನು ತಪಾಸಣೆ ನಡೆಸಿ, ಸೂಕ್ತ ಚಿಕಿತ್ಸೆ ನೀಡಲು ಕ್ರಮವಹಿಸಲಾಗಿರುತ್ತದೆ.

ಕೊರೊನಾ ವೈರೆಸ್ ಸೋಂಕಿನಿಂದ ಉಂಟಾಗಬಹುದಾದ ಪರಿಸ್ಥಿತಿ ಹಿನ್ನೆಲೆಯಲ್ಲಿ ಹಲವು ಕರ್ತವ್ಯಗಳನ್ನು ನಿಭಾಯಿಸಲು ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ವಲಯಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.

Leave a Reply

error: Content is protected !!
LATEST
ಅತಿಯಾಗಿ ಲೈಂಗಿಕ ಕ್ರಿಯೆಗೆ ಪೀಡಿಸಿದ್ದರಿಂದ ಒಂಟಿ ಮಹಿಳೆಯ ಕೊಲೆ: ಹತ್ಯೆ ರಹಸ್ಯ ಬೇಧಿಸಿದ ಪೊಲೀಸರು ಆಗಸದಲ್ಲೇ ಡಿಕ್ಕಿ ಹೊಡೆದುಕೊಂಡ ನೌಕಾಪಡೆಯ 2 ಹೆಲಿಕಾಪ್ಟರ್‌ಗಳು ನೋಡ ನೋಡುತ್ತಿದ್ದಂತೆ ಪತನ: 10 ಮಂದಿ ಮೃತ KSRTC: ಸಾರಿಗೆ ನಿಗಮಗಳ ಖಾಸಗೀಕರಣಕ್ಕೆ ಅವಕಾಶ ನೀಡುತ್ತಿದೆ ಕೇಂದ್ರ ಬೃಹತ್‌ ಕೈಗಾರಿಕಾ ಸಚಿವಾಲಯ KSRTC: ಏಪ್ರಿಲ್‌-ಜೂನ್‌ ಪೀಕ್‌ ಸೀಸನ್‌ ಎಂದು ಚಾಲನಾ ಸಿಬ್ಬಂದಿಗಳಿಗೆ ರಜೆ ಕೊಡದೆ ಹಿಂಸಿಸುತ್ತಿರುವ ಅಧಿಕಾರಿಗಳು..! ಬಿಜೆಪಿ ರಾಜಕೀಯ ಲಾಭಕ್ಕೆ ನೇಹಾ ಪ್ರಕರಣ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಚಾರ: ಜಗದೀಶ್ ವಿ. ಸದಂ IVRS, ಬಲ್ಕ್ SMS ಮೂಲಕ ಮತದಾರರಿಗೆ ಮೊಬೈಲ್‌ ಸಂದೇಶ: ತುಷಾರ್ ಗಿರಿನಾಥ್ KSRTC: ವೇತನ ಸಮಸ್ಯೆ ಪರಿಹರಿಸದೆ ಅಸಡ್ಡೆ ತೋರಲು ಇವರು ಕಾರಣಗಳು....!? ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳು ಜನರ ವಂಚಿಸುವ ಮಂತ್ರ ದಂಡಗಳು : ಕುರುಬೂರ್‌ ಶಾಂತಕುಮಾರ್‌ 'ನಮ್ಮ ನಡೆ ಮತಗಟ್ಟೆಯ ಕಡೆ' ಜಾಗೃತಿ ಜಾಥಾಗೆ ಮನೋಜ್ ಕುಮಾರ್ ಮೀನಾ, ತುಷಾರ್ ಗಿರಿನಾಥ್ ಚಾಲನೆ ಕೊಡಗು: ಹುಲಿದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ