CrimeNEWSನಮ್ಮರಾಜ್ಯ

ಜೈಲು ಸೇರಿದ ಕೆಎಸ್‌ಆರ್‌ಟಿಸಿ ಚಾಲಕ – ಬೀದಿಗೆ ಬಿದ್ದ ಕುಟುಂಬದ ದಯನೀಯ ಸ್ಥಿತಿ ಕಂಡು ಕಣ್ಣೀರಿಟ್ಟ ವಕೀಲರು

ವಿಜಯಪಥ ಸಮಗ್ರ ಸುದ್ದಿ
  • ಚಾಲಕನಿಗೆ ಆಗಿರುವ ಅನ್ಯಾಯದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಹಾಕಲು ಮುಂದಾದ ವಕೀಲ ಶಿವರಾಜು

ಮಡಿಕೇರಿ: ಆಕಸ್ಮಿಕವಾಗಿ ಕೆಎಸ್‌ಆರ್‌ಟಿಸಿ ಮಡಿಕೇರಿ ಡಿಪೋಗೆ ಸೇರಿದ ಬಸ್‌ ಮತ್ತು ಕಾರಿನ ನಡುವೆ 2010ರಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ ವ್ಯಕ್ತಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಡಿಪೋ ಚಾಲಕ ಈರಣ್ಣ ಭದ್ರಗೊಂಡ ಅವರಿಗೆ ಒಂದು ಸಾವಿರ ರೂ.ದಂಡ ಮತ್ತು 6 ತಿಂಗಳು ಜೈಲು ಶಿಕ್ಷೆಯಾಗಿದೆ. ಆದರೆ, ಈ ಶಿಕ್ಷೆ ಬಗ್ಗೆ ಸ್ವತಃ ಚಾಲಕನಿಗೆ ಗೊತ್ತೇಯಿಲ್ಲ.

ಈ ನಡುವೆ ಅಪಘಾತ ಬಳಿಕ ಚಾಲಕನನ್ನು ಮಡಿಕೇರಿ ಡಿಪೋನಿಂದ ಎಚ್‌.ಡಿ.ಕೋಟೆ ಡಿಪೋಗೆ ವರ್ಗಾವಣೆ ಮಾಡಿದ್ದು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಚಾಲಕನ ವಿರುದ್ಧ ತೀರ್ಪು ಬಂದಿದ್ದು, ಅದು ಕೂಡ ತಡವಾಗಿ ಚಾಲಕನಿಗೆ ಗೊತ್ತಾಗಿದೆ.

ಆ ಬಳಿಕ ಚಾಲಕ ಜಿಲ್ಲಾ ನ್ಯಾಯಾಲಯದ ಮೊರೆ ಹೋಗುತ್ತಾರೆ, ಜಿಲ್ಲಾ ನ್ಯಾಯಾಲಯದಲ್ಲೂ ಚಾಲಕನ ವಿರುದ್ಧವೆ ತೀರ್ಪು ಬರುತ್ತದೆ ಮತ್ತೆ ಅದನ್ನು ಪ್ರಶ್ನಿಸಿ ಕರ್ನಾಟಕ ಹೈ ಕೋರ್ಟ್‌ ಮೊರೆ ಹೋಗುತ್ತಾರೆ, ಹೈ ಕೋರ್ಟ್‌ನಲ್ಲೂ ಕೂಡ ಚಾಲಕನ ವಿರುದ್ಧವೇ ತೀರ್ಪು ಬಂದಿದ್ದು, ಆ ಚಾಲಕ ಕಳೆದ ಮೂರು ತಿಂಗಳಿನಿಂದ ಮಡಿಕೆ ಜಿಲ್ಲಾ ಕಾರಗೃಹದಲ್ಲಿ ಶಿಕ್ಷ ಅನುಭವಿಸುತ್ತಿದ್ದಾರೆ.

ಇಷ್ಟಾದರೂ ಅಧಿಕಾರಿಗಳು ಈ ಚಾಲಕನ ಬಗ್ಗೆ ಯಾವುದೇ ತಲೆ ಕೆಡಿಸಿಕೊಂಡಿಲ್ಲ. ಆಕಸ್ಮಿಕವಾಗಿ ಆಗಿರುವ ಅಪಘಾತಕ್ಕೆ ಚಾಲಕನನ್ನ ಹೊಣೆಗಾರನನ್ನಾಗಿ ಮಾಡಿ ಏನು ಕಾಣದಂತೆ ಅಧಿಕಾರಿಗಳು ನಡೆದುಕೊಂಡಿದ್ದಾರೆ. ಇನ್ನು ಮನಕಲಕುವ ವಿಚಾರ ವೆಂದರೆ, ಅಪಘಾತದ ಬಳಿಕ ಚಾಲಕನಿಗೆ ಸಮನ್ಸ್‌ ಕೂಡ ಬಂದಿದೆ, ಆದರೆ ಅದಾವುದು ಕೂಡ ಚಾಲಕನ ಗಮನಕ್ಕೇ ತಂದಿಲ್ಲ ಸಾರಿಗೆ ಸಂಸ್ಥೆಯ ಅಧಿಕಾರಿಗಳು.

ಇನ್ನು ಆತಂಕದ ವಿಷಯ ಎಂದರೆ ನೈಟ್‌ ಡ್ಯೂಟಿ ಮಾಡಿಕೊಂಡು ಬೆಳಗ್ಗೆ 6ಗಂಟೆಗೆ ಡಿಪೋಗೆ ಬಂದಿದ್ದ ಚಾಲಕನನ್ನು ಮತ್ತೆ ಬೆಳಗ್ಗೆ 10ಗಂಟೆಗೆ ಡ್ಯೂಟಿ ಮೇಲೆ ಕಳುಹಿಸಿದ್ದಾರೆ. ರಾತ್ರಿ ಪೂರ ನಿದ್ದೆಗೆಟ್ಟು ಬಸ್‌ ಓಡಿಸಿಕೊಂಡು ಬಂದಿದ್ದ ಚಾಲಕನಿಗೆ ನಿದ್ದೆ ಮಾಡುವುದಕ್ಕೂ, ವಿಶ್ರಾಂತಿ ಪಡೆಯುವುದಕ್ಕೂ ಬಿಡದೆ ಮತ್ತೆ ಡ್ಯೂಟಿಕೊಟ್ಟು ಈ ಅಪಘಾತಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಾದ ಸಂಸ್ಥೆಯ ಎಂಡಿ ಸಹೇಬರ್‌ ಈವರೆಗೂ ಮೌನವಾಗಿರುವುದು ಏಕೆ ಎಂಬ ಪ್ರಶ್ನೆ ಕಾಡುತ್ತಿದೆ.

ಇದು ಕಳೆದ 2010ರಲ್ಲಿ ಮಡಿಕೇರಿಯಿಂದ 2 ಕಿ.ಮೀ ದೂರದಲ್ಲಿ ನಡೆದ ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಕಾರು ಅಪಘಾತದ ಪ್ರಕರಣವಾಗಿದ್ದು, ಈ ಪ್ರಕರಣವನ್ನು ಕೈಗೆತ್ತಿಕೊಂಡ ಜೆಎಂಎಫ್‌ಸಿ ನ್ಯಾಯಾಲಯ ಚಾಲಕನನ್ನು ಅಪರಾಧಿ ಎಂದು ತೀರ್ಪು ನೀಡಿತ್ತು. ಆ ಬಳಿಕ ಚಾಲಕ ಕ್ರಮಿನಲ್‌ ಅಪಿಲ್‌ (15/2011) ಹಾಕಿ 2011ರಲ್ಲಿ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರೂ, ಜಿಲ್ಲಾ ನ್ಯಾಯಾಲಯದಲ್ಲೂ ಚಾಲಕ ಈರಣ್ಣ ಭದ್ರಗೊಂಡ ಅವರ ವಿರುದ್ಧವೆ ತೀರ್ಪು ಬಂದಿತು. ಆ ಬಳಿಕ ಹೈ ಕೋರ್ಟ್‌ ಮೊರೆ ಹೋಗುತ್ತಾರೆ ಅಲ್ಲಿಯೂ ಚಾಲಕ ಈರಣ್ಣ ಭದ್ರಗೊಂಡ ವಿರುದ್ಧವೇ ತೀರ್ಪು ಬಂದಿದೆ.

ಹೈ ಕೋರ್ಟ್‌ ತೀರ್ಪಿನ ಬಗ್ಗೆ ಏನು ಗೊತ್ತಿರದೆ ತಮ್ಮ ಪಾಡಿಗೆ ಡ್ಯೂಟಿ ಮಾಡುತ್ತಿದ್ದ ಚಾಲಕ ಈರಣ್ಣ ಭದ್ರಗೊಂಡ ಅವರನ್ನು ಡ್ಯೂಟಿ ವೇಳೆಯೇ ಬಂಧಿಸಿದ ಪೊಲೀಸರು ಮಡಿಕೇರಿ ಜೈಲಿಗೆ ಹಾಕಿದ್ದಾರೆ. ನ್ಯಾಯಾಲಯದಿಂದ ಬಂದ ಯಾವುದೇ ನೋಟಿಸ್‌ಕೂಡ ಗಮನಕ್ಕೆ ತಾರದೆ ಏಕಾಏಕಿ ಈ ರೀತಿ ಆಗುವುದಕ್ಕೆ ಸಾರಿಗೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಚಾಲಕನ ಪತ್ನಿ ಅಳಲು ತೋಡಿಕೊಂಡಿದ್ದಾರೆ.

ಇನ್ನು ಈಗ 4ನೇ ತರಗತಿಯಲ್ಲಿ ಕಲಿಯುತ್ತಿರುವ ಪುಟ್ಟ ಮಗಳಿದ್ದು, ಈಗ ಚಾಲಕನ ಪತ್ನಿ ಮತ್ತು ಆ ಪುಟ್ಟ ಬಾಲಕಿ ಜೀವನ ಸಾಗಿಸುವುದಕ್ಕೂ ತುಂಬ ಕಷ್ಟಪಡುತ್ತಿದ್ದಾರೆ. ಇವರ ಕಷ್ಟವನ್ನು ಕಣ್ಣಾರೆ ನೋಡಿದ ಎಚ್‌.ಡಿ.ಕೋಟೆ ಘಟಕದ ವ್ಯವಸ್ಥಾಪಕರಾದ ತ್ಯಾಗರಾಜು ಅವರು ಸುಪ್ರೀಂ ಕೋರ್ಟ್‌ ಮತ್ತು ಹೈ ಕೋರ್ಟ್‌ ವಕೀಲರಾದ ಎಚ್‌.ಬಿ.ಶಿವರಾಜ್‌ ಅವರನ್ನು ಭೇಟಿ ಮಾಡಿ ಸಹಾಯ ಮಾಡುತ್ತಾರೆ ಎಂದು ಚಾಲಕನ ಪತ್ನಿಗೆ ಸಲಹೆ ತಿಳಿಸಿದ್ದಾರೆ.

ಅದರಂತೆ ವಕೀಲ ಶಿವರಾಜು ಅವರನ್ನು ಭೇಟಿ ಮಾಡಿದ ಕುಟುಂಬ ಈಗ ಅವರ ಬಳಿ ಎಲ್ಲವನ್ನು ವಿವರಿಸಿದ್ದು, ಸದ್ಯ ಚಾಲಕನ ಕುಟುಂಬಕ್ಕೆ ನೆರವು ನೀಡಿವುದಾಗಿ ವಕೀಲ ಶಿವರಾಜು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣ ಸಂಬಂಧ ಅರ್ಜಿಸಲ್ಲಿಸಲಿದ್ದು, ಚಾಲಕನಿಗೆ ಆಗಿರುವ ಅನ್ಯಾಯಾಯದ ಬಗ್ಗೆ ವಾದ ಮಂಡಿಸುವುದಾಗಿ ವಕೀಲ ಎಚ್‌.ಬಿ.ಶಿವರಾಜು ವಿಜಯಪಥಕ್ಕೆ ತಿಳಿಸಿದ್ದಾರೆ.

ಇದಿಷ್ಟೇ ಅಲ್ಲದೇ ಮಡಿಕೇರಿ ನ್ಯಾಯಾಲಯದಲ್ಲಿ ಈ ಚಾಲಕ ಈರಣ್ಣ ಭದ್ರಗೊಂಡ ಅವರ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಸಂಗ್ರಹಿಸಿರುವ ವಕೀಲರು ಸದ್ಯ ಈ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ನ ಮೊರೆ ಹೋಗುವುದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.

ಇನ್ನು ಚಾಲಕನ ಬಗ್ಗೆ ಮಾಹಿತಿ ಪಡೆದುಕೊಳ್ಳುವುದಕ್ಕೆ ಮಡಿಕೇರಿ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಕೇಳಿದರೆ, ಆ ಮಾಹಿತಿ ಕೊಡುವುದಕ್ಕೆ ಕೇಂದ್ರ ಸ್ಥಾನದಲ್ಲಿರುವ ಅಧಿಕಾರಿಗಳು ಒಪ್ಪಲಿಲ್ಲ. ಈ ಸ್ಥಿತಿಯಲ್ಲಿ ಅವರಿಗೆ ನ್ಯಾಯ ಕೊಡಿಸಬೇಕಾದ ಅಧಿಕಾರಿಗಳೇ ಬೇಜವಾಬ್ದಾರಿಯಿಂದ ನಡೆದುಕೊಳ್ಳುವುದು ಎಷ್ಟು ಸರಿ ಎಂದು ವಕೀಲ ಶಿವರಾಜು ಪ್ರಶ್ನಿಸಿದ್ದಾರೆ.

ಇನ್ನು ಚಾಲಕನ ಕುಟುಂಬದ ಸ್ಥಿತಿ ನೋಡಿದರೆ, ಕಟುಕರ ಕಣ್ಣುಗಳು ಕೂಡ ಒದ್ದೆಯಾಗದೆ ಇರುವುದಿಲ್ಲ. ಎಲ್ಲ ತಿಳಿದುಕೊಂಡ ವಕೀಲ ಶಿವರಾಜು ಅವರು ಇಂದು ಮಡಿಕೇರಿ ಜೈಲಿನಲ್ಲಿರುವ ಚಾಲಕ ಈರಣ್ಣ ಅವರನ್ನು ಭೇಟಿ ಮಾಡಿದ್ದು, ಇದೇ ವೇಳೆ ಚಾಲಕನ ಪತ್ನಿಸಿ ಮನೆಯಿಂದ ತಂದಿದ್ದ ಊಟವನ್ನು ಮಾಡುವುದಕ್ಕೆ ಜೈಲಧಿಕಾರಿಯಿಂದಲೂ ಅನುಮತಿ ಪಡೆದು ಮತ್ತು ಮಗಳ ಜತೆ ಮಾತನಾಡುವುದಕ್ಕೂ ಅವಕಾಶ ಮಾಡಿಸಿದರು.

Leave a Reply

error: Content is protected !!
LATEST
KSRTC: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರು ಘಟಕ 1-2ರ ಗುತ್ತಿಗೆ ಚಾಲಕರಿಂದ ದಿಢೀರ್‌ ಪ್ರತಿಭಟನೆ ಮೆಜೆಸ್ಟಿಕ್‌: KSRTC ಟಿಸಿಗಳಿಗೆ ಕಂಡಕ್ಟರ್‌ಗಳು ₹10 ಕೊಟ್ಟರಷ್ಟೆ ಲಾಗ್‌ಶೀಟ್‌ ಮೇಲೆ ಸಹಿ ಇಲ್ಲದಿದ್ದರೆ ಕ್ಲಾಸ್‌ !!? ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು KSRTC: ಸಮಸ್ಯೆ  ಹೇಳಿಕೊಂಡು ಬರುವ ನೌಕರರ ಭೇಟಿ ಮಾಡದೆ ಸೂಟ್‌ಕೇಸ್‌ ತಂದವರೊಂದಿಗೆ ಹರಟೆ ಹೊಡೆಯುವ ಕೆಲ ಸಾಹೇಬರೆನಿಸಿಕೊ... ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ... BMTC ಬಸ್‌-ಟ್ರಕ್‌-ಇನೋವಾ ಕಾರು ನಡುವೆ ಸರಣಿ ಅಪಘಾತ: ಇಬ್ಬರು ಮೃತ, ಬಸ್‌ ಚಾಲಕನ ಸ್ಥಿತಿ ಗಂಭೀರ KSRTC: ಕೂಟದ ಅಜೆಂಡ ದಿಕ್ಕು ತಪ್ಪುತ್ತಿದೆಯೇ - ಸರಿ ಸಮಾನ ವೇತನದ ಪಾಡೇನು? 8ಕಿಮೀ BMTC ಬಸ್‌ ಹಿಂಬಾಲಿಸಿಕೊಂಡು ಬಂದು ಚಾಲಕನ ಮೇಲೆ ಹಲ್ಲೆಮಾಡಿ ಪೊಲೀಸರ ಅತಿಥಿಯಾದ ಬೈಕ್‌ ಸವಾರ ಸರಿ ಸಮಾನ ವೇತನಕ್ಕೆ ಅಡ್ಡಗಾಲು ಹಾಕುವುದನ್ನು ಈಗಲಾದರೂ ಬಿಡಿ- ಸಾರಿಗೆ ಅಧಿಕಾರಿಗಳು-ನೌಕರರ ಆಗ್ರಹ ತೆರಿಗೆ ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗಹಾಕಿ ವಸೂಲಿ ಮಾಡಿ: ತುಷಾರ್ ಗಿರಿನಾಥ್