CrimeNEWSದೇಶ-ವಿದೇಶ

ತನ್ನ ಊರು ಸೇರುವ ಹಂಬಲದಲ್ಲಿ ಕಾಲ್ನಡಿಗೆ ಆರಂಭಿಸಿ ಜೀವ ಬಿಟ್ಟ ಬಾಲಕಿ

150 ಕಿಮೀ ನಡೆದು ಬಂದಿದ್ದ ಬಾಲಕಿ l ಇನ್ನು 14 ಕಿಮಿ ಕ್ರಮಿಸಿದ್ದರೆ ಮನೆ ತಲುಪುತ್ತಿದ್ದ ಜೀವ

ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ಕೊರೊನಾ ವೈರಸ್‌ ಹರಡುವುದನ್ನು ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಲಾಕ್‌ಡೌನ್‌ ಘೋಷಣೆಯಾಗಿದ್ದು, ಇದರಿಂದ ಪರ ರಾಜ್ಯದಲ್ಲಿ ಸಿಲುಕಿದ್ದ ಹನ್ನೆರಡು ವರ್ಷದ ಬಾಲಕಿ ತನ್ನ ಊರಿಗೆ ಬರಲು ಬರೋಬ್ಬರಿ 150 ಕಿಮೀ ಪ್ರಯಾಣ ಮಾಡಿ ಮನೆ ತಲುಪುವ ವೇಳೆಗೆ ಅಸುನೀಗಿರುವ ಧಾರುಣ ಘಟನೆ ವಿಜಯಪುರದಲ್ಲಿ ನಡೆದಿದೆ.

ತೆಲಂಗಾಣದಿಂದ ವಿಜಯಪುರದಕ್ಕೆ ತಲುಪಲು ಕಾಲ್ನಡಿಗೆ ಪ್ರಾರಂಭಿಸಿದ್ದ 11 ಮಂದಿಯ ಪೈಕಿ ಇದ್ದ 12 ವರ್ಷದ ಬಾಲಕಿ ಜಾಮ್ಲೋ ಮಕ್‌ಡಾಮ್‌  ಎಂಬಾಕೆಯೇ ಮೃತಪಟ್ಟ ಬಾಲಕಿ.

ಈಕೆ ತನ್ನ ಕುಟುಂಬಕ್ಕೆ ನೆರವಾಗಲು ಮೆಳಸಿನಕಾಯಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಈಕೆ ತನ್ನೂರಿಗೆ ನಡೆದುಕೊಂಡು 150 ಕಿಮೀ ಕ್ರಮಿಸಿದ್ದಾಳೆ, ಇನ್ನೇನು ಇನ್ನು 14 ಕಿಮೀ ನಡೆದಿದ್ದರೆ ಮನೆ ತಲುಪುತ್ತಿದ್ದಳು ಅಷ್ಟರಲ್ಲಿ ಆಕೆ ಕೊನೆಯುಸಿರೆಳೆದಿದ್ದಾಳೆ. ನಂತರ ಆಕೆಯ ಮೃತ ದೇಹವನ್ನು ಆಂಬುಲೆನ್ಸ್‌ನಲ್ಲಿ ತೆಗೆದುಕೊಂಡು ಹೋಗಲಾಗಿದೆ.

ಈ ವರದಿಯ ಬಗ್ಗೆ ವಿಜಯಪುರದ ಮುಖ್ಯ ಆರೋಗ್ಯಾಧಿಕಾರಿ ಮಾತನಾಡಿದ್ದು, ಬಾಲಕಿಯ ಮರಣೋತ್ತರ ಪರೀಕ್ಷೆ ವರದಿಯನ್ನು ಇನ್ನಷ್ಟೇ ನೋಡಬೇಕಿದೆ. ಆದರೆ ಮೇಲ್ನೋಟಕ್ಕೆ ಬಳಲಿಕೆ, ಎಲೆಕ್ಟ್ರೋಲೈಟ್ ಅಸಮತೋಲನ ಅಥವಾ ನಿರ್ಜಲೀಕರಣದಿಂದ ಸಾವನ್ನಪ್ಪಿರುವಂತೆ ತೋರುತ್ತದೆ ಎಂದು ಹೇಳಿದ್ದಾರೆ.

ತೆಲಂಗಾಣದ ಮೆಣಸಿನಕಾಯಿ ಬೆಳೆಯುವ ಕೃಷಿ ಭೂಮಿಯಲ್ಲಿ ಈ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು. ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ 11 ಜನ ಕಾರ್ಮಿಕರು ಏ.15ರಿಂದ 150 ಕಿಮೀ ಕಾಲ್ನಡಿಗೆಯಲ್ಲಿ ಸಂಚರಿಸಿದ್ದಾರೆ. ಮೃತ ಬಾಲಕಿಯ ಮಾದರಿಗಳನ್ನು ಪಡೆಯಲಾಗಿದ್ದು ಪರೀಕ್ಷೆಯಲ್ಲಿ ಕೊರೊನಾ ನೆಗೆಟೀವ್ ಬಂದಿದೆ.

ರಾಜ್ಯ ಸರ್ಕಾರವು ಬಾಲಕಿಯ ಕುಟುಂಬಕ್ಕೆ ಒಂದು ಲಕ್ಷ ರೂ. ನೆರವನ್ನು ಘೋಷಿಸಿದೆ. ಲಾಕ್‌ಡೌನ್‌ ಸಮಯದಲ್ಲಿ ಮನೆಯಿಂದ ದೂರ ಉಳಿದು ಉದ್ಯೋಗ ಮತ್ತು ಆಶ್ರಯವಿಲ್ಲದಿರುವ ಸಾವಿರಾರು ವಲಸೆ ಕಾರ್ಮಿಕರು ಹತಾಶೆಯಿಂದ ಕಾಲ್ನಡಿಗೆಯಲ್ಲಿ ತನ್ನ ಊರನ್ನು ಸೇರಿಕೊಳ್ಳಲು ಸುಧೀರ್ಘ ಪ್ರಯಾಣಕ್ಕೆ ಪ್ರಯತ್ನಿಸಿದ್ದಾರೆ.

ಕಳೆದ ತಿಂಗಳು ಮಧ್ಯಪ್ರದೇಶದ ಕಾರ್ಮಿಕನೋರ್ವ ನ್ಯೂಡೆಲ್ಲಿಯಿಂದ ಕಾಲ್ನಡಿಗೆಯಲ್ಲಿ ಮನೆ ತಲುಪಲು ಯತ್ನಿಸಿ ಸಾವನ್ನಪ್ಪಿದ್ದ.

Leave a Reply

error: Content is protected !!
LATEST
ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಕೆಡವಿ ಮಾಲ್ ಕಟ್ಟುವ ಬಿಡಿಎ ನಿರ್ಧಾರಕ್ಕೆ ಎಎಪಿ ವಿರೋಧ ಜೈಲಲ್ಲೇ ದೇವರಾಜೇಗೌಡರ ಜೀವಕ್ಕೆ ಅಪಾಯವಿದೆ : ಸುರೇಶಗೌಡ ಆತಂಕ KSRTC ಬಸ್‌- ಕಾರು ನಡುವೆ ಭೀಕರ ಅಪಘಾತ: ಕಾರು ಚಾಲಕ ಸಾವು, ನಾಲ್ವರ ಸ್ಥಿತಿ ಗಂಭೀರ ಜಿಆರ್ ಫಾರ್ಮ್ ಹೌಸ್‌ನಲ್ಲಿ ರೇವ್​ ಪಾರ್ಟಿ: ನಟಿಯರು ಸೇರಿ 80ಕ್ಕೂ ಹೆಚ್ಚು ಬಂಧನ KSRTC: ಹೆದ್ದಾರಿಯಲ್ಲಿ ಕೆಟ್ಟುನಿಂತ ಬಸ್‌ಗಳು - ಕಿಮೀ ವರೆಗೆ ಟ್ರಾಫಿಕ್ ಜಾಮ್ KSRTC: ₹185 ಟಿಕೆಟ್‌ ಕೊಟ್ಟು ₹200 ಕೇಳಿದ ಕಂಡಕ್ಟರ್‌ - ದೂರು ಕೊಟ್ಟ ಪ್ರಯಾಣಿಕ ಧೈರ್ಯವಿದ್ದರೆ ಎಎಪಿ ಮುಖಂಡರೆಲ್ಲರನ್ನೂ ಜೈಲಿಗೆ ಹಾಕಿ: ಪ್ರಧಾನಿ ಮೋದಿಗೆ ಪೃಥ್ವಿ ರೆಡ್ಡಿ ಸವಾಲು ಪತ್ನಿ, ಮಗನಿಗೆ ಮಾಸಿಕ ಜೀವನಾಂಶ ಪಾವತಿಸದ ಪತಿ ಆಸ್ತಿ ಮುಟ್ಟುಗೋಲು: ಹೈಕೋರ್ಟ್ ಮಹತ್ವದ ಆದೇಶ ಬೆಳ್ಳಂಬೆಳಗ್ಗೆ ಸರಣಿ ಅಪಘಾತ: ಕಾರು ನಜ್ಜುಗುಜ್ಜು - ಪ್ರಯಾಣಿಕರು ಸೇಫ್ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ:‌ ಶೇ.25.5 ವೇತನ ಹೆಚ್ಚಳ ಬಹುತೇಕ ಖಚಿತ