NEWSದೇಶ-ವಿದೇಶ

ತಾಂಜಾನಿಯಾದ ಮೂವರು ಸಂಸದರು ಕೊರೊನಾಗೆ ಬಲಿ, ಸಂಸತ್‌ ಅಮಾನತಿಗೆ ವಿಪಕ್ಷ ಆಗ್ರಹ

ವಿಜಯಪಥ ಸಮಗ್ರ ಸುದ್ದಿ

ತಾಂಜಾನಿಯಾ: ಇಲ್ಲಿನ ಸಂಸದರು ಹಾಗೂ  ನೂರಾರು ಜನರು ಕೋವಿಡ್‌ಗೆ ತುತ್ತಾಗಿ ಪ್ರಾಣ ತೆತ್ತಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ. ಹೀಗಾಗಿ, ಕನಿಷ್ಠ 21 ದಿನಗಳ ಕಾಲ ಸಂಸತ್ತನ್ನು ಅಮಾನತಿನಲ್ಲಿಟ್ಟು ಎಲ್ಲ ಸಂಸದರು, ಅಧಿಕಾರಿಗಳು ಹಾಗೂ ಅವರ ಕುಟುಂಬಸ್ಥರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಎಂದು ವಿಪಕ್ಷ ಚಡೆಮಾದ ಮುಖ್ಯಸ್ಥ ಫ್ರೀಮನ್‌ ಎಂಬೊವೆ ಆಗ್ರಹಿಸಿದ್ದಾರೆ.

ಕೊರೊನಾಗೆ  ಮೂರು ಸಂಸದರು ತೀರಿಕೊಂಡ ಬಳಿಕ ವಿಪಕ್ಷ ಸದಸ್ಯರು ಸಂಸತ್ತನ್ನು ಅಮಾನತಿನಲ್ಲಿಟ್ಟು ಎಲ್ಲ ಸಂಸದರು, ಅಧಿಕಾರಿಗಳು ಹಾಗೂ ಅವರ ಕುಟುಂಬಸ್ಥರನ್ನು ಕೋವಿಡ್‌ 19 ಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಳೆದ 11 ದಿನಗಳಲ್ಲಿ ಮೂವರು ಸಂಸದರು ಅಸುನೀಗಿದ್ದು, ಕಾರಣ ಇನ್ನೂ ಅಸ್ಪಷ್ಟವಾಗಿದೆ.  ಸರಕಾರ ಜನಪ್ರತಿನಿಧಿಗಳ ಸಾವಿನ ಕಾರಣವನ್ನು ಮುಚ್ಚಿಟ್ಟಿದೆ. ದೇಶದಲ್ಲಿ ಕೋವಿಡ್ ವ್ಯಾಪಕವಾಗಿ ಹಬ್ಬುತ್ತಿದ್ದರೂ ಅದನ್ನು ನಿಯಂತ್ರಿಸುವಲ್ಲಿ ವಿಫ‌ಲವಾಗಿದೆ ಎಂದು ಆರೋಪಿಸಿದ್ದಾರೆ.

ತಾಂಜಾನಿಯಾದ ಕಾನೂನು ಮತ್ತು ಸಂಸದೀಯ ಸಚಿವ ಆಗಸ್ಟಿನ್‌ ಮಹಿಗಾ (74) ಕಳೆದ ಶುಕ್ರವಾರ ಮೃತಪಟ್ಟಿದ್ದರು. ಏ. 20ರಂದು ಗೆರ್‌ಟ್ರೂಡ್‌ ರಾಕಟರೆ ಹಾಗೂ ಏ. 29ರಂದು ರಿಚಾರ್ಡ್‌ ಎನ್‌ಡಸ್ಸಾ ಸಾವನ್ನಪ್ಪಿದ್ದರು. ಸರಕಾರ ಈ ಮೂವರು ಸಂಸದರ ಸಾವಿಗೆ ನಿಖರ ಕಾರಣವನ್ನು ಇನ್ನೂ ತಿಳಿಸಿಲ್ಲ. ಆದರೆ, ಕಳೆದ ತಿಂಗಳು ಓರ್ವ ಸಂಸದರು ಕೋವಿಡ್‌ ವೈರಸ್‌ಗೆ ತುತ್ತಾಗಿದ್ದು ಖಚಿತಪಟ್ಟಿತ್ತು.

ಈವರೆಗೆ ತಾಂಜಾನಿಯಾದಲ್ಲಿ 480ಕ್ಕೂ ಹೆಚ್ಚು ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, 16 ಮಂದಿ ಮೃತಪಟ್ಟಿದ್ದಾರೆ. ಒಂಬತ್ತು ದಿನಗಳಲ್ಲಿ ಸರಕಾರ ನೀಡಿದ ಈ ಏಕೈಕ ಮಾಹಿತಿ ಕಳೆದ ಬುಧವಾರ ಹೊರಬಿದ್ದಿದೆ. ಜನರಲ್ಲಿ ಭಯ ಮೂಡಿಸಬಾರದು ಎಂದು ಅಲ್ಲಿನ ಅಧ್ಯಕ್ಷ ಜಾನ್‌ ಮಾಗುಫ‌ುಲಿ ಅವರ ಸೂಚನೆ ಮೇರೆಗೆ ಏ. 22ರಿಂದ ಕೋವಿಡ್ ಪ್ರಕರಣಗಳ ಮಾಹಿತಿಯನ್ನು ಸರಕಾರ ಬಹಿರಂಗಪಡಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಲೆ – ಕಾಲೇಜುಗಳಿಗೆ ರಜೆ ಘೋಷಿಸಿದ್ದರೂ ಜನರು ಕೆಲಸ ಮಾಡುವುದನ್ನು ಹಾಗೂ ಚರ್ಚ್‌ ಹಾಗೂ ಮಸೀದಿಗಳಿಗೆ ಹೋಗುವುದನ್ನು ನಿಲ್ಲಿಸಿಲ್ಲ. ಹೀಗಾಗಿ, ಮಾರುಕಟ್ಟೆ, ವಾಣಿಜ್ಯ ಚಟುವಟಿಕೆ ತಡೆಯಿಲ್ಲದೆ ನಡೆದಿವೆ ಎಂದು ಆರೋಪಿಸಿದ್ದಾರೆ.

ಈ ನಡುವೆ ತಮ್ಮ ಪಕ್ಷದ ಸಂಸದರು ಸಂಸತ್ತಿನ ಕಲಾಪದಲ್ಲಿ ಪಾಲ್ಗೊಳ್ಳದೆ ಕನಿಷ್ಠ ಎರಡು ವಾರಗಳ ಕಾಲ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಬೇಕೆಂದು ಸೂಚನೆ ನೀಡಿದ್ದಾರೆ.

Leave a Reply

error: Content is protected !!
LATEST
ಚಾಮುಂಡಿ ಹುಟ್ಟುಹಬ್ಬ: ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಸಂಭ್ರಮ: ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ...