ನಮ್ಮಜಿಲ್ಲೆ

ತಿ.ನರಸೀಪುರ ರಸ್ತೆಗಳಿಗೆ ಔಷಧ ಸಿಂಪಡಣೆ

ಪುರಸಭೆ, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಕಾರ್ಯಾಚರಣೆ : ಕೊರೊನಾ ನಿಯಂತ್ರಣಕ್ಕೆ ಕ್ರಮ

ವಿಜಯಪಥ ಸಮಗ್ರ ಸುದ್ದಿ

ತಿ.ನರಸೀಪುರ: ಕೊರೋನ‌ ಹರಡುವಿಕೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಿದ ಪುರಸಭೆಯು ಅಗ್ನಿಶಾಮಕ ದಳದ ಸಹಕಾರದೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಾದ ಲಿಂಕ್ ರಸ್ತೆ,ಕಾಲೇಜುರಸ್ತೆ, ನಂಜನಗೂಡು ರಸ್ತೆಗಳು ಸೇರಿದಂತೆ ಇನ್ನಿತರೆ ರಸ್ತೆಗಳನ್ನು ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ನಡೆಸಿರುವುದರಿಂದ ರಸ್ತೆ ಗಳಲ್ಲಿ ಸೋಂಕು ಇರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.ಇದರಿಂದಾಗಿ ಸಮಸ್ಯೆಯನ್ನು ಮೈ ಮೇಲೆ ಎಳೆದು ಕೊಳ್ಳುವುದು ಬೇಡ ಎಂಬ ಮುನ್ನೆಚ್ಚರಿಕೆಯಲ್ಲಿ ಇಂದು ಮುಖ್ಯಾಧಿಕಾರಿ ಆರ್.ಅಶೋಕ್ ರವರ ಮಾರ್ಗದರ್ಶನದಲ್ಲಿ ಎಲ್ಲ ರಸ್ತೆಗಳನ್ನು  ಹಾಗು ನ್ಯಾಯಾಲಯದ ಆವರಣ,ಎಪಿಎಂಸಿ ಆವರಣವನ್ನು ಹೈಪೋ ಕ್ಲೋರೇಟ್ ಸಲ್ಯೂಷನ್ ದ್ರಾವಣದಿಂದ ಸ್ವಚ್ಛತೆ ಮಾಡಲಾಗುತ್ತಿದೆ ಎಂದು ಕಾರ್ಯಾಚರಣೆಯಲ್ಲಿದ್ದ ಪುರಸಭಾ ಆರೋಗ್ಯಾಧಿಕಾರಿ ಚೇತನ್ ಕುಮಾರ್ ಹಾಗು ಪರಿಸರ ಅಭಿಯಂತರೆ ಮೈತ್ರಾವತಿ ಪತ್ರಿಕೆಗೆ ತಿಳಿಸಿದರು.

ಕಂದಾಯಾಧಿಕಾರಿ ಪುಟ್ಟಸ್ವಾಮಿ, ಕಿರಿಯ ಆರೋಗ್ಯ ಸಹಾಯಕ‌ ಮಹೇಂದ್ರ, ಸಿಬ್ಬಂದಿಗಳಾದ ರವಿ,ಗೋಪಾಲ್,ಪುಟ್ಟಸ್ವಾಮಿ ಹಾಗು ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಹೆಚ್.ಎಸ್.ಯೋಗೇಶ್,ಕುಮಾರ್ ಅಜಯ್,ನಾಗರಾಜು,ಪಾಟೀಲ್,ಶಿವಬಸಪ್ಪ ಹಾಜರಿದ್ದರು.

ಸ್ಥಳಾಂತರ ಗೊಳ್ಳದ ತರಕಾರಿ ಮಾರುಕಟ್ಟೆ

ಕೊರೋನಾ ಹರಡುವಿಕೆಯ ತಡೆಗಾಗಿ ಪಟ್ಟಣದ ಲಿಂಕ್ ರಸ್ತೆ ಹಾಗೂ ಮಾರುಕಟ್ಟೆ ರಸ್ತೆಗಳಲ್ಲಿ ನಡೆಯುತ್ತಿದ್ದ ತರಕಾರಿ ವ್ಯಾಪಾರವನ್ನು ಪಟ್ಟಣದ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸುವಂತೆ ನಿನ್ನೆ ನಡೆದ ಅಧಿಕಾರಿಗಳ ಸಭೆಯಲ್ಲಿ ತಹಸೀಲ್ದಾರ್ ಆದೇಶ ಹೊರಡಿಸಿದ್ದರಾದರೂ ತಹಸೀಲ್ದಾರ್ ರ ಆದೇಶಕ್ಕೆ ಸೊಪ್ಪು ಹಾಕದ ತರಕಾರಿ ವ್ಯಾಪಾರಿಗಳು ಸ್ಥಳಾಂತರಕ್ಕೆ ಒಪ್ಪದ್ದರಿಂದ ಸಾರ್ವಜನಿಕರು ಪರದಾಡಿದರು.

ಎಪಿಎಂಸಿಯಲ್ಲಿ ತರಕಾರಿ ಬಿಡ್ ಮಾಡುವ ಏಜೆಂಟರು ಹಾಗೂ ಬೀದಿ ಬದಿ ವ್ಯಾಪಾರಿಗಳ ನಡುವೆ ಒಮ್ಮತ ಮೂಡಿಸಲು ತಾಲ್ಲೂಕು ಆಡಳಿತ ವಿಫಲವಾದ್ದರಿಂದ ತೊಂದರೆ ಎದುರಾಯಿತು.

ತರಕಾರಿ ಬಿಡ್ ಮಾಡುವ ವ್ಯಾಪಾರಿಗಳು ಬಿಡ್ ಮಾಡುವ ಜೊತೆಗೆ ನಾವೂ ಅಲ್ಲಯೇ ವ್ಯಾಪಾರ ಮಾಡುತ್ತೇವೆ ಎಂದು ಪಟ್ಟು ಹಿಡಿದರೆ,ರಸ್ತೆ ಬದಿ ವ್ಯಾಪಾರಿಗಳು ಬಿಡ್ ಮಾಡಿದ ನಂತರ ಚಿಲ್ಲರೆ ವ್ಯಾಪಾರಿಗಳಾದ ನಮಗೆ ಮಾತ್ರ ತರಕಾರಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗಲಿಲ್ಲ. ಬಗೆಹರಿಸಬೇಕಾದ ತಾಲೂಕು ಆಡಳಿತ ಕೈ ಚೆಲ್ಲಿ ಕುಳಿತಿದ್ದರಿಂದ ಇಂದು ತರಕಾರಿ ಖರೀದಿಗೆ ಬಂದವರು ಬರಿಗೈಲಿ ತೆರಳುವಂತಾಯಿತು.

ಸಭೆ ಮುಂದೂಡಿಕೆ

29 ರ ಭಾನುವಾರ ರೇಣುಕಾ ಸಭಾ ಭವನದಲ್ಲಿ ನಡೆಯ ಬೇಕಿದ್ದ ಶ್ರೀ ರೇಣುಕಾ ಜಯಂತಿ  ಕಾರ್ಯಕ್ರಮವನ್ನು  ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು   ವೀರಶೈವ ಸೇವಾ ಸಮಾಜದ ಕಾರ್ಯದರ್ಶಿ ವೀರೇಶ್ ತಿಳಿಸಿದ್ದಾರೆ.

Leave a Reply

error: Content is protected !!
LATEST
KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ