NEWSಕೃಷಿ

ತೂಕ-ಅಳತೆ ಅಧಿಕಾರಿಗಳಿಂದ ದಿಢೀರ್ ತಪಾಸಣೆ

 ಜಿಲ್ಲಾಧಿಕಾರಿ ಸೂಚನೆ ಮೇರೆಗೆ ದಾಳಿ l 3 ಮೊಕದ್ದಮೆ ದಾಖಲು

ವಿಜಯಪಥ ಸಮಗ್ರ ಸುದ್ದಿ

ಉಡುಪಿ: ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ಸೂಚನೆ ಮೇರೆಗೆ, ಉಡುಪಿ ನಗರದಲ್ಲಿನ ತರಕಾರಿ ಮಾರುಕಟ್ಟೆಯ ಅಂಗಡಿಗಳು,ಕೋಳಿ ಮತ್ತು ಕುರಿ ಮಾಂಸದ ಅಂಗಡಿ ಮತ್ತು ದಿನಸಿ ಅಂಗಡಿಗಳಿಗೆ ಶುಕ್ರವಾರ ದಿಡೀರ್ ಭೇಟಿ ನೀಡಿದ, ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು, ಕಡಿಮೆ ತೂಕ ನೀಡುತ್ತಿದ್ದವರ ಮೇಲೆ ಎರಡು ಮೊಕದ್ದಮೆ ಹಾಗೂ ದಿನಸಿ ಅಂಗಡಿಗಳ ತಪಾಸಣೆ ಮಾಡಿ ಎಂ.ಆರ್.ಪಿ ದರದ ಬಗ್ಗೆ ಒಂದು ಮೊಕದ್ದಮೆ ದಾಖಲಿಸಿ , ಒಟ್ಟು 3 ಪ್ರಕರಣಗಳಲ್ಲಿ 8000 ರೂ .ದಂಡ ವಸೂಲಿ ಮಾಡಿದ್ದಾರೆ.

ತರಕಾರಿ ಅಂಗಡಿಗಳು ತಮ್ಮ ಅಂಗಡಿಯ ಮುಂದೆ ತರಕಾರಿಗಳ ದರಪಟ್ಟಿಯನ್ನು ಪ್ರದರ್ಶಿಸಲು ಸೂಚಿಸಿದ ಅಧಿಕಾರಿಗಳು, ಎಲ್ಲಾ ವರ್ತಕರು ಗ್ರಾಹಕರಿಗೆ ಸರಿಯಾದ ತೂಕ ನೀಡುವಂತೆ ಹಾಗೂ ಅಕ್ಕಿ, ಬೇಳೆ, ಸಕ್ಕರೆ ಇತ್ಯಾದಿ ಅಗತ್ಯ ವಸ್ತುಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದು, ಜಿಲ್ಲೆಯಾದ್ಯಂತ ಈ ರೀತಿಯ ತಪಾಸಣೆಯನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ತಪಾಸಣೆ ಕಾರ್ಯದಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆ(ತೂಕ ಮತ್ತು ಅಳತೆ) ಸಹಾಯಕ ನಿಯಂತ್ರಕ ಗಜೇಂದ್ರ ವಿ, ಉಡುಪಿಯ ನಿರೀಕ್ಷಕ ರಾಗ್ಯಾ ನಾಯಕ್ ಉಡುಪಿ ಮತ್ತು ಮೂಡಬಿದ್ರೆ ಯ ನಿರೀಕ್ಷಕ ಮಂಜಪ್ಪ  ಭಾಗವಹಿಸಿದ್ದರು.

ಅಸಂಘಟಿತ ಕಾರ್ಮಿಕರಿಗೆ ಸಾಮಗ್ರಿ ವಿತರಣೆ

ಕೊರೊನಾ ನಿಯಂತ್ರಣದ ಅಂಗವಾಗಿ, ಜಿಲ್ಲೆಯ ಅಸಂಘಟಿತ ವಲಯದ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಘಟಕ, ಕೊರೊನಾ ಸೈನಿಕರು, ಉಡುಪಿ ಜಿಲ್ಲೆಯ   ವತಿಯಿಂದ  ಉಡುಪಿಯ ಬೋರ್ಡ್ ಹೈಸ್ಕೂಲ್, ಹಾರಾಡಿ ಗಾಂಧೀನಗರ ಕಾಲೋನಿ, ಬೈಕಾಡಿ ಕಾಲೋನಿ ಮತ್ತು ಬಾರಕೂರು ನಲ್ಲಿದ್ದ ಕಾರ್ಮಿಕರಿಗೆ 1400 ಮಾಸ್ಕ್ ಗಳು, ಸ್ಯಾನಿಟೇಸರ್ಗಳು, ಸೋಪುಗಳು, ಕರಪತ್ರಗಳನ್ನು ವಿತರಿಸಲಾಯಿತು.
ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ ಬಾಲಕೃಷ್ಣ, ಉಡುಪಿ ರೆಡ್ ಕ್ರಾಸ್ ಘಟಕದ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕಾರ್ಮಿಕ ನಿರೀಕ್ಷಕ ಪ್ರವೀಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು

Leave a Reply

error: Content is protected !!
LATEST
ಅನ್ನವೂ ಹಳಸಿತ್ತು- ನಾಯಿಯೂ ಹಸಿದಿತ್ತು : ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯ ಬಿಜೆಪಿ ಸೇರುತ್ತಾರ ಸುಪ್ರೀಂಕೋರ್ಟ್‌, ಹೈಕೋರ್ಟ್‌ ವಕೀಲ ಎಚ್‌.ಬಿ.ಶಿವರಾಜು? ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ನೂತನ ಕಚೇರಿ ಉದ್ಘಾಟನೆ ನನ್ನ ರಾಜ್ಯದ ಬರಗಾಲದ ಬವಣೆ, ರೈತರ ಸಂಕಷ್ಟ ತಪ್ಪಿಸಿ: ಸಿಎಸ್‌ಒಗೆ ರೈತ ಮುಖಂಡರ ನಿಯೋಗ ಒತ್ತಾಯ ಕೊಡಗು: ಬೆಳ್ಳಂಬೆಳಗ್ಗೆ ಕಾಡಾನೆ ದಾಳಿಗೆ ಬಲಿಯಾದ ಕಾಫಿ ಬೆಳೆಗಾರ ಮೈಸೂರು: ಬಿಸಿಲ ಝಳದಿಂದ ಬಳಲಿ ಮಡಕೆ ಫಿಲ್ಟರ್‌ಗಳ ಮೊರೆ ಹೋಗುತ್ತಿರುವ ಜನತೆ ಆಧುನಿಕ ಜೀವನ ಶೈಲಿಯಿಂದ ಹೊರಬಂದರೆ ಉತ್ತಮ ಆರೋಗ್ಯ : ಶ್ರೀ ಸೌಮ್ಯನಾಥ ಸ್ವಾಮೀಜಿ ಅಭಿಮತ MP ಚುನಾವಣೆ: 706 ಮಂದಿ ಮನೆಯಿಂದಲೇ ಮತದಾನ - ಜಿಲ್ಲಾಧಿಕಾರಿ ಡಾ. ಶಿವಶಂಕರ್‌ ಐಪಿಎಲ್  ಕ್ರಿಕೆಟ್: ಚಿನ್ನಸ್ವಾಮಿ ಸ್ಟೇಡಿಯಂಗೆ ಬಿಎಂಟಿಸಿ ಬಸ್ ವ್ಯವಸ್ಥೆ ಪ್ರತಿಭಟನೆ ಬಳಿಕ ಗ್ರಾಮಗಳಿಗೆ ನೀರಿನ ಸಮಸ್ಯೆ ಪರಿಹರಿಸಿದ ಮಹದೇಶ್ವರಬೆಟ್ಟ ಗ್ರಾಪಂ