ನಮ್ಮಜಿಲ್ಲೆಶಿಕ್ಷಣ-

ದ್ವಿತೀಯ ಪಿಯುಸಿ ಪರೀಕ್ಷೆಗೆ 118 ವಿದ್ಯಾರ್ಥಿಗಳು ಗೈರು

ವಿಜಯಪಥ ಸಮಗ್ರ ಸುದ್ದಿ

ಉಡುಪಿ: ಜಿಲ್ಲೆಯಲ್ಲಿ ಗುರುವಾರ ನಡೆದ ದ್ವಿತೀಯ ಪಿಯು ಕನ್ನಡ ಪರೀಕ್ಷೆಗೆ 8,954 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, 8836 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 118 ಮಂದಿ ಗೈರಾಗಿದ್ದಾರೆ ಎಂದು ಪಿಯು ಇಲಾಖೆಯ ಉಪ ನಿದೇಶಕ ಭಗವಂತ ಕಟ್ಟಿಮನಿ ತಿಳಿಸಿದ್ದಾರೆ.

ವಾರದ ಸಂತೆ, ಜಾತ್ರೆ,  ಸಾಮೂಹಿಕ ವಿವಾಹಕ್ಕೆ ತಡೆ

ಸರ್ಕಾರದ ಆದೇಶದಂತೆ, ಉಡುಪಿ ಜಿಲ್ಲಾಧಿಕಾರಿಗಳ ಮಾ.18 ರ ಆದೇಶದಲ್ಲಿ ತಿಳಿಸಿರುವಂತೆ, ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು, ಜನಸಂದಣಿ ಸೇರುವ ಕಾರ್ಯಗಳಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು ಇರುವ ಕಾರಣದಿಂದ ಸಾರ್ವಜನಿಕರು ಕೆಲವು ವಿಶೇಷ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಸೂಚಿಸಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕ  ಆರೋಗ್ಯದ  ಹಿತದೃಷ್ಟಿಯಿಂದ ಉಡುಪಿ ಜಿಲ್ಲೆಯಲ್ಲಿ ಜರುಗುವ ಎಲ್ಲಾ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಜಾತ್ರೆಗಳು, ಸಭೆ, ಸಮಾರಂಭಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ವಾರದ ಸಂತೆ, ಜಾತ್ರೆ, ಉತ್ಸವ, ಸಾಮೂಹಿಕ ವಿವಾಹಗಳು ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ ಎಂದು ನಗರಸಭೆಯ ಪೌರಾಯುಕ್ತ  ಆನಂದ ಕಲ್ಲೋಳಿಕರ್ ತಿಳಿಸಿದ್ದಾರೆ.

ಉಡುಪಿ ರೈಲ್ವೆ ನಿಲ್ದಾಣದಲ್ಲಿ ತಪಾಸಣೆ

ಕೊರೊನಾ ವೈರಸ್ ಭೀತಿ ಹಿನ್ನೆಲೆ ರೈಲ್ವೆ ಇಲಾಖೆ ವತಿಯಿಂದ,  ಉಡುಪಿ ರೈಲ್ವೆ ನಿಲ್ದಾಣದಲ್ಲಿ ಕೊರೊನಾ ತಪಾಸಣಾ ಮತ್ತು ಸಹಾಯವಾಣಿಯನ್ನು ತೆರೆಯಲಾಗಿದ್ದು, ಪ್ರಯಾಣಿಕರ ಪರೀಕ್ಷೆ ನಡೆಸಲಾಯಿತು.

ರೋಗಿ ಗುಣಮುಖ- ವಾರಸುದಾರರಿಗೆ ಸೂಚನೆ

ಜಿಲ್ಲಾ ಆಸ್ಪತ್ರೆ ಉಡುಪಿಯಲ್ಲಿ ಒಳರೋಗಿಯಾಗಿ ದಾಖಲಾದ ವಿಠ್ಠಲ್ ನಾಯಕ್ (70) ಎಂಬ ವ್ಯಕ್ತಿಯು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದು, ವಾರಸುದಾರರು ಯಾರಾದರು ಇದ್ದಲ್ಲಿ ಆಸ್ಪತ್ರೆಯಿಂದ ಕರೆದುಕೊಂಡು ಹೋಗಲು ಜಿಲ್ಲಾ ಆಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0820-2520555 / 9449827833 ನ್ನು ಸಂಪರ್ಕಿಸುವಂತೆ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ತಿಳಿಸಿದ್ದಾರೆ.

Leave a Reply

error: Content is protected !!
LATEST
ಸಾವಿರ ವರ್ಷಗಳ ಇತಿಹಾಸವಿರುವ ಈಶ್ವರ ದೇವಾಲಯ ಜೀರ್ಣೋದ್ಧಾರಕ್ಕೆ ಚಾಲನೆ: ನೇಮಿರಾಜ್ ಕೃಷಿ ಸಚಿವರ ತವರು ನೆಲದಲ್ಲೇ ಕೊಬ್ಬರಿ ಮಾರಿದ ರೈತರ ಪರದಾಟ : ರೈತ ಸಂಘ ಕಿಡಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಪಿಎಸ್ ಪಿಂಚಣಿಗಾರರ ಬೃಹತ್ ಪ್ರತಿಭಟನೆ- ಆಕ್ರೋಶ ಮಳೆ ನೀರ ನೇರವಾಗಿ ಒಳಚರಂಡಿಗೆ ಬಿಡುವವರ ವಿರುದ್ಧ ಜಲಮಂಡಳಿ ಕ್ರಮಕ್ಕೆ ಆಕ್ಷೇಪ: ಡಿಸಿಎಂ ಡಿಕೆಶಿಗೆ ಎಎಪಿ ಬಹಿರಂಗ ಪತ್ರ ಕಿಟಕಿ ಮೂಲಕ ನುಸುಳಿ ಹಣ ದೋಚುತ್ತಿದ್ದ ಖತರ್ನಾಕ್‌ ಅಕ್ಕ-ತಮ್ಮ ಅಂದರ್‌ KSRTC: ನೌಕರರ ಸಮಸ್ಯೆ ನೀಗಿಸುವ ಸಮರ್ಥ ಪಡೆಯೂ ಇಲ್ಲ ಸಮರ್ಥ ನಾಯಕನೂ ಇಲ್ಲ! ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ ಆರೋಪ ಮಹರ್ಷಿ ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ: ಸಚಿವ ನಾಗೇಂದ್ರ ಸ್ಪಷ್... ಪಿ.ಚಂದ್ರಶೇಖರನ್‌ ಆತ್ಮಹತ್ಯೆ ಪ್ರಕರಣ: ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವ ಮಂತ್ರಿಯ ಸಂಪುಟದಿಂದ ಕಿತ್ತುಹಾಕಿ: ಎಎಪಿ KKRTC: ಡಬಲ್ ಡ್ಯೂಟಿ, ದೂರದ ಪ್ರಯಾಣಕ್ಕೆ ವಿಶ್ರಾಂತಿ ಕಡ್ಡಾಯ ಆದರೆ ದೇವದುರ್ಗ ಘಟಕದ ನೌಕರರಿಗೆ ಮರೀಚಿಕೆ!