ತುಮಕೂರು: ಜಿಲ್ಲೆಯಲ್ಲಿ ಇಂದು ನಡೆದ ದ್ವಿತೀಯ ಪಿಯುಸಿಯ ರಾಜ್ಯಶಾಸ್ತ್ರ ವಿಷಯದ ಪರೀಕ್ಷೆಗೆ 705 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ನೋಂದಣಿಯಾದ6847ವಿದ್ಯಾರ್ಥಿಗಳಲ್ಲಿ 6142ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಅದೇ ರೀತಿ Statistic ವಿಷಯದಲ್ಲಿ 18 ವಿದ್ಯಾರ್ಥಿಗಳು ಗೈರಾಗಿದ್ದು, ಈ ಪರೀಕ್ಷೆಗೆ ನೋಂದಣಿಯಾದ 935 ವಿದ್ಯಾರ್ಥಿಗಳಲ್ಲಿ 917 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದ್ದಾದರು.
ಪರೀಕ್ಷೆಯಲ್ಲಿ ಯಾವುದೇ ಡಿಬಾರ್ ಪ್ರಕರಣ ವರದಿಯಾಗಿರುವುದಿಲ್ಲವೆಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲಲಿತಕುಮಾರಿ ತಿಳಿಸಿದ್ದಾರೆ.