Please assign a menu to the primary menu location under menu

NEWSನಮ್ಮರಾಜ್ಯ

ನಾಳೆಯಿಂದ ಮನೆ ಮನೆಗೆ ತರಕಾರಿ ಸರಬರಾಜು

ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ <span style="color: #ff0000;">|</span> ಎನ್.ಯತೀಶ ಹೇಳಿಕೆ

ವಿಜಯಪಥ ಸಮಗ್ರ ಸುದ್ದಿ

ಗದಗ: ಕೊರೊನಾ(ಕೋವಿಡ್ 19) ವೈರಸ್ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ನಾಳೆಯಿಂದ ಮನೆ ಮನೆಗೆತರಕಾರಿ  ಮಾರಾಟಕ್ಕೆ ಕ್ರಮ ಜರುಗಿಸಲಾಗುತ್ತಿದೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ ತಿಳಿಸಿದರು.

ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಆವರಣದಲ್ಲಿಂದು ಜರುಗಿದ ತರಕಾರಿ, ಕಿರಾಣಿ ಹಾಗೂ ಹೊಟೇಲ್ ವರ್ತಕರ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ನಗರಸಭೆ ವ್ಯಾಪ್ತಿಯ ತರಕಾರಿಮಾರುಕಟ್ಟೆಗಳಲ್ಲಿ ಜನಸಾಂದ್ರತೆ ಹೆಚ್ಚಾಗುತ್ತಿದ್ದು ಇದರಿಂದ ವೈರಸ್ ತಗಲುವ ಭೀತಿಯಿದ್ದು ಮುಂಜಾಗ್ರತಾ ಕ್ರಮವಾಗಿ ನಾಳೆಯಿಂದ ನಗರದ ತರಕಾರಿಮಾರುಟ್ಟೆಗಳನ್ನು ಬಂದ ಮಾಡಲಾಗುತ್ತಿದೆ ಎಂದು ತಿಳಿಸಿದರು.

ನಗರ ಸಭೆವ್ಯಾಪ್ತಿಯ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಾಳೆಯಿಂದ ತರಕಾರಿಗಳನ್ನು ವಾರ್ಡವಾರು ತಳ್ಳು ಗಾಡಿಗಳ ಮುಖಾಂತರ ಮನೆ ಮನೆಗೆಮಾರಾಟ ಮಾಡಲು ವರ್ತಕರು ಸಹಮತ ವ್ಯಕ್ತ ಪಡಿಸಿದ್ದು ಈ ಕಾರ್ಯಕ್ಕೆಪೊಲೀಸ್ ಇಲಾಖೆ ಅಗತ್ಯದ ಸಹಕಾರ ನೀಡಲಾಗುವುದು. ವಾರ್ಡ್‌ವಾರು ತರಕಾರಿ ಮಾರಾಟ ಮಾಡುವ ವರ್ತಕರಿಗೆ ಗುರುತಿನ ಚೀಟಿಗಳನ್ನು ನೀಡಲಾಗುವುದು. ವರ್ತಕರು, ವ್ಯಾಪಾರಸ್ಥರು ಸಾಮಾಜಿ ಅಂತರಕಾಯ್ದುಕೊಳ್ಳುವ ಹಾಗೂ ಸ್ಯಾನಿಟೈಸರ್ಗಳನ್ನು ಬಳಸುವಂತೆ ತಿಳಿಸಿದರು.‌

ವಾರ್ಡ್‌ವಾರು ತರಕಾರಿ ಮಾರಾಟ ಮಾಡುವದರ ಕುರಿತು ಸಾರ್ವಜನಿಕರಿಗೆಮಾಹಿತಿ ನೀಡಲು ನಗರಸಭೆ ವತಿಯಿಂದ  ಅಗತ್ಯದ ಕ್ರಮಕೈಗೊಳ್ಳಲಾಗುವುದು ಎಂದರು.

ಸಾರ್ವಜನಿಕರು ತರಕಾರಿ ಖರೀದಿ ಸಂದರ್ಭದಲ್ಲಿ ಮನೆಯಿಂದ ಯಾರಾದರೂ ಒಬ್ಬರೇ ತರಕಾರಿ ಖರೀದಿಗೆಆಗಮಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಕಿರಾಣಿ ಅಂಗಡಿಗಳು ಮುಂಜಾನೆ 7ಗಂಟೆಯಿಂದ 10 ಗಂಟೆಯವರೆಗೆ ತೆರೆದಿದ್ದು ಅಂಗಡಿಗಳಿಗೆ ಆಗಮಿಸುವ ಸಾರ್ವಜನಿಕರು ಒಬ್ಬೊಬ್ಬರಾಗಿ ಆಗಮಿಸಿ ಅಗತ್ಯದ ಸಾಮಗ್ರಿಗಳನ್ನು ಖರೀದಿಮಾಡಲು ಮನವಿ ಮಾಡಿದ ಅವರು ಅಂಗಡಿಗಳಲ್ಲಿ ಸಾಮಾಜಿಕ ಅಂತರಹಾಗೂ ಸ್ಯಾನಿಟೈಸರ್‌ ಬಳಸುವಂತೆ ವರ್ತಕರಿಗೆ ಸೂಚನೆ ನೀಡಿದರು.

ನಗರದಸಾರ್ವಜನಿಕರು ನಾಳೆಯಿಂದ ತರಕಾರಿಗಾಗಿ ಬೀದಿಗೆ ಇಳಿಯದೆ ಅವಶ್ಯವಿರುವ ಕಿರಾಣಿ ಸಾಮಗ್ರಿಗಳ ಖರೀದಿಗಾಗಿ ಮನೆಯಿಂದ ಒಬ್ಬಸದಸ್ಯರು ನಿಗದಿಪಡಿಸಿದ ಸಮಯದಲ್ಲಿ ಬಂದು ಖರೀದಿಸಿ ವೈರಸ್ ಸೋಂಕು ಹರಡದಂತೆ ಈ ಮುಂಜಾಗ್ರತಾ ಕಾರ್ಯದಲ್ಲಿ ಪ್ರತಿಯೊಬ್ಬರೂ ಸಹಕರಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ  ನಿರ್ದೇಶಕ ರುದ್ರೇಶ, ಗದಗ ತಹಸೀಲ್ದಾರ್‌  ಶ್ರೀನಿವಾಸಮೂರ್ತಿ ಕುಲಕರ್ಣಿ, ಗದಗ-ಬೆಟಗೇರಿನಗರಸಭೆ ಪೌರಾಯುಕ್ತ ಮನ್ಸೂರ  ಅಲಿ, ಸಿ.ಪಿ.ಐ.ಆರ್.ಎಫ್, ದೇಸಾಯಿ, ಗದಗ  ಡಿ.ಎಸ್.ಪಿ. ಪ್ರಹ್ಲಾದ, ನಗರದ ತರಕಾರಿ, ಕಿರಾಣಿ ವರ್ತಕರು ಉಪಸ್ಥಿತರಿದ್ದರು.

Leave a Reply

error: Content is protected !!
LATEST
ಸರ್ಕಾರಿ ವಾಹನ ಚಾಲಕರಿಗೆ ಕನಿಷ್ಠ ವೇತನ ₹34,100 ನಿಗದಿಗೊಳಿಸಿ ಸರ್ಕಾರ ಆದೇಶ ಇಂದಿನಿಂದ ನಿವೃತ್ತ ಸಾರಿಗೆ ನೌಕರರಿಗೆ ಉಪಧನ, ನಿವೃತ್ತಿ ಗಳಿಕೆ ರಜೆ ನಗದೀಕರಣ ಪಾವತಿಗೆ ಎಂಡಿ ಆದೇಶ BMTC: ಡಿ.24ರಂದು ನೌಕರರಿಗೆ 7 ತಿಂಗಳ ತುಟ್ಟಿಭತ್ಯೆ ಹಿಂಬಾಕಿ ಪಾವತಿಗೆ ಎಂಡಿ ಆದೇಶ KKRTC ಸಂಸ್ಥೆಯ ಸಿಬ್ಬಂದಿಗಳಿಗೆ ಉಚಿತ ಒಂದು ಕೋಟಿ ರೂ. ಅಪಘಾತ ವಿಮೆ ಜತೆಗೆ ನೌಕರರಿಗೆ ಸಿಗುವ ಇತರ ಸೌಲಭ್ಯಗಳು KKRTC: ನಗದು ರಹಿತ ಚಿಕಿತ್ಸೆಗಾಗಿ ಸಿಬ್ಬಂದಿಗಳ ವೈಯಕ್ತಿಕ, ಅವಲಂಬಿತರ ಮಾಹಿತಿ ಸಂಗ್ರಹಿಸಿ- ಅಧಿಕಾರಿಗಳಿಗೆ ಆದೇಶ ಹೈಕೋರ್ಟ್‌ ಆದೇಶದ ಬೆನ್ನಲ್ಲೇ ದಾವಣಗೆರೆಯಲ್ಲಿ ಪೊಲೀಸರಿಂದ ಸಿ.ಟಿ.ರವಿ ಬಿಡುಗಡೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ: ಮಂಡ್ಯಕ್ಕೆ ಆಗಮಿಸಿದ ಸಮ್ಮೇಳನಾಧ್ಯಕ್ಷರಿಗೆ ಸ್ವಾಗತ ಉತ್ತಮ ಆಡಳಿತ ಸಪ್ತಾಹ: ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸಿದ ಡಿಸಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅಶ್ಲೀಲ ಪದ ಬಳಕೆ ಆರೋಪ: ಸಿ.ಟಿ.ರವಿ ಬಂಧನ ಸಾರ್ವಜನಿಕರ ಸಮಸ್ಯೆ ಶೀಘ್ರ ಪರಿಹರಿಸಿ: ಅಧಿಕಾರಿಗಳಿಗೆ ಡಿಸಿ ಸೂಚನೆ