NEWSದೇಶ-ವಿದೇಶ

ನಾಳೆ ರಾತ್ರಿ 9ಗಂಟೆಗೆ ಮನೆ ದೀಪಗಳಷ್ಟೇ ಆರಿಸಿ

ಬೀದಿ ದೀಪಗಳು ಬೆಳಗುತ್ತಿರಲಿ ಎಂದು ತಿಳಿಸಿದ ಕೇಂದ್ರ ಸರ್ಕಾರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: “ಭಾರತೀಯರೆಲ್ಲರೂ ಏ.5ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ತಮ್ಮ ಮನೆಗಳಲ್ಲಿಯ ವಿದ್ಯುತ್ ದೀಪಗಳನ್ನು ನಂದಿಸಲು ಕೋರಿರುತ್ತಾರೆ. ಈ ಕುರಿತು ಸಾಮಾನ್ಯ ಜನರಲ್ಲಿ ವಿದ್ಯುತ್ ದೀಪಗಳನ್ನು ಮಾತ್ರ ನಂದಿಸಲು ಹಾಗೂ ಇತರೆ ವಿದ್ಯುತ್ ಉಪಕರಣಗಳನ್ನು ಅಂದರೆ ರೆಫ್ರಿಜರೇಟರ್, ಹವಾನಿಯಂತ್ರಿತ ಸಾಧನಗಳು, ಫ್ಯಾನ್ ಗಳು ಇತ್ಯಾದಿಗಳನ್ನು ದಿನನಿತ್ಯದಂತೆ ಚಾಲ್ತಿಯಲ್ಲಿಡಲು ಕೋರಲಾಗಿದೆ.

ಇಂದು ರಾಷ್ಟ್ರೀಯ ವಿದ್ಯುತ್ ರವಾನೆ ಕೇಂದ್ರದೊಂದಿಗೆ ವಿದ್ಯುತ್ ಜಾಲದ ಭದ್ರತೆ ಕುರಿತು ವೀಡಿಯೋ ಕಾನ್ಫರೆನ್ಸ್ ಮುಖಾಂತರ ವಿಶ್ಲೇಷಿಸಲಾಯಿತು.

ರಾಷ್ಟ್ರೀಯ ವಿದ್ಯುತ್ ರವಾನೆ ಕೇಂದ್ರ ರವರ ಸೂಚನೆ ಪ್ರಕಾರ ಎಲ್ಲಾ ಹಿರಿಯ ಅಧಿಕಾರಿಗಳು, ವಿದ್ಯುತ್ ಉತ್ಪಾದನಾ ಕೇಂದ್ರಗಳು ವಿದ್ಯುತ್ ವಿತರಣಾ ಕಂಪನಿಗಳು ರಾಜ್ಯ ವಿದ್ಯುತ್ ರವಾನೆ ಕೇಂದ್ರ  ಹಾಗೂ ಕ.ವಿ.ಪ್ರ.ನಿನಿ ರವರಿಗೆ ಮೇಲಿನ ಅವಧಿಯಲ್ಲಿ ವಿದ್ಯುತ್ ಸರಬರಾಜಿನ ಮೇಲ್ವಿಚರಣೆಯನ್ನು ಸೂಕ್ತ ರೀತಿಯಲ್ಲಿ ಮಾಡುವಂತೆ ಕೋರಲಾಗಿದೆ.

ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೆ ಅಂದು ವಿದ್ಯುತ್ ಸರಬರಾಜನ್ನು ಸರ್ಮಪಕವಾಗಿ ನಿರ್ವಹಿಸಲು ಸಲಹಾ ಟಿಪ್ಪಣಿಯನ್ನು ಹೊರಡಿಸಲಾಗಿದೆ.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟೀಯಿಂದ ಬೀದಿ ದೀಪಗಳನ್ನು ಚಾಲ್ತಿಯಲ್ಲಿ ಇಡಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಆಸ್ಪತ್ರೆಗಳಯ ಹಾಗೂ ತುರ್ತು ಸೇವೆಯಲ್ಲಿ ಇರುವ ಸಂಸ್ಥೆಗಳ ವಿದ್ಯುತ್ ದೀಪವನ್ನು ಮೇಲಿನ ಅವಧಿಯಲ್ಲಿ ಚಾಲ್ತಿಯಲ್ಲಿ ಇಡಲು ಕೋರಲಾಗಿದೆ.

ವಿದ್ಯುತ್ ಸರಬರಾಜಿನ ಬಗ್ಗೆ ಭಯಪಡುವ ಅಗತ್ಯವಿಲ್ಲ ಹಾಗೂ ಸಾರ್ವಜನಿಕರು ಈ ಕುರಿತು ಸಹಕರಿಸಬೇಕೆಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ತಿಳಿಸಿದೆ.

Leave a Reply

error: Content is protected !!
LATEST
ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಗೆ ಹರಿದು ಬಂತು ಕೋಟಿ ಕೋಟಿ ಹಣ