NEWSನಮ್ಮಜಿಲ್ಲೆ

ನಿಜಾಮುದ್ದೀನ್‌ ಜಮಾತ್‌ಗೆ ಹೋಗಿದ್ದವರ ಮೇಲೆ ನಿಗಾ

ಗದಗ ಜಿಲ್ಲೆ ಕೊವಿಡ್-19 ಪರಿಸ್ಥಿತಿ ಅವಲೋಕನ l ಸಚಿವ ಸಿ.ಸಿ. ಪಾಟೀಲ್‌ರಿಂದ ವಿಡಿಯೋ ಕಾನ್ಫರೆನ್ಸ್‌

ವಿಜಯಪಥ ಸಮಗ್ರ ಸುದ್ದಿ

ಗದಗ: ವಿಶ್ವವ್ಯಾಪಿ ಕೊವಿಡ್-19 ವೈರಾಣು ಸೋಂಕು ತಡೆಗೆ ದೇಶಾದ್ಯಂತ ಪ್ರಧಾನಿಗಳು ಲಾಕ್‌ಡೌನ್‌ ಘೊಷಿಸಿರುವ  ಪರಿಸ್ಥಿತಿಯಲ್ಲಿ  ಗದಗ ಜಿಲ್ಲೆಯ ಜಿಲ್ಲಾ ಉಸ್ತುವಾರಿ, ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ ವಿಡಿಯೋ ತಂತ್ರಜ್ಞಾನ ಬಳಸಿ  ಜಿಲ್ಲೆಯ ಕೊವಿಡ್-19 ನಿಯಂತ್ರಣ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಗದಗ ಜಿಲ್ಲೆ ಯ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ.ಆನಂದ  ಜೊತೆ  ವಿಡಿಯೋಕಾನ್ಫೆ‌ರೆನ್ಸ್‌ ನಡೆಸಿ ದಿನದ ಬೆಳವಣಿಗೆ ಕುರಿತು ಮಾಹಿತಿ ಪಡೆದು ಅಗತ್ಯದ ಸಲಹೆ ನಿರ್ದೇಶನ ನೀಡಿದರು.

ಇತ್ತೀಚಿನ ಬೆಳವಣಿಗೆಯಾದ ದೆಹಲಿಯ ನಿಜಾಮುದ್ದೀನ್‌ ಜಮಾತ್‌ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಿ ಅವರ ಸ್ವಂತ ಆರೋಗ್ಯ, ಅವರ ಕುಟುಂಬದ ಮತ್ತು ಸಮಾಜದ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಅವರನ್ನು ಕಡ್ಡಾಯವಾಗಿ ಆರೋಗ್ಯ ಪರೀಕ್ಷೆ, ನಿರ್ಬಂಧಿತ ನಿಗಾದಲ್ಲಿ ಕನಿಷ್ಠ ನಿಗಾ ಅವಧಿ ನಂತರ ಎರಡು ಬಾರಿ ಲ್ಯಾಬ್‌ ಪರೀಕ್ಷೆಗೆ ಒಳಪಡಿಸಲು ಆರೋಗ್ಯವಾಗಿರುವದು ಖಚಿತವಾದ ನಂತರವೇ ಅವರನ್ನು ನಿರ್ಬಂಧಿತ ನಿಗಾದಿಂದ ಬಿಡುಗಡೆ ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಈ ವರೆಗೆ 208 ಜನ ನಿಗಾಕ್ಕೆ ಒಳಗಾಗಿದ್ದು ದೆಹಲಿ ಪ್ರಕರಣದ 9 ಜನರು ಸೇರಿದಂತೆ ಒಟ್ಟು ಲ್ಯಾಲ್‌ಗೆ ಕಳಿಸಿದ 64ರ  ಪೈಕಿ 56 ಜನರ ವರದಿ -ve ( ನಕಾರಾತ್ಮಕ) ಆಗಿದೆ. ಇನ್ನು 8 ಪ್ರಕರಣದ  ಲ್ಯಾಬ ವರದಿ ಬಾಕಿ ಇದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.

ಜಿ.ಪಂ. ಸಿಇಒ ಸೋಂಕಿತ ವ್ಯಕ್ತಿಯಲ್ಲಿ  ಕೊವಿಡ-19 ವೈರಾಣು ಪ್ರಕಟವಾಗಲು ನಿಗಧಿತ 14 ದಿನಗಳ ಅವಧಿ  ಇದ್ದು ನಿಗಾದಲ್ಲಿ ಇದ್ದು ನಂತರ ಎರಡು ಬಾರಿ ಅವರನ್ನು ಪರೀಕ್ಷೆಗೆ ಒಳಪಡಿಸಿ ಸೊಂಕು ಇಲ್ಲವೆಂಬುದನ್ನು ಖಚಿತ ಪಡೆಸಿಕೊಂಡು ನಿರ್ಬಂಧದಿಂದ ಬಿಡುಗಡೆ ಮಾಡಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಂಬಂಧಿತ ಇಲಾಖೆಗಳ ಹಾಗೂ ಸಾರ್ವಜನಿಕರ ಸಹಕಾರದಿಂದ ದೆಹಲಿ ಪ್ರಕರಣ ಸೇರಿದಂತೆ ಬಾಧಿತ ಪ್ರದೇಶಗಳಿಂದ ಆಗಮಿಸಿದ ವ್ಯಕ್ತಿಗಳ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿ ಅದರಲ್ಲೂ ನಗರ ಪ್ರದೇಶಗಳಲ್ಲಿ ಪ್ರತಿಬಂಧಕಾಜ್ಞೆ ಪಾಲನೆ ಜೊತೆಗೆ ಸಾಮಾಜಿಕ ಅಂತರ ಕಾಪಾಡಲು ಸರ್ವ ರೀತಿಯಿಂದ ಪ್ರಯತ್ನಿಸಲಾಗುತ್ತಿದೆ ಎಂದರು.

ಒಟ್ಟಾರೆಯಾಗಿ ಜಿಲ್ಲೆಯ ಸಮಸ್ತ ಜನತೆಯ ಆರೋಗ್ಯ ರಕ್ಷಣೆಯ ಈ ವಿಶೇಷ ಸಂದರ್ಭದಲ್ಲಿ ಜಿಲ್ಲಾಡಳಿತ ಅಗತ್ಯದ ಕ್ರಮಗಳನ್ನು ಯಾವ ದಾಕ್ಷಿಣ್ಯವಿಲ್ಲದೆ ತೆಗೆದುಕೊಳ್ಳಬೇಕು. ದಿನದ ಬೆಳವಣಿಗೆ ಕುರಿತು ತಮಗೆ ಮಾಹಿತಿ ನೀಡಬೇಕು ಎಂದು ಸಚಿವ ಸಿ.ಸಿ.ಪಾಟೀಲ ಸೂಚನೆ ನೀಡಿದರು.

Leave a Reply

error: Content is protected !!