ನ್ಯೂಡೆಲ್ಲಿ: ಕಾಂಗ್ರೆಸ್ ಹೈ ಕಮಾಂಡ್ ಭೇಟಿಗೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಸಹೋದರನ ದೆಹಲಿ ನಿವಾಸದಲ್ಲಿ ಮಹತ್ವದ ಸಭೆ ನಡೆಸುತ್ತಿದ್ದಾರೆ.
ಹೈ ಕಮಾಂಡ್ ಭೇಟಿಗೂ ಮುನ್ನ ನಡೆಸುತ್ತಿರುವ ಈ ಸಭೆಯಲ್ಲಿ ರಣತಂತ್ರ ರೂಪಿಸುವರೆ ಡಿಕೆಶಿ ಎಂಬ ಕುತೂಹಲ ಮೂಡಿಸುತ್ತಿದೆ ಶಾಸಕರಲ್ಲಿ.
ಇನ್ನು ಕಳೆದ ಮೂರು ವರ್ಷಗಳಿಂದ ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯದಲ್ಲಿ ಪಕ್ಷಸಂಘಟನೆ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಹೀಗಾಗಿ ಇವರನ್ನೇ ಸಿಎಂ ಮಾಡಬೇಕು ಎಂಬ ಕೂಗು ಕೂಡ ಪಕ್ಷದೊಳಗೆ ಕೇಳಿ ಬರುತ್ತಿದೆ.
ಇತ್ತ ಡಿಕೆಶಿ ಅವರ ಮೇಲೆ ಹಲವಾರು ಕೇಸುಗಳಿವೆ ಅವುಗಳಲ್ಲಿ ಯಾವುದಾದರೊಂದರಡಿ ಬಂಧನವಾದರೆ ಪಕ್ಷಕ್ಕೆ ಮುಜುಗರವಾಗಲಿದೆ. ಹಾಗಾಗಿ ಈ ಬಾರಿ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಬೇಕು ಎಂದು ಮತ್ತೊಂದು ಬಣ ಹೇಳುತ್ತಿದೆ.
ಈ ಎಲ್ಲದರ ನಡುವೆ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇವರಿಬ್ಬರೂ ಸೋಲದ ಹಿನ್ನೆಯಲ್ಲಿ ಹೈ ಕಮಾಂಡ್ ಸಭೆ ಮೇಲೆ ಸಭೆ ನಡೆಸುತ್ತಿದೆ. ಆದರೂ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.
ಇನ್ನು ಶತಯಗತಾಯ ಇನ್ನು 24 ಗಂಟೆಯೊಳಗೆ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಲೇ ಬೇಕು ಎಂಬ ತೀರ್ಮಾನಕ್ಕೆ ಬಂದಿರುವ ಹೈ ಕಮಾಂಡ್ ಸಿಎಂ ಆಗಲೇ ಬೇಕು ಎಂದು ಪಟ್ಟು ಹಿಡಿದಿರುವ ಇಬ್ಬರನ್ನೂ ಮುಖಾಮುಖಿ ಕೂರಿಸಿಕೊಂಡು ಅಂತಿಮ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.