NEWSನಮ್ಮರಾಜ್ಯ

ಪೊಲೀಸ್‌, ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ಖಂಡಿಸಿ ಆಕ್ರೋಶ

ರಾಜಕೀಯ ಬೆರೆಸದೇ ಸೋಂಕು ನಿವಾರಣೆಗೆ ಒಗ್ಗಟ್ಟು ಪ್ರದರ್ಶನ ಅತ್ಯಗತ್ಯ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಪಾದರಾಯನಪುರದಲ್ಲಿ ನಿನ್ನೆ ನಡೆದ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಪೊಲೀಸರ ಮೇಲಿನ ಹಲ್ಲೆ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಒಂದೆಡೆ ಕೊರೊನಾ ಸೋಂಕಿನಿಂದ ಕ್ವಾರಂಟೈನ್‌ನಲ್ಲಿರುವ ಮಂದಿಗೆ ಪೊಲೀಸರು ಸೇರಿದಂತೆ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ಮಾಡುತ್ತಿರುವುದಕ್ಕೆ ಶಾಸಕ ಜಮೀರ್‌ ಅಹಮದ್‌ ಅವರ ವಿರುದ್ಧ ಹಲವು ಮಂದಿ ರಾಜಕೀಯ ಮುಖಂಡರು ಹರಿಹಾಯ್ದಿದ್ದಾರೆ. ಹಲ್ಲೆಯ ಹಿಂದೆ ಜಮೀರ್‌ ಕೈವಾಡವಿದೆ ಎಂದು ಕಿಡಿಕಾರಿದ್ದಾರೆ.

ಸ್ವತಃ ಸಿಎಂ ಯಡಿಯೂರಪ್ಪ ಅವರೇ ಜಮೀರ್‌ ಹೇಳಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರ ಜನರ ಆರೋಗ್ಯ ದೃಷ್ಟಿಯಿಂದ ಹಗಲಿರುಳು ಶ್ರಮಿಸುತ್ತಿದೆ. ಆದರೆ ಜಮೀರ್‌ ಅವರು ಸಂಜೆ ಬಂದಿದ್ದು ತಪ್ಪು, ಅವರು ಬೆಳಗ್ಗೆ ಬರಬೇಕಿತ್ತು ಎಂದು ಮಾಧ್ಯಮದ ಮುಂದೆ ಹೇಳಿಕೆ ನೀಡಿರುವುದು ಎಷ್ಟು ಸರಿ ಈ ರೀತಿ ನಡೆದುಕೊಂಡರೆ ಕೊರೊನಾಕ್ಕೆ ಬಲಿಯಾಗುವವರ ಸಂಖ್ಯೆ ಏರಿಕೆಯಾಗಲಿದೆ ಎಂದು ಕಿಡಿಕಾರಿದ್ದಾರೆ.

ಇನ್ನೊಂದೆಡೆ ಆರೋಗ್ಯ ಸಚಿವರು ಕಿಡಿಕಾರಿದ್ದು ಜಮೀರ್‌ ಅವರ ಈ ನಡೆ ನೋಡಿದರೆ ಹಲ್ಲೆಗೆ ಪ್ರಚೋದನೆ ನೀಡಿದಂತ್ತಿದೆ. ಹಲ್ಲೆ ಮಾಡಿದವರು ಯಾರೇ ಆದರೂ ಅವರಿಗೆ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಅವರನ್ನು ಸಂಪುಟ ಸಭೆಯಲ್ಲೂ ಒತ್ತಾಯಿಸುವುದಾಗಿ ಹೇಳಿದ್ದಾರೆ.

ಇನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಡಿಸಿಪಿ ರಮೇಶ್‌ ಅವರನ್ನು ಹಲ್ಲೆ ಸಂಬಂಧ ತರಾಟೆಗೆ ತೆಗದುಕೊಂಡಿದ್ದು, ನಿಮಗೆ ಕೊರೊನಾ ಸಂಬಂಧದ ಕೆಲಸ ಬಿಟ್ಟು ಬೇರೆ ಕೆಲಸ ಏನಿದೆ. ಗಲಾಟೆ ವೇಳೆ ಎಲ್ಲಿಗೆ ಹೋಗಿದ್ದೀರಿ ಎಂದು ಡಿಸಿಪಿ ವಿರುದ್ಧ ಕಿಡಿ ಕಾರಿದರು.

ಕಂದಾಯ ಸಚಿವ ಆರ್‌. ಅಶೋಕ್‌ ಅವರು ಕೂಡ ಈ ಸಂಬಂಧ ಕಿಡಿಕಾರಿದ್ದು ಇಂಥ ಕಾನೂನು ವಿರೋಧಿಗಳನ್ನು ಮಟ್ಟಹಾಕಬೇಕು. ಕೊರೊನಾ ವಿರುದ್ಧ ಇಡೀ ದೇಶವೇ ಸಂಕಷ್ಟಕ್ಕೆ ಸಿಲುಕಿರುವುದರಿಂದ ಸರ್ಕಾರ ರೋಗ ನಿಯಂತ್ರಣಕ್ಕೆ ಮುಂದಾಗಿದೆ. ಆದರೆ ಅದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದು, ಕಡಿವಾಣ ಹಾಕುವ ಅಗತ್ಯವಿದೆ ಎಂದು ಹೇಳಿದರು.

ಜಮೀರ್‌ ಅಹಮದ್‌ ನಡೆ ನಾಚಿಕೆಗೇಡು

ಇನ್ನು ಜಮೀರ್‌ ಅಹಮದ್‌ ಅವರು ನಡೆದುಕೊಂಡಿವುದು ನಿಜಕ್ಕೂ ನಾಚಿಕೆ ಉಂಟುಮಾಡುವಂತ್ತಿದೆ. ಹೀಗೆ ನಡೆದುಕೊಂಡರೆ ವೈದ್ಯಕೀಯ ಸಿಬ್ಬಂದಿ, ಆರಕ್ಷಕರು ತಮ್ಮ ಸೇವೆಯನ್ನು ನಿಭಾಯಿಸುವುದು ಹೇಗೆ ಸಾಧ್ಯ ಎಂಬುವುದು ಜನರ ಆಕ್ರೋಶಕ್ಕೂ ಕಾರಣವಾಗಿದದೆ. ಜಮೀರ್‌ ನಡೆ ಇಡೀ ಜನತೆಯ ಆಕ್ರೋಶಕ್ಕೂ ಕಾರಣವಾಗಿದೆ. ಮುಂದೆ ಈರೀತಿ ನಡೆದುಕೊಂಡರೆ ಸುಮ್ಮನೇ ಕೂರುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ಅದು ಏನೇ ಇರಲಿ ರಾಜಕೀಯವನ್ನು ಕೊರೊನಾದಲ್ಲಿ ಬೆರೆಸದೆ ರಾಜಕೀಯವನ್ನು ಬದಿಗೊತ್ತಿ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು. ಅದಕ್ಕೆ ಪಕ್ಷಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕಿದೆ. ಇದು ನಾಡಿನ ಸಮಸ್ತ ಜನತೆಗೂ ಒಳ್ಳೆಯದಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಸೋಂಕಿನ ವಿರುದ್ಧ ಹೋರಾಟ ಮಾಡಬೇಕಿದೆ.

Leave a Reply