CrimeNEWSನಮ್ಮರಾಜ್ಯ

ಪ್ರೀತಿಯ ನಾಟಕವಾಡಿ ಕಾಮತೃಷೆಗೆ ಯುವತಿ ಬಳಸಿಕೊಂಡು ನಂತರ ಕೊಲೆಗೆ ಯತ್ನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ತನ್ನ ಕಾಮ ತೃಷೆ ತೀರಿಸಿಕೊಳ್ಳುವವರೆಗೂ ನಿನ್ನನ್ನು ಪ್ರೀತಿಸುತ್ತಿದ್ದೇನೆ. ನೀನು ಸಿಗದೆ ನಾನು ಜೀವಂತವಾಗಿ ಬದುಕಲಾರೆ ಎಂದೆಲ್ಲ ತುಂಬೆಗಿಡ ಹತ್ತಿಸಿದ ಕಾಮುಕನೊಬ್ಬ ಪ್ರೀತಿಯ ಹೆಸರಿನಲ್ಲಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು ನಂತರ ಆಕೆಯ ಕತ್ತು ಹಿಸುಕಿ ಸಾಯಿಸಲು ಯತ್ನಿಸಿರುವುದು ಮಾರತ್ತಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕಾಮತೃಷೆ ತಿರಿದ ಬಳಿಕ ದೂರ ಹೋಗು ಎಂದ ಪಾಪಿ

ಎನ್‌ಜಿಒ ಒಂದರಲ್ಲಿ ಕೆಲಸ ಮಾಡುತ್ತಿರುವ ಯುವತಿ ಮಾರತ್ತಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆ ವೇಳೆ ಅರ್ಕಾ ಭಕ್ಷಿ ಎಂಬಾತನ ಪರಿಚಯವಾಗಿದೆ.  ಬಳಿಕ ಈ ಇಬ್ಬರ ನಡುವಿನ ಪರಿಚಯ ಸ್ನೇಹ, ಪ್ರೀತಿಗೆ ತಿರುಗಿದೆ. ಆಕೆ ತಾನು ಪ್ರೀತಿಸುತ್ತಿರುವ ವಿಚಾರವನ್ನುತನ್ನ ಪಾಲಕರಿಗೆ ತಿಳಿಸಿದ್ದಾಲೆ. ಅರ್ಕಾ ಭಕ್ಷಿ ಕೂಡ ಈ ಸಂಬಂಧ ಯುವತಿಯ ಪಾಲಕರೊಂದಿಗೆ ಮಾತನಾಡಿ, ಮದುವೆ ಆಗುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ಯುವತಿಯ ಪಾಲಕರು ಇಬ್ಬರೂ ಓಡಾಡಲು ಅನುಮತಿ ನೀಡಿದ್ದರು ಎಂದು ಹೇಳಲಾಗಿದೆ.

ಈ ನಡುವೆ ಕೆಲ ತಿಂಗಳ ಹಿಂದೆ ಆರೋಪಿ ಕೆಲಸ ಮಾಡುತ್ತಿದ್ದ ಕಚೇರಿ ಸಂಜಯನಗರಕ್ಕೆ ಸ್ಥಳಾಂತರಗೊಂಡಿದೆ. ಹೀಗಾಗಿ, ತನ್ನ ವಾಸ್ತವ್ಯವನ್ನು ಸಂಜಯನಗರಕ್ಕೆ  ಬದಲಿಸಿಕೊಂಡಿದ್ದ, ಹೀಗೆ ನಿತ್ಯ ಫೋನ್‌ ಸಂಭಾಷೇಯಲ್ಲಿ ತೊಡಗಿದ್ದ ಈ ಪ್ರೇಮಿಗಳಿಗೆ ಅಂದು ಫೆ.14ರ ಪ್ರೇಮಿಗಳ ದಿನ ಬಂದಿದೆ. ಈ ಸಮಯವನ್ನೇ ಕಾಯುತ್ತಿದ್ದ ಕಾಮುಕ ಯುವತಿಯನ್ನು ತನ್ನ ಮನೆಗೆ ಕರೆಸಿಕೊಂಡು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಅಷ್ಟೇ ಅಲ್ಲ ಬಳಿಕ ಪಬ್‌ಗೂ ಕರೆದುಕೊಂಡು ಹೋಗಿ ಪಾರ್ಟಿ ಮಾಡಿ ಕುಣಿದು ಕುಪ್ಪಳಿಸಿದ್ದಾನೆ. ಆ ಪಾರ್ಟಿಯಲ್ಲೂ ಕೂಡ ಈಕೆಯನ್ನು ಮದುವೆ ಆಗುತ್ತೇನೆ ಎಂದು ತನ್ನ ಸ್ನೇಹಿತರ ಮುಂದೆ ಹೇಳಿ, ಉಂಗುರ ತೊಡಿಸಿದ್ದಾನೆ.

ಈ ನಡುವೆ ತಿಂಗಳು ಸವೆದು ಲಾಕ್‌ಡೌನ್‌ ಘೋಷಣೆಯಾದ ಬಳಿಕ, ‘ಇಬ್ಬರೂ ಸಂಜಯನಗರದಲ್ಲೇ ಕೆಲಸ ಮಾಡೋಣ’ ಎಂದು ಪುಸಲಾಯಿಸಿ ಆಕೆಯನ್ನು ಮಾರತ್ತಹಳ್ಳಿಯಿಂದ ಸಂಜಯನಗರದ ತನ್ನ ಮನೆಗೆ ಕರೆಸಿಕೊಂಡಿದ್ದ. ಆದರೆ ಈ ವಿಷಯ ಆರೋಪಿಯ ಪೋಷಕರಿಗೆ ತಿಳಿದಿದೆ.

ಆತನ ಪಾಲಕರು ಈಕೆಗೆ ತಮ್ಮ ಮಗನಿಂದ ದೂರ ಇರುಎಂದು ಮೆಸೇಜ್‌ ಮಾಡಿ ಎಚ್ಚರಿಸಿದ್ದಾರೆ. ಅಲ್ಲದೇ ಆಯನ್ನು ಬಿಡದಿದ್ದರೆ ನಿನ್ನನ್ನು ಮನೆಯಿಂದ ಹೊರಗೆ ಹಾಕುತ್ತೇವೆ ಎಂದು ಮಗನಿಗೂ ಬೆದರಿಸಿದ್ದಾರೆ. ತನ್ನ ಪಾಲಕರ ಬೆದರಿಕೆಗೆ ಹೆದರಿದ ಆರೋಪಿ, ಯುವತಿಯನ್ನು ವಾಪಸ್‌ ಮನೆಗೆ ಹೋಗುವಂತೆ ತಿಳಿಸಿದ್ದಾನೆ. ಅದಕ್ಕೆ ಯುವತಿ ನಿರಾಕರಿಸಿದ್ದಾಳೆ. ಆ ವಿಚಾರಕ್ಕೆ ಗಲಾಟೆ ನಡೆದು ಆರೋಪಿ ಯುವತಿಯ ಕುತ್ತಿಗೆ ಹಿಸುಕಿ ಸಾಯಿಸಲು ಯತ್ನಿಸಿದ್ದ ಎಂದು ಹೇಳಿ ಸದ್ಯ ಈಗ ಯುವತಿ ತನ್ನ ಜೀವನಕ್ಕೆ ನೆಲೆ ನೀಡಬೇಕು ಎಂದು ಪೊಲೀಸರ ಮೊರೆ ಹೋಗಿದ್ದಾಳೆ.

ಇನ್ನು ಮಾರತ್ತಹಳ್ಳಿಯ ಈ 30 ವರ್ಷದ ಯುವತಿ ನನ್ನ ಮೇಲೆ ಕೊಲೆ ಯತ್ನ ನಡೆದಿದೆ ಎಂದು ನೀಡಿದ ದೂರಿನ ಮೇರೆಗೆ ಸಂಜಯನಗರ ನಿವಾಸಿ ಅರ್ಕಾ ಭಕ್ಷಿ ಎಂಬಾತನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Leave a Reply

error: Content is protected !!
LATEST
ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಕೆಡವಿ ಮಾಲ್ ಕಟ್ಟುವ ಬಿಡಿಎ ನಿರ್ಧಾರಕ್ಕೆ ಎಎಪಿ ವಿರೋಧ ಜೈಲಲ್ಲೇ ದೇವರಾಜೇಗೌಡರ ಜೀವಕ್ಕೆ ಅಪಾಯವಿದೆ : ಸುರೇಶಗೌಡ ಆತಂಕ KSRTC ಬಸ್‌- ಕಾರು ನಡುವೆ ಭೀಕರ ಅಪಘಾತ: ಕಾರು ಚಾಲಕ ಸಾವು, ನಾಲ್ವರ ಸ್ಥಿತಿ ಗಂಭೀರ ಜಿಆರ್ ಫಾರ್ಮ್ ಹೌಸ್‌ನಲ್ಲಿ ರೇವ್​ ಪಾರ್ಟಿ: ನಟಿಯರು ಸೇರಿ 80ಕ್ಕೂ ಹೆಚ್ಚು ಬಂಧನ KSRTC: ಹೆದ್ದಾರಿಯಲ್ಲಿ ಕೆಟ್ಟುನಿಂತ ಬಸ್‌ಗಳು - ಕಿಮೀ ವರೆಗೆ ಟ್ರಾಫಿಕ್ ಜಾಮ್ KSRTC: ₹185 ಟಿಕೆಟ್‌ ಕೊಟ್ಟು ₹200 ಕೇಳಿದ ಕಂಡಕ್ಟರ್‌ - ದೂರು ಕೊಟ್ಟ ಪ್ರಯಾಣಿಕ ಧೈರ್ಯವಿದ್ದರೆ ಎಎಪಿ ಮುಖಂಡರೆಲ್ಲರನ್ನೂ ಜೈಲಿಗೆ ಹಾಕಿ: ಪ್ರಧಾನಿ ಮೋದಿಗೆ ಪೃಥ್ವಿ ರೆಡ್ಡಿ ಸವಾಲು ಪತ್ನಿ, ಮಗನಿಗೆ ಮಾಸಿಕ ಜೀವನಾಂಶ ಪಾವತಿಸದ ಪತಿ ಆಸ್ತಿ ಮುಟ್ಟುಗೋಲು: ಹೈಕೋರ್ಟ್ ಮಹತ್ವದ ಆದೇಶ ಬೆಳ್ಳಂಬೆಳಗ್ಗೆ ಸರಣಿ ಅಪಘಾತ: ಕಾರು ನಜ್ಜುಗುಜ್ಜು - ಪ್ರಯಾಣಿಕರು ಸೇಫ್ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ:‌ ಶೇ.25.5 ವೇತನ ಹೆಚ್ಚಳ ಬಹುತೇಕ ಖಚಿತ