ಬಾಗಲಕೋಟೆ: 7 ಕ್ಷೇತ್ರಗಳಲ್ಲಿ ಐದನ್ನು ಗೆದ್ದು ಬೀಗಿದ ಕಾಂಗ್ರೆಸ್- ಎರಡಕ್ಕೆ ತೃಪ್ತಿಪಟ್ಟುಕೊಂಡ ಬಿಜೆಪಿ
ಬಾಗಲಕೋಟೆ: ಜಿಲ್ಲೆಯ 7 ಕ್ಷೇತ್ರಗಳಲ್ಲಿನ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. 7 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 5 ಕ್ಷೇತ್ರಗಳಲ್ಲಿ ಜಯಗಳಿಸಿದ್ದು, 2 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಇನ್ನು ಖಾತೆಯನ್ನೇ ತೆರೆಯದೆ ಹಿಂದೆ ಸರಿದಿದೆ ಜೆಡಿಎಸ್.
ಮುಧೋಳ: ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ತಿಮ್ಮಾಪುರ ರಾಮಪ್ಪ ಬಾಳಪ್ಪ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ವಿರುದ್ಧ ಗೆದ್ದಿದ್ದಾರೆ. ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸತೀಶ್ ಚಿನ್ನಪ್ಪ, ಆಪ್ ಅಭ್ಯರ್ಥಿ ಗಣೇಶ್ ಪರಶುರಾಮ್ ಪವಾರ್ ಹಾಗೂ ಜೆಡಿಎಸ್‌ನಿಂದ ಧರ್ಮರಾಜ್ ವಿಠಲ್ ದೊಡ್ಡಮನಿ ಸ್ಪರ್ಧಿಸಿದ್ದರು.
ತೆರದಾಳ: ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದು ರಾಮಪ್ಪ ವಿರುದ್ಧ ಜಯ ಗಳಿಸಿದ್ದಾರೆ. ಕ್ಷೇತ್ರದಲ್ಲಿ ಆಪ್ ಪಕ್ಷದಿಂದ ಅರ್ಜುನ್ ಹಳಗಿಗೌಡರ್ ಹಾಗೂ ಜೆಡಿಎಸ್‌ನಿಂದ ಸುರೇಶ್ ಅರ್ಜುನ್ ಮಡಿವಾಳರ್ ಸ್ಪರ್ಧಿಸಿ ಸೋತಿದ್ದಾರೆ.
ಜಮಖಂಡಿ: ಬಿಜೆಪಿ ಅಭ್ಯರ್ಥಿ ಜಗದೀಶ್ ಶಿವಯ್ಯ ಗುಡಗುಂಟಿ ಅವರು ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿದ್ದು ನ್ಯಾಮಗೌಡ ವಿರುದ್ಧ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಬೀಳಗಿ: ಕಾಂಗ್ರೆಸ್ ಅಭ್ಯರ್ಥಿ ಜೆಟಿ ಪಾಟಿಲ್ ಬೀಳಗಿ ಕ್ಷೇತ್ರದಲ್ಲಿ ಭರ್ಜರಿ ಜಯ ಗಳಿಸಿದ್ದಾರೆ. ಬಿಜೆಪಿ ಪಕ್ಷದಿಂದ ಮುರುಗೇಶ್ ನಿರಾಣಿ, ಆಪ್‌ನಿಂದ ಕೋಮರ್ ಮುತ್ತಪ್ಪ ಹಾಗೂ ಜೆಡಿಎಸ್‌ನಿಂದ ಸ್ಪರ್ಧಿಸಿದ ರುಕ್ಮುದ್ದೀನ್ ಸೌದಾಗರ್ ಸೋತಿದ್ದಾರೆ.
ಬಾದಾಮಿ: ಕ್ಷೇತ್ರದಲ್ಲಿ ಮೂರೂ ಪಕ್ಷಗಳಲ್ಲಿ ಭಾರೀ ಪೈಪೋಟಿ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಿಬಿ ಚಿಮ್ಮನಕಟ್ಟಿ ಗೆದ್ದಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಶಾಂತಗೌಡ ಪಾಟೀಲ್ ಹಾಗೂ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಹನುಮಂತ್ ಬಿ. ಮಾವಿನಮರದ್ ಸೋತಿದ್ದಾರೆ.
ಬಾಗಲಕೋಟೆ: ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್‌ವೈ ಮೇಟಿ ಗೆದ್ದಿದ್ದಾರೆ. ಬಿಜೆಪಿ ಪಕ್ಷದ ವೀರಭದ್ರಯ್ಯ ಚರಂತಿಮಠ, ಜೆಡಿಎಸ್ ಪಕ್ಷದ ದೇವರಾಜ್ ಪಾಟೀಲ್ ಸೋತಿದ್ದಾರೆ.
ಹುನಗುಂದ: ಕಾಂಗ್ರೆಸ್ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ್ ಹನಗುಂದ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಬಿಜೆಪಿಯಿಂದ ದೊಡ್ಡನಗೌಡ ಪಾಟೀಲ್ ಹಾಗೂ ಜೆಡಿಎಸ್‌ನಿಂದ ಬೋಳಿ ಶಿವಪ್ಪ ಮಹದೇವಪ್ಪ ಸೋತಿದ್ದಾರೆ.