Vijayapatha – ವಿಜಯಪಥ
Saturday, November 2, 2024
NEWSದೇಶ-ವಿದೇಶನಮ್ಮರಾಜ್ಯ

ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ 22 ಕಿ.ಮೀ. ಸಫಾರಿ ನಡೆಸಿದ ಪ್ರಧಾನಿ ನರೇಂದ್ರ ಮೋದಿಗೆ ದರ್ಶನ ಕೊಟ್ಟ ಟೈಗರ್‌

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿಗೆ ಪ್ರಧಾನಿ ಮೋದಿ ಎರಡು ಗಂಟೆಗಳ ಕಾಲ ಸುಮಾರು 22 ಕಿ.ಮೀ ಸಫಾರಿ ಮಾಡಿದರು.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಬಂಡಿಪುರದ ಬೋಳುಗುಡ್ಡದಿಂದ ಸಫಾರಿಗೆ ಆರಂಭವಾಯಿತು. ಮಾರ್ಗಮಧ್ಯೆ ಮಳ್ಳಾಳ ಕಳ್ಳಬೇಟೆ ಕ್ಯಾಂಪ್ ಬಳಿ ಕೊಂಚ ವಿರಾಮ ತೆಗೆದುಕೊಂಡರು.

ಸೋಲಿಗರ ಕೈಯಲ್ಲಿ ತಯಾರಿಸಿದ ಗ್ರೀನ್ ಟೀ ಸವಿದ ಮೋದಿ ಅವರಿಗೆ ಸಫಾರಿ ವೇಳೆ ಮೋದಿಗೆ ಹುಲಿ ದರ್ಶನವಾಯಿತು. ಬರೋಬ್ಬರಿ 22 ಕಿಮೀ ಅನ್ನು ಮೋದಿ ಅವರು ಸಫಾರಿ ವಾಹನದಲ್ಲಿ ಕ್ರಮಿಸಿದರು.

ಕೆಕ್ಕನಹಳ್ಳ ಚೆಕ್ ಪೋಸ್ಟ್ ಬಳಿ ಸಫಾರಿ ವಾಹನದಿಂದ ಇಳಿದು ಸರ್ಕಾರಿ ವಾಹನದಲ್ಲಿ ರಸ್ತೆ ಮೂಲಕ ಮಧುಮಲೈ ಫಾರೆಸ್ಟ್‌ಗೆ ಪಯಣ ಬೆಳೆಸಿದರು.

ಮಧುಮಲೈನ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿ ಅನಾಥ ಆನೆ ಮರಿ ಸಾಕಿ ಬೆಳೆಸಿದ ಆಸ್ಕರ್ ಪ್ರಶಸ್ತಿ ವಿಜೇತ ದಿ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೊಮ್ಮ ಮತ್ತು ಬೆಳ್ಳಿ ದಂಪತಿ ಭೇಟಿ ಮಾಡಿ ಸನ್ಮಾನಿಸಿದರು.

ಇನ್ನು ಹುಲಿ ಸಂರಕ್ಷಣೆ ಮಾಡುವ  ಯೋಜನೆ ಘೋಷಣೆಯಾಗಿ ಇಂದಿಗೆ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಮೋದಿ ಹೆಲಿಕಾಪ್ಟರ್‌ ಮೂಲಕ ಬಂಡೀಪುರಕ್ಕೆ ಆಗಮಿಸಿದರು. ಶನಿವಾರವೇ ಮೈಸೂರಿಗೆ ಬಂದಿಳಿದಿದ್ದ ಮೋದಿ ಇಂದು ಬಂಡೀಪುರದಲ್ಲಿ ಸಫಾರಿ ನಡೆಸಿದರು.

ಬೆಳಗ್ಗೆ 11 ಗಂಟೆಗೆ ಮೈಸೂರಿಗೆ ವಾಪಸ್‌ ಆಗಲಿದ್ದು ಮೈಸೂರಿನ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ನಡೆಯಲಿರುವ ಹುಲಿ ಯೋಜನೆಯ ಸುವರ್ಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಈ ಕಾರ್ಯಕ್ರಮದಲ್ಲಿ 2022ರ ಹುಲಿ‌ ಸಮೀಕ್ಷೆ ವರದಿ ಹಾಗೂ 50ನೇ ವರ್ಷಾಚರಣೆಗೆ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಈ ಕಾರ್ಯಕ್ರಮದ ಬಳಿಕ ಮಧ್ಯಾಹ್ನ 12:40ಕ್ಕೆ ದೆಹಲಿಗೆ ವಾಪಸ್‌ ಆಗಲಿದ್ದಾರೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ