NEWSಆರೋಗ್ಯನಮ್ಮಜಿಲ್ಲೆ

ಬಿಟಿಎಂ‌ ವಿಧಾನಸಭಾ ಕ್ಷೇತ್ರವ್ಯಾಪ್ತಿ ನಿತ್ಯ ಸಾವಿರಾರು ಜನರಿಗೆ ಊಟ

ಬಡವರ ಹಸಿವು ನೀಗಿಸಲು ಮುಂದಾದ ಶಾಸಕ ರಾಮಲಿಂಗಾ ರೆಡ್ಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೊರೊನಾ ತಡೆಗಟ್ಟಲು ಇಡೀ ಭಾರತದಲ್ಲಿ ಲಾಕ್ ಡೌನ್ ಆಗುತ್ತಿದ್ದಂತೆ ಕೂಲಿ ಕಾರ್ಮಿಕರು. ಬಡವರು ಹಾಗೂ ನಿರ್ಗತಿಕರು ಹೊಟ್ಟೆಗೆ ಊಟವಿಲ್ಲದೇ ತೀರ ಪರದಾಡುತ್ತಿದ್ದರು   ಇಂತಹ ಸಂದರ್ಭದಲ್ಲಿ   ಬಿಬಿಎಂಪಿಗೂ ಮುನ್ನವೇ ಬಡವರ ಹಸಿವನ್ನು ನೀಗಿಸಲು ಮತ್ತು ಬಡ ಕುಟುಂಬಗಳಿಗೆ ಆಹಾರ ವಿತರಣೆಗೆ ತಕ್ಷಣ ಶಾಸಕ ಆರ್. ರಾಮಲಿಂಗಾರೆಡ್ಡಿ ಕಾರ್ಯೋನ್ಮುಖರಾದ್ದಾರೆ.

ಕೂಲಿ ಕಾರ್ಮಿಕರು ,ಕಟ್ಟಡ ಕಾರ್ಮಿಕರು. ನಿರ್ಗತಿಕರು.ಕೊಳಗೇರಿ ನಿವಾಸಿಗಳು ಸೇರಿ ಕ್ಷೇತ್ರದ ಯಾವ ಒಬ್ಬ ಬಡವರು ಹಸಿವಿನಿಂದ ಬಳಲ‌ ಬಾರದು ಎಂಬ ಉದ್ದೇಶದಿಂದ ಪ್ರತಿದಿನ‌ ಕ್ಷೇತ್ರದಲ್ಲಿ _20 ಸಾವಿರ ಜನರಿಗೆ ಊಟಗಳ ಪ್ಯಾಕೇಟ್ ಮಾಡಿ ವಿತರಣೆ ಮಾಡಲಾಗುತ್ತಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಅವರು ಲಕ್ಕಸಂದ್ರದ ಚೌಡೇಶ್ವರಿ‌ ಛತ್ರದಲ್ಲಿ  ಊಟ ತಯಾರಿಸುವ ಅಡಿಗೆ ಮನೆಯಲ್ಲಿ ಊಟದ ಪ್ಯಾಕೇಟ್ ಗಳನ್ನು ಕ್ಷೇತ್ರದ ವಿವಿಧ ವಾರ್ಡ್ ಗಳಿಗೆ ತಾವೇ ಖುದ್ದಾಗಿ ಸರಬರಾಜು ಮಾಡುತ್ತ ಮಾತನಾಡಿದರು.

ದೇಶ ಸೇವೆ ದೊಡ್ಡದು

ನಮಗೆ ರಾಜಕೀಯ ಚುನಾವಣೆಯ ಸಂದರ್ಭಕ್ಕೆ ಮಾತ್ರ ಸೀಮಿತವಾಗಬೇಕು ರಾಜ್ಯ ಮತ್ತು ದೇಶದ ಜನರು ಸಂಕಷ್ಟದಲ್ಲಿದ್ದಾಗ ನಾವು ಜನನಾಯಕರು ಯಾವುದೇ ಜಾತಿ ಧರ್ಮ ಪಕ್ಷ ಭೇದ ಮಾಡದೇ ಜನಸೇವೆಗೆ ಮತ್ತು ದೇಶ ಸೇವೆಗೆ ಮುಂದಾಗ ಬೇಕು ಈ ನಿಟ್ಟಿನಲ್ಲಿ ನಾವು ಒಗ್ಗಟ್ಟಾಗಿ ಜನಸೇವೆ ಮಾಡಬೇಕು ದೇಶಮುಖ್ಯ ಎಂಬ ಉದ್ದೇಶದಿಂದ ಲಾಕ್ ಡೌನ್ ವ್ಯವಸ್ಥೆಯ ತುರ್ತು ಸಂದರ್ಭದಲ್ಲಿ ಬಡವರು ,ಕಾರ್ಮಿಕರು‌ ಹಾಗೂ ನಿರ್ಗತಿಕರ ಹಸಿವನ್ನು ನೀಗಿಸಬೇಕು ಎಂದರು.

ಹೊರಗೆ ಸುತ್ತಾಡದಂತೆ ಮನೆಯೊಳಗೆ ಇದ್ದುಕೊಂಡು ಊಟ ಮಾಡಿ ತಮ್ಮ ಹೆಂಡತಿ ಮಕ್ಕಳೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಲಿ ಎಂಬ ಜಾಗೃತಿ ಮೂಡಿಸಲು ಊಟ ತಯಾರಿಸಿ ಪ್ಯಾಕೇಟ್ ಮಾಡಿ ಕೊರಮಂಗಲ, ಮಡಿವಾಳ, ಸಿದ್ದಗುಂಟೆಪಾಳ್ಯ, ಆಡುಗೋಡಿ.ಲಕ್ಕಸಂದ್ರ, ಜಕ್ಕಸಂದ್ರ, ಜಯನಗರ, ಬಿಟಿಎಂ.ಇತ್ಯಾಧಿ ಕಡೆಗಳಲ್ಲಿ ತುರ್ತು ಊಟದ ಅವಶ್ಯಕತೆ ಇದೆಯೋ ಅಲ್ಲಿಗೆ ಗುರುತಿಸಿ ಪಟ್ಟಿ ಮಾಡಿ ಮನೆ‌ಬಾಗಿಲಿಗೆ ತಲುಪಿಸುವ ಕಾರ್ಯಮಾಡಲಾಗುತ್ತಿದೆ ಎಂದರು.

 

ರೈತರ ಸಂಕಷ್ಟಕ್ಕೆ ಸಹಕಾರ

ರಾಜ್ಯದ ಕೆಲವು ಪ್ರದೇಶದ ರೈತರು ಟೋಮೋಟ, ಹಣ್ಣು ತರಕಾರಿಗಳು ಬೆಳೆದ ರೈತರು ಬೆಲೆ ಮತ್ತು ಸಾಗಾಣಿಕೆ ಇಲ್ಲದೇ ಕಂಗಾಲಾಗಿದ್ದಾರೆ  ಇದನ್ನು ಮನಗಂಡು ನಾವು ನಮ್ಮ ಆಹಾರ ತಯಾರಿಕೆಗೆ ಮಂಡ್ಯ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಕಡೆಯ ರೈತರಿಂದ ನೇರವಾಗಿ ಮಾರುಕಟ್ಟೆ ಬೆಲೆಗೆ  ಕೊಂಡುಕೊಂಡು ತಂದು ಊಟದ ವ್ಯವಸ್ಥೆ ಮಾಡುತ್ತಿದ್ದೀವಿ. ಇದರಿಂದ ರೈತರಿಗೂ ಆರ್ಥಿಕ ಸಹಾಯ ವಾಗುತ್ತಿದೆ ಊಟಕ್ಕೆ ಉತ್ತಮವಾದ ತರಕಾರಿ ದೊರಕಿದಂತಾಗುತ್ತಿದೆ ಎಂದರು.

ಅಪ್ಪನ ಸೇವೆ ಮಗಳು ಸಾತ್

ತಂದೆ ರಾಮಲಿಂಗಾರೆಡ್ಡಿ ಅವರ ಜನಪರ ಕಾಳಜಿ, ಮಾದರಿ ಜನಸೇವೆಗೆ ಜಯನಗರ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿ ಸಾತ್ ನೀಡುತ್ತಿದ್ದು ಅವರು ಸಹ ಈ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಮತ್ತು ಸಾರ್ವಜನಿಕರು.ನಾಗರಿಕರು ಕೊರೊನಾ ವೈರಸನ್ನು ಭಾರತದಿಂದ ಬಡಿದೋಡಿಸಲು ಎಲ್ಲರು ಸಹಕರಿಸಿ ಮನೆಯಲ್ಲಿ ಇರಿ. ಸುರಕ್ಷತೆ ಮತ್ತು ಸ್ವಚ್ಚತೆ ಕಾಪಾಡಿ ಎಂಬುದಾಗಿ ಜನತೆಗೆ ಜಾಗೃತಿ ಮೂಡಿಸುತ್ತ ಕ್ಷೇತ್ರದ ಎಲ್ಲಡೆ ಮಾಸ್ಕ್ ,ಸಾನಿಟೈಸರ್,ಔಷಧ ವಿತರಣೆ‌ ಮಾಡುತ್ತಿದ್ದಾರೆ.

ವೈದ್ಯರು ಮತ್ತು ಆಶಾಕಾರ್ಯಕರ್ತರಿಗೆ ಅಭಿನಂದನೆ

ಕ್ಷೇತ್ರದಲ್ಲಿ ಹಗಲು ಇರುಳು‌ ದುಡಿಯುತ್ತಿರುವ ವೈದ್ಯರು.ಪೊಲೀಸರು. ಮಾದ್ಯಮ ವಿತ್ರರು ಹಾಗೂ ಆಶಾಕಾರ್ಯಕರ್ತರಿಗೆ ಅಭಿನಂದನೆಗಳನ್ನು ತಿಳಿಸುತ್ತ ಅವರಿಗೂ ಅಗತ್ಯವಾದ ಸಹಕಾರ ಮತ್ತು ನೆರವು ನೀಡುವುದಾಗಿ ತಿಳಿಸಿದರು.

Leave a Reply