NEWSಕೃಷಿಸಂಸ್ಕೃತಿ

ಬಿಡಾಡಿ ದನಗಳು, ಜಾನುವಾರುಗಳಿಗೆ ಒಣಹುಲ್ಲು ವಿತರಣೆ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಕೋವಿಡ್-19 ತಡೆಗಟ್ಟುವ ಹಿನ್ನಲೆ ಜಿಲ್ಲಾದ್ಯಾಂತ ಲಾಕ್‍ಡೌನ್ ಜಾರಿಯಲ್ಲಿದ್ದು, ಬಿಡಾಡಿ ದನಗಳು ಮತ್ತು ಜಾನುವಾರುಗಳಿಗೆ ಪಶು ವೈದ್ಯಕೀಯ ಸಂಘದ ವತಿಯಿಂದ ಶಾಸಕ ಎಲ್.ನಾಗೇಂದ್ರ ಒಣಹುಲ್ಲು ವಿತರಣೆ ಮಾಡಿದರು.

ಬಳಿಕ ಮಾತನಾಡಿದ ಅವರು, ಬಡವರಿಗೆ, ನಿರ್ಗತಿಕರಿಗೆ ಮತ್ತು ಕಾರ್ಮಿಕರಿಗೆ ಉಚಿತವಾಗಿ ಆಹಾರ ಕಿಟ್‍ಗಳು, ಔಷಧೋಪಚಾರಗಳನ್ನು ಅನೇಕ ದಾನಿಗಳು ನೀಡುತ್ತಾ ಬಂದಿದ್ದಾರೆ. ಪಶುವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನೇಕ ವಿನಾಯಿತಿಗಳನ್ನು ನೀಡಿ ಇದನ್ನು ತುರ್ತುಸೇವೆ ಎಂದು ಪರಿಗಣಿಸಿ ಸರ್ಕಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪಶುವೈದ್ಯಕೀಯ ಸಂಘದ ವತಿಯಿಂದ ಬಿಡಾಡಿ ದನಗಳು ಮತ್ತು ಜಾನುವಾರುಗಳಿಗೆ ಉಚಿತವಾಗಿ ಒಣಹುಲ್ಲನ್ನು ವಿತರಿಸಲಾಗಿದೆ ಎಂದರು.

ಪಶು ವೈದ್ಯಕೀಯ ತುರ್ತುಸೇವೆ ಅಂಗವಾಗಿ ಈಗಾಗಲೇ ಏಪ್ರಿಲ್ 28 ರಂದು ಚಾಮುಂಡಿಪುರಂ ಸುತ್ತಮುತ್ತಲಿನ ಪ್ರದೇಶದ ಜಾನುವಾರುಗಳಿಗೆ ಸುಮಾರು 3 ಟನ್ ಒಣಹುಲ್ಲನ್ನು ಸಂಘದ ವತಿಯಿಂದ ವಿತರಿಸಲಾಗಿತ್ತು. ಆದೇ ರೀತಿ ಇಂದು ದೇವರಾಜ ಮೊಹಲ್ಲಾ ಸುತ್ತ-ಮುತ್ತಲಿನ ಜಾನುವಾರುಗಳಿಗೆ ಒಣಹುಲ್ಲನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಪಶುವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ.ಎಸ್.ಸಿ.ಸುರೇಶ್, ಜಂಟಿ ನಿರ್ದೇಶಕ ಡಾ.ಪಿ.ಎಂ.ಪ್ರಸಾದ್‍ಮೂರ್ತಿ, ಉಪನಿರ್ದಶಕ ಡಾ.ಅಜಿತ್‍ಕುಮಾರ್, ಗೋಪಾಲನಾ ಸಂಘದ ಅಧ್ಯಕ್ಷ ನಾಗಭೂಷಣ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

mgid.com, 613802, DIRECT, d4c29acad76ce94f
mgid.com, 613802, DIRECT, d4c29acad76ce94f

Leave a Reply

error: Content is protected !!