NEWSದೇಶ-ವಿದೇಶರಾಜಕೀಯವಿಜ್ಞಾನ

ಬಿಪಿಎಲ್  ಕಂಪನಿಗೆ ನೀಡಿರುವ ಭೂಮಿ ಬಗ್ಗೆ ಕ್ರಮಕ್ಕೆ ಒತ್ತಾಯ

ಸರ್ಕಾರ ನೀಡಿರುವ ಜಾಗವನ್ನು ನೀಡಿದ ಉದ್ದೇಶಕ್ಕೆ ಬಳಸಿಕೊಳ್ಳದ ಆರೋಪ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು:  ಬಿಪಿಎಲ್  ಕಂಪನಿಗೆ ನೀಡಿರುವ ಭೂಮಿಯನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡಿರುವ   ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ವಿಧಾನಸಭೆ ಅಧಿವೇಶನದಲ್ಲಿ ವಿಪಕ್ಷ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರು.

ಕರ್ನಾಟಕ ಕೈಗಾರಿಕಾ ಪ್ರದೇಶಾಬಿವೃದ್ಧಿ ಮಂಡಳಿಯಿಂದ ನೆಲಮಂಗಲ ವಿಧಾನಸಭಾ ಕ್ಷೇತ್ರದ ದಾಬಸ್ ಪೇಟೆ 1 ನೇ ಹಂತದ ಕೈಗಾರಿಕಾ ಪ್ರದೇಶದ ನಿವೇಶನ ಸಂಖ್ಯೆ.1 ಮತ್ತು 2-ಪಾರ್ಟ್ ರಲ್ಲಿ ಒಟ್ಟು 149 ಎಕರೆ 5.5 ಗುಂಟೆ ಜಮೀನನ್ನು ಮೆ. ಬಿ.ಪಿ.ಎಲ್ ಲಿ. ಅವರಿಗೆ ಹಂಚಿಕೆ ಮಾಡಲಾಗಿದೆ.  ಈ ಕಂಪನಿಗೆ ಸರ್ಕಾರ ನೀಡಿರುವ ಜಾಗವನ್ನು ನೀಡಿದ ಉದ್ದೇಶಕ್ಕೆ ಬಳಸಿಕೊಳ್ಳಲಾರದ ಆರೋಪವಿದ್ದು ಪ್ರಸ್ತುತ ಅದು ನ್ಯಾಯಾಲಯದಲ್ಲಿದೆ  ಎಂದು  ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಜಗದೀಶ ಶೆಟ್ಟರ್   ತಿಳಿಸಿದರು.

ಶುಕ್ರವಾರ ವಿಧಾನಸಭೆಯಲ್ಲಿ ನೆಲಮಂಗಲ ಶಾಸಕ ಡಾ. ಕೆ.ಶ್ರೀನಿವಾಸಮೂರ್ತಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿ , ಬಿ.ಪಿ.ಎಲ್ ಕಂಪನಿಗೆ ನೀಡಿರುವ ಜಾಗದ ಕ್ರಯಪತ್ರವನ್ನು ರದ್ದು ಮಾಡಲು ಕಾನೂನಿನ ಮೊರೆ ಹೋಗುವುದಾಗಿ ಹೇಳಿದರು.

ಸದರಿ ಕಂಪನಿಯು ಹಂಚಿಕೆ ಪಡೆದಿರುವ ವಿಸ್ತೀರ್ಣದಲ್ಲಿ ಶೇಕಡಾ 5.12 ರಷ್ಟು ಜಮೀನನ್ನು ಕಟ್ಟಡಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ತಿಳಿಸಿದರು.

ಮೆ.ಬಿ.ಪಿ.ಎಲ್ ಲಿ. ಕಂಪನಿಯು ಹಂಚಿಕೆ ಪಡೆದಿರುವ ವಿಸ್ತೀರ್ಣದಲ್ಲಿ ಶೇಕಡಾ 5.12 ರಷ್ಟು ಜಮೀನನ್ನು ಕಟ್ಟಡಕ್ಕಾಗಿ ಬಳಸಿಕೊಂಡಿರುತ್ತದೆ. ಕೆ.ಐ.ಎ.ಡಿ.ಬಿ.ಯು  2006 ನವೆಂಬರ್‌  28  ರಂದು ಶುದ್ದ ಕ್ರಯಪತ್ರವನ್ನು ಮಾಡಿಕೊಟ್ಟಿದೆ ಎಂದು ಹೇಳಿದರು.

ಕೆ.ಐ.ಎ.ಡಿ.ಬಿ.ಯಿಂದ ಕ್ರಯಪತ್ರ ಪಡೆದ ನಂತರ ಮೆ. ಬಿ.ಪಿ.ಎಲ್ ಲಿ. ಅವರು  ಕೆಲ ಸಂಸ್ಥೆಗಳಿಗೆ ಜಮೀನನ್ನು ಮಾರಾಟ ಮಾಡಿದ್ದು, ಆ  ಕಂಪನಿಗಳ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

Leave a Reply

error: Content is protected !!
LATEST
KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ