CrimeNEWS

ಬೈಕ್‌ ಡಿಕ್ಕಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಗೆ ಗಾಯ

ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ರಸ್ತೆ ಅಪಘಾತದಲ್ಲಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗೋಲಗುಂಬಜ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ

ಡಾ. ರಾಮ್ ಅರಸಿದ್ಧಿ ಗಾಯಗೊಂಡಿದ್ದು, ಇವರನ್ನು ರಕ್ಷಿಸಲು ಬಂದ ಅಂಗರಕ್ಷನೂ ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿದ್ದಾರೆ.

ಗೋಲಗುಂಬಜ್ ಠಾಣಾ ವ್ಯಾಪ್ತಿಯ ಕೋವಿಡ್-19 ಗೆ ಸಂಬಂಧಿಸಿದ ಕಂಟೇನ್ಮೆಂಟ್ ಪ್ರದೇಶದಲ್ಲಿ ನಿನ್ನೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಪರಿಶೀಲನೆ ಕುರಿತು ಮೇಲ್ವಿಚಾರಣೆ ಮಾಡುತ್ತಾ ನಗರದ ಕಾಮತ್ ಹೊಟೇಲ್ ಬಳಿಬಂದಾಗ ಅಲ್ಲಿರುವ ಸಿಬ್ಬಂದಿಗೆ ಅಸ್ತವ್ಯಸ್ತವಾಗಿದ್ದ ಬ್ಯಾರಿಕೇಡ್‍ಗಳನ್ನು ಸರಿಪಡಿಸಲು ಸೂಚನೆ ನೀಡುತ್ತಿದ್ದರು.

ಈ ವೇಳೆ ನಗರದ ಬಸವೇಶ್ವರ ಸರ್ಕಲ್ ಕಡೆಯಿಂದ ಬಂದ ದ್ವೀಚಕ್ರ ವಾಹನ ಚಾಲಕನೊಬ್ಬ ವೇಗವಾಗಿ ಹಾಗೂ ಅಜಾಗರೂಕತೆಯಿಂದ ಬಂದು ಡಾ. ರಾಮ್ ಅರಸಿದ್ಧಿ ಅವರಿಗೆ ಡಿಕ್ಕಿ ಹೊಡೆದಿದ್ದಾನೆ.  ಪರಿಣಾಮ ಅವರ ತೊಡೆ ಹಾಗೂ ತಲೆಗೆ ಬಲವಾದ ಗಾಯಗಳಾಗಿದೆ.  ಅವರ ಅಂಗರಕ್ಷಕ ರಾಘವೇಂದ್ರ ಜಾದವ ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ.

ಕೂಡಲೇ ಗಾಯಾಳುಗಳನ್ನು ನಗರದ ಬಿಎಲ್ಡಿಇ ಆಸ್ಪತ್ರೆಗೆ ದಾಖಲಿಸಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಇರಿಸಲಾಗಿದೆ. ಈ ಸಂಬಂಧ ವಿಜಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.

Leave a Reply

error: Content is protected !!