NEWSನಮ್ಮರಾಜ್ಯಸಂಸ್ಕೃತಿ

ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತಿ ಮಾರ್ಗ ಒಂದೇ ಸುಲಭ ಮಾರ್ಗ: ಚನ್ನವೀರಶ್ರೀ

ವಿಜಯಪಥ ಸಮಗ್ರ ಸುದ್ದಿ

ಬೀದರ್‌: ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತಿ ಮಾರ್ಗ ಒಂದೇ ಸುಲಭ ಎಂದು ವೇದಮೂರ್ತಿ ಚೆನ್ನವೀರ ಮಹಾಸ್ವಾಮಿಗಳು ಹಿರೇಮಠ ಕಡಣಿ ಹೇಳಿದ್ದಾರೆ.

ಬೀದರ್‌ ತಾಲೂಕಿನ ಸುಕ್ಷೇತ್ರ ಶ್ರೀ ಗುರುಭದ್ರೇಶ್ವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಭಕ್ತಿ ವಿಜಯ ಆಧ್ಯಾತ್ಮಿಕ ಪ್ರವಚನದಲ್ಲಿ ಮಾತನಾಡಿದರು.

ಭಗವಂತನನ್ನ ಕೂಡಿಕೊಳ್ಳಲು ಭಕ್ತಿ, ಜ್ಞಾನ, ವೈರಾಗ್ಯ ಮೂರು ದಾರಿಗಳು ಇದ್ದರೂ ಕೂಡ ವೈರಾಗ್ಯ ಮತ್ತು ಜ್ಞಾನಮಾರ್ಗದಲ್ಲಿ ಎಲ್ಲರಿಗೂ ಸಾಗಲು ಸಾಧ್ಯವಿಲ್ಲ. ಆದರೆ ಭಕ್ತಿ ಮಾರ್ಗದಲ್ಲಿ ಎಲ್ಲರೂ ಸುಲಭವಾಗಿ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲಿಕ್ಕೆ ಸುಲಭ ಮಾರ್ಗವಿದೆ ಎಂದರು.

ಇನ್ನು ಅಂತಹ ಭಕ್ತಿ ಮಾರ್ಗದಲ್ಲಿ ಗುರುಭದ್ರೇಶ್ವರರು , ಬಸವಾದಿ ಪ್ರಮಥರು ನಡೆದು ತೋರಿಸಿದ್ದಾರೆ ಅವರ ಮಾರ್ಗ ನಮಗೆ ಅನುಕರಣೀಯ. ಕಾರಣ ನಾವು ನೀವೆಲ್ಲ ಸರಳ ಮಾರ್ಗವಾದ ಭಕ್ತಿ ಮಾರ್ಗವನ್ನು ಅನುಸರಿಸಿ ನಮ್ಮ ಜೀವನವನ್ನು ಸಾಫಲ್ಯ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಏ.2ರಿಂದ 6 ವರೆಗೆ ಜಾತ್ರಾ ನಿಮಿತ್ಯ ಆಧ್ಯಾತ್ಮ ಭಕ್ತಿ ವಿಜಯ ಆಧ್ಯಾತ್ಮ ಪ್ರವಚನ ಹಮ್ಮಿಕೊಳ್ಳಲಾಗಿತ್ತು. ಶ್ರೀಗುರು ಭದೇಶ್ವರ ಸಂಸ್ಥಾನದ ಪರಂಪರೆಯ  ಗುರುಗಳು ಗ್ರಾಮದ ಭಕ್ತರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಸಮಾರಂಭದಲ್ಲಿ ಶ್ರೀ ವೇದಮೂರ್ತಿಗಳಾದ ಬಾಲ ಸಂಗಯ್ಯ ಸ್ವಾಮಿ, ಶಿವಕುಮಾರ ಸ್ವಾಮಿ, ಭದ್ರಯ್ಯ ಸ್ವಾಮಿ, ಗುರುಭದ್ರೇಶ್ವರ ಸಂಸ್ಥಾನ ಬಾವುಗಿ ಉಪಸ್ಥಿತರಿದ್ದರು.

ಪ್ರವಚನದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಬೀದರ್, ಸಂಗೀತ ಸೇವೆ ಸಲ್ಲಿಸಿದರು ಪವನ್ ಕುಮಾರ್ ಸ್ವಾಮಿ ಕಾಶಂಪುರ್ ತಬಲಾ ಸಾಥ್‌ ನೀಡಿದರು. ಪ್ರಾರಂಭದಲ್ಲಿ ಆರಂಭದಲ್ಲಿ ಶ್ರೀ ಭದ್ರೇಶ್ವರ ಸಂಸ್ಥಾನದ ಶ್ರೀಶಾಂತಕುಮಾರ ಸ್ವಾಮಿ ಸರ್ವರನ್ನು ಸ್ವಾಗತಿಸಿದರು.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ