NEWSಸಂಸ್ಕೃತಿ

ಮರೆಯಲಾಗದ ದಾರ್ಶನಿಕಶ್ರೇಷ್ಠ ನಿತ್ಯೋತ್ಸವ ಕವಿಗೆ ನಮ್ಮ ಅಂತಿಮ ನಮನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಪ್ರೊಫೆಸರ್ ಕೆ.ಎಸ್. ನಿಸಾರ್ ಅಹಮದ್ ಅವರನ್ನು ಕಳೆದು ಕೊಂಡಿರುವ ಸಾರಸ್ವತಲೋಕ ಭರಿಸಲಾಗದ ನಷ್ಟವನ್ನು ಇಂದು  ಅನುಭವಿಸಿದೆ.

ಇಂಥ ಮಹಾನ್‌ ವ್ಯಕ್ತಿಯನ್ನು ಕಳೆದುಕೊಂಡಿರುವ ಕನ್ನಡಿಗರಾದ ನಮಗೂ ತುಂಬಾ ದುಃಖದ ಮತ್ತು ನೋವಿನ ಸಂಗತಿಯಾಗಿದೆ. ಇನ್ನು  ಈ ನಿತ್ಯೋತ್ಸವ ಕವಿ ನಮಗೆ ತಿಳಿದಿರುವಂತೆ ಇವರ  ಪೂರ್ಣ ಹೆಸರು ಕೊಕ್ಕರೆ ಹೊಸಳ್ಳಿ ಶೇಖ್ಹೈದರ್ ನಿಸಾರ್ ಅಹಮದ್. ಸ್ವಾತಂತ್ರ್ಯಪೂರ್ವ ಮೈಸೂರು ಸಂಸ್ಥಾನದ ಆಳ್ವಿಕೆಯಲ್ಲಿ 5 ನೇ ಫೆಬ್ರವರಿ 1936 ರಲ್ಲಿ ದೇವನಹಳ್ಳಿ ಜನಿಸಿ, 84 ವರ್ಷಗಳ ತುಂಬು ಜೀವನ ನಡೆಸಿ ಇಂದು (ರವಿವಾರ) ಇಹಲೋಕ ತ್ಯಜಿಸಿದರು.

ನಿಸಾರ್ ಅವರು ಮೂಲತಃ ಕವಿಗಳು. ಅತ್ಯಂತ ಕಿರಿಯ ವಯಸ್ಸಿನಲ್ಲೇ ಬರಹ ಕ್ಷೇತ್ರದಲ್ಲಿ ಬೆರಗು ಮೂಡಿಸಿ ತಮ್ಮ ಸಾಹಿತ್ಯ ಶಕ್ತಿಯನ್ನು ಕಲಾ ಲೋಕಕ್ಕೆ ಪರಿಚಯಿಸಿದ ಕಲೋಪಾಸಕ. ವೃತ್ತಿಯಿಂದ ಪ್ರಾಧ್ಯಾಪಕರಾದ ಇವರು, “ಭೂವಿಜ್ಞಾನದಲ್ಲಿ” ಸ್ನಾತಕೋತ್ತರ ಪದವಿ ಪಡೆದು, ತಮ್ಮ ಬದುಕಿನ ಅನುಭವ, ಆಳ ವಿಸ್ತಾರಗಳ ಮೂಲಕ ಮಹತ್ವದ ಕೊಡುಗೆಯನ್ನು ನೀಡಿದ ಕನ್ನಡ, ಇಂಗ್ಲಿಷ್ ಭಾಷೆಗಳ ಸವ್ಯಸಾಚಿ.

ವಿಶ್ವಮಾನವ ದೃಷ್ಟಿಯನ್ನು ಹೊಂದಿದ್ದ “ನಿತ್ಯೋತ್ಸವದ “ಜನಮಾನಸದಕವಿ. ನಾಟಕ ಕ್ಷೇತ್ರದ ವರಾದ ನಮಗೆ ಅವರು ನೀಡಿದ ಷೇಕ್ಸ್‌ಪೀಯರ್  ಅವರ ” ಒಥೆಲೋ “ಕನ್ನಡ ಅನುವಾದ,” ಎ ಮಿಡ್ಸಮರ ನೈಟ್ ಡ್ರೀಮ್ಸ್ “ಕೃತಿಯ ಕನ್ನಡೀಕರಣ ಅಪರೂಪದ ಗದ್ಯ ಸಾಹಿತ್ಯದ ಕೊಡುಗೆಗಳು. ಬಹಳ ಮುಖ್ಯವಾಗಿ ಕನ್ನಡನಾಡಿನಲ್ಲಿ ಕನ್ನಡ ಭಾಷೆಯ ಕುರಿತು ಅವರ ಮಂಡನೆಯ ವಿಚಾರ ಬಹಳ ಮುಖ್ಯವಾಗಿ ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಕ್ಕೆ ಕುತ್ತು ಬಂದ ಕಾಲದಲ್ಲಿ ಒಂದು ಜನಜಾಗೃತಿಯನ್ನು ಉಂಟುಮಾಡುತ್ತಿತ್ತು.

ಅವರ ವೈಚಾರಿಕ ನಿಲುವಿನಲ್ಲೂ ಅಪ್ಪಟ ಭಾರತೀಯ ದೃಷ್ಟಿಯನ್ನು ಹೊಂದಿದ್ದರು. ರಾಜಕೀಯ ವಿಡಂಬನೆಯ ಅವರ “ಕುರಿಗಳು ಸಾರ್ ಕುರಿಗಳು” ಎಂಬ ಕವಿತೆ, ಇಂದು ಜೀವಿಸಿರುವ ಪ್ರಜೆಗಳ ಪಾಲಿಗೂ ತೋರು ದಾರಿಯ ಹಣತೆಯೇ ಸರಿ.ನನ್ನ ವೈಯಕ್ತಿಕ ನೆಲೆಯಲ್ಲಿ ಹೇಳುವುದಾದರೆ ಹತ್ತು ವರ್ಷಕ್ಕೂ ಮಿಗಿಲಾದ ಸ್ನೇಹ ಅವರೊಂದಿಗೆ ನನಗಿತ್ತು. ಅವರ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ನಿರೂಪಿಸಿದ ಹೆಮ್ಮೆ ನನಗೆ.

ಅವರಿಗೆ ನಾಡೋಜ, ಪದ್ಮಶ್ರೀ, ರಾಜ್ಯೋತ್ಸವ, ಎಲ್ಲ ಪ್ರಶಸ್ತಿಗಳು ಲಭಿಸಿತು. ಆದರೆ ಆಳದಲ್ಲಿ  ಅವರು “ರಾಷ್ಟ್ರಕವಿ “ಪುರಸ್ಕಾರ ಪಡೆದುಕೊಳ್ಳಬೇಕೆಂಬ, ನಮ್ಮಂತ ಸಾಹಿತ್ಯ ಪ್ರೇಮಿಗಳಿಗೆ  ಉಮೇದಿತ್ತು. ಪ್ರಾದೇಶಿಕ ಭಾಷೆಗಳೆಲ್ಲವೂ ಕೂಡ ರಾಷ್ಟ್ರ ಭಾಷೆ ಅನ್ನುವ ವಿಚಾರವಿರುವ ಈ ಹೊತ್ತಿನಲ್ಲಿ, ನಮ್ಮ ಹೆಮ್ಮೆಯ ಮೈಸೂರು ಸಂಸ್ಥಾನ ಪ್ರಾರಂಭಿಸಿದ “ರಾಷ್ಟ್ರಕವಿ” “ಪುರಸ್ಕಾರ ಪಡೆಯುವ ಅರ್ಹ ಕವಿಗಳಾದ ನಿಸಾರ್ ಅಹಮದ್ ಅವರಿಗೆ, ಕಾಂಗ್ರೆಸ್ ಸರ್ಕಾರ ಕೋ. ಚನ್ನಬಸಪ್ಪ ನೇತೃತ್ವದ ಸಮಿತಿ ರಚನೆ ಮಾಡಿದಾಗ”ಪುರಸ್ಕಾರ” ಸಿಗುವ ನಿರೀಕ್ಷಿತ ನ್ಯಾಯ ಸಲ್ಲಲಿಲ್ಲ !”ರಾಷ್ಟ್ರಕವಿ “ಪುರಸ್ಕಾರ ನೀಡಿ ಎಂದು ನಾವು ಪತ್ರಿಕೆಗಳಿಗೆ ಬರೆದ, ನೀಡಿದ, ಅಹವಾಲುಗಳಿಗೆ ಮನ್ನಣೆ ದೊರೆಯಲಿಲ್ಲ.!

ಸಾಹಿತ್ಯಲೋಕದ ಕೆಲವು ಮಹಾಶಯರು ಕಾಂಗ್ರೆಸ್ ಸರ್ಕಾರದ ಮೇಲೆ ಪ್ರಭಾವ ಬಳಸಿ ಅವರಿಗೆ ಪ್ರಶಸ್ತಿ ಬರದಂತೆ ತಡೆಯುವಲ್ಲಿ ಯಶಸ್ವಿಯಾದರು. !ಈ ಘಟನಾವಳಿಗಳ ಬಳಿಕ ನಾನು ಯಾವಾಗಲಾದರೂ ಅವರಿಗೆ ಎದುರಾದಾಗ ಏನಪ್ಪಾ ನನಗೆ “ರಾಷ್ಟ್ರಕವಿ” ಪುರಸ್ಕಾರ ಕೊಡಿಸುವುದಿಲ್ವ?ಎನ್ನುತ್ತಿದ್ದರು.

ವರನಟ ಡಾ. ರಾಜಕುಮಾರ್ ಬಗ್ಗೆ ಅವರು ಹೊಂದಿದ್ದ ಅಭಿಮಾನವನ್ನು ಅವರಿಂದ ಪೀಡಿಸಿ ಕೇಳುವ ಬಗ್ಗೆ,ಅವರು ಹೇಳುವ ಬಗೆ ನಮ್ಮೆಲ್ಲರಿಗೂ ಪ್ರಿಯ. ಉತ್ತಮ ಸಾಹಿತ್ಯ ರಚಿಸಿದವರು ಸ್ವರ್ಗಸ್ಥರಾದರು ಅವರ ಸುಂದರವಾದ ಕಾವ್ಯಶರೀರ ಭೂಮಿಯ ಮೇಲೆ ಇದ್ದೇ ಇರುತ್ತದೆ ಎಂದು ಸಂಸ್ಕೃತದ ಉಕ್ತಿಯೊಂದು ಹೇಳುತ್ತದೆ. ಹಾಗೆಯೇ “ನಿಸಾರ್ ಅಹಮದ್ “ಅವರು ಸಾಹಿತ್ಯದ ರಸಚೇತನ, ಎಂದೂ ಮರೆಯಲಾಗದ ದಾರ್ಶನಿಕ ಶ್ರೇಷ್ಠರು. ಅವರಿಗೆ ನಮ್ಮ ಅಂತಿಮ ನಮನ

l ಆರ್. ವೆಂಕಟರಾಜು, ರಂಗನಟ, ಬೆಂಗಳೂರು

Leave a Reply

error: Content is protected !!
LATEST
KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ