NEWSಸಂಸ್ಕೃತಿ

ಮಾಧ್ಯಮಗಳಲ್ಲಿ ಕನ್ನಡಭಾಷೆ ಬಳಕೆಗೆ ಹೆಚ್ಚು ಒತ್ತುಕೊಡಿ

ಕನ್ನಡ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಭರಣ ಮನವಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವಿದ್ಯುನ್ಮಾನ ಮಾಧ್ಯಮಗಳು ಸದಭಿರುಚಿ ಶಿಷ್ಟಾಚಾರವುಳ್ಳ ಶುದ್ಧ ಕನ್ನಡ ಭಾಷಾ ಪ್ರಯೋಗಕ್ಕೆ ಒತ್ತು ನೀಡುವ ದೃಷ್ಠಿಯಿಂದ ಫೆಬ್ರವರಿ 11, 2020ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿಯ ಸಹಯೋಗದಲ್ಲಿ ಕನ್ನಡ ಭಾಷಾ ಬಳಕೆ ಕುರಿತು ಸಂವಾದ ನಡೆದಿರುವುದು ತಮಗೆ ತಿಳಿದ ವಿಷವೇ ಸರಿ.

ಸಂವಾದದ ಸಂದರ್ಭದಲ್ಲಿ ಸದಭಿರುಚಿಯ ಪ್ರಚಲಿತ ಶುದ್ಧ ಕನ್ನಡ ಪದಗಳನ್ನು ಬಳಸುವಂತೆ ಎಲ್ಲಾ ಮಾಧ್ಯಮಗಳ ಸಂಪಾದಕರುಗಳ ಗಮನ ಸೆಳೆಯುವುದು ಸೂಕ್ತವೆಂದು ಭಾವಿಸುತ್ತಾ ಈ ಪತ್ರ ಬರೆಯುತ್ತಿದ್ದೇನೆ.

ಪ್ರಸ್ತುತ ರಾಜ್ಯ ಎದುರಿಸುತ್ತಿರುವ ಕೊರೋನಾ ಸಾಂಕ್ರಾಮಿಕ ರೋಗದ ಸನ್ನಿವೇಶದಲ್ಲಿ ಮಾಧ್ಯಮಗಳು ಅದರಲ್ಲೂ ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮಗಳು ಸಾರ್ವಜನಿಕರಿಗೆ ಮಾಹಿತಿ ತಲುಪಿಸುವಲ್ಲಿ ಅರ್ಥಪೂರ್ಣ ಕೆಲಸ ಮಾಡುತ್ತಿರುವುದು ಅಭಿನಂದನೀಯ.

ಇದೇ ಹೊತ್ತಿನಲ್ಲಿ ಪ್ರಸಾರ / ಮುದ್ರಣದಲ್ಲಿ ಬಳಸುವ ಕನ್ನಡ ಭಾಷೆಯ ಬಗ್ಗೆಯೂ ಅಷ್ಟೇ ಕಾಳಜಿ ವಹಿಸಿದರೆ ತಾವು ಇನ್ನೂ ಹೆಚ್ಚಿನ ಜನರನ್ನು ತಲುಪುವಂತಾಗುತ್ತಿತ್ತು ಎನ್ನುವುದು ನನ್ನ ಅಭಿಪ್ರಾಯ. ತಾವು ದಿನದ 24 ಗಂಟೆಯು ಕ್ಷಣ ಕ್ಷಣದ ಬೆಳವಣಿಗೆಯ ಮಾಹಿತಿಯನ್ನು ಸುದ್ದಿ ರೂಪದಲ್ಲಿ ಸಿದ್ದಪಡಿಸಿಕೊಳ್ಳಲು ಸಮಯವೇ ಇರುವುದಿಲ್ಲ ಒತ್ತಡದಲ್ಲಿ ಕೆಲಸ ಮಾದುವುದು ಅನಿವಾರ್ಯವಾಗುತ್ತದೆ.

ಆದರೂ ಸುಲಭವಾಗಿ ಕನ್ನಡ ಪದಗಳನ್ನು ಬಳಸಬಹುದಾದ ಸಂದರ್ಭದಲ್ಲೂ ಹೆಚ್ಚಿನವರು ಆಂಗ್ಲ ಪದಗಳನ್ನು ಬಳಸುವುದು ಕಂಡುಬಂದಿದೆ. ಇದು ಕನ್ನಡ ಭಾಷಾ ಬೆಳವಣಿಗೆಗೆ ಮಾರಕವಾಗುತ್ತದೆ. ಸಮೂಹ ಮಾಧ್ಯಮವನ್ನೇ ಹೆಚ್ಚಾಗಿ ನಂಬಿರುವ ಜನರು ಮಾಹಿತಿಯ ಜೊತೆಗೆ ಭಾಷೆಯನ್ನು ಕಲಿಯುತ್ತಾರೆ ಎನ್ನುವುದನ್ನು ತಾವು ಅರ್ಥಮಾಡಿಕೊಳ್ಳುವಿರಾಗಿ ಭಾವಿಸುತ್ತೇನೆ.

ವಿದ್ಯನ್ಮಾನ ಮಾಧ್ಯಮಗಳು ಬಳಸುವ ಭಾಷೆಯ ಬಗ್ಗೆ ಬಳಸುವ ಪದಪುಂಜಗಳ ಬಗ್ಗೆ ಸಾರ್ವಜನಿಕರಿಂದ ಬಹಳಷ್ಟು ಸಲಹೆಗಳನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳ ಪರವಾಗಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿಯೇ ಗ್ರಾಹಕರನ್ನು ಕೇಳಿ ಮಾಧ್ಯಮಗಳಲ್ಲಿ ಬಳಸಬಹುದಾದ ಕನ್ನಡ ಸದಭಿರುಚಿಯ ಪದಗಳನ್ನು ಸಂಗ್ರಹಿಸಲಾಗಿದ್ದು ತಮಗೆ ಕಳುಹಿಸಿ ಕೊಡಲಾಗುತ್ತಿದ್ದು ಈ ಪದಗಳನ್ನು ಮುದ್ರಣ / ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಳಸುವ ಮೂಲಕ ಕನ್ನಡ ಭಾಷಾ ಬೆಳವಣಿಗೆ, ಕನ್ನಡದ ಅಸ್ಮಿತೆ ಉಳಿಸಿಕೊಳ್ಳಲು ತಮ್ಮ ಸಹಕಾರ ಸದಾ ನಮ್ಮೊಡನಿರುತ್ತದೆ ಎಂದು ಭಾವಿದಲಾಗಿದೆ ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಭರಣ ತಿಳಿಸಿದ್ದಾರೆ.

Leave a Reply

error: Content is protected !!
LATEST
KSRTC ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದಿಂದ SSLC, PUC ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ ನೀಟ್ ವ್ಯವಸ್ಥೆ ಕೊನೆಯಾದರೆ ಮಾತ್ರ ರಾಜ್ಯದ ಮಕ್ಕಳಿಗೆ ನ್ಯಾಯ ಸಿಗಲು ಸಾಧ್ಯ : ಮೋಹನ್ ದಾಸರಿ ಭ್ರಷ್ಟಾಚಾರ, ಕಮಿಷನ್‌ ದಂಧೆ ನಿಲ್ಲಿಸಿದರೆ ಗ್ಯಾರಂಟಿ ಯೋಜನೆಗಳಿಗೂ ಕೊಟ್ಟು ಹಣ ಉಳಿಯುತ್ತದೆ : ಎಎಪಿ ಜೂ.24ರಂದು ಶಿವಮೊಗ್ಗದಲ್ಲಿ ರಾಷ್ಟ್ರ, ರಾಜ್ಯ ರೈತ ಮುಖಂಡರ ಸಮಾವೇಶ: ಕುರುಬೂರ್ ಶಾಂತಕುಮಾರ್ ಸಂತ್ರಸ್ತೆ ಅಪರಹರಣ ಪ್ರಕರಣ: ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ಮಂಜೂರು KSRTCಯಿಂದ 300ಕ್ಕೂ ಹೆಚ್ಚು ಹೊಸ ಮಾರ್ಗಗಳಲ್ಲಿ ಬಸ್‌ ಓಡಾಟ: ಸಚಿವ ರಾಮಲಿಂಗಾರೆಡ್ಡಿ BMTC: 50ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್​​ಗಳ ಚಾಲಕರಿಗೆ ಗೇಟ್‌ಪಾಸ್‌ ಅತ್ಯಾಚಾರ ಆರೋಪಿ ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣನ ಎಸ್‌ಐಟಿ ಕಸ್ಟಡಿ ಅಂತ್ಯ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ವಿರೋಧಿಸಿ ನಾಳೆ ರಾಜ್ಯಾದ್ಯಂತ ಎಎಪಿ ಪ್ರತಿಭಟನೆ ನಟ ದರ್ಶನ್‌ ಸ್ಥಿತಿಗೆ ಮರುಗಿ ಅಭಿಮಾನಿ ಅನ್ನನೀರು ಬಿಟ್ಟು ಆತ್ಮಹತ್ಯೆಗೆ ಶರಣು?