NEWSಕೃಷಿ

ಮಾರುಕಟ್ಟೆಗೆ ಆಲ್ಫಾನ್ಸೋ ಮಾವಿನ ಹಣ್ಣು  ಬಿಡುಗಡೆ ಮಾಡಿದ ಡಿಸಿ ಕೃಷ್ಣ ಬಾಜಪೇಯಿ 

ವಿಜಯಪಥ ಸಮಗ್ರ ಸುದ್ದಿ

ಹಾವೇರಿ: ಆಲ್ಫಾನ್ಸೋ ಮಾವಿನ ಹಣ್ಣನ್ನು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ರೈತರು ಬೆಳೆದ ಮಾವಿನ ಹಣ್ಣುಗಳಿಗೆ ತೋಟಗಾರಿಕೆ ಇಲಾಖೆ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಿದೆ. “ಹಾವೇರಿ ಆಲ್ಫಾನ್ಸೋ” ಹೆಸರಿನಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಪ್ರತಿ  ಒಂದು ಕೆ.ಜಿ ಮಾವಿನ ಹಣ್ಣಿಗೆ  ಒಂದೂ ನೂರು ರೂ. ಹಾಗೂ ಒಂದು ಬಾಕ್ಸ್‌ಗೆ  ಮೂರುನೂರು ರೂ.ಗಳಂತೆ ಮಾರಾಟ ಮಾಡಲಾಗುತ್ತದೆ ಎಂದು ತಿಳಿಸಿದರು.

11278.25 ಮೇಟ್ರಿಕ್ ಟನ್ ಹಣ್ಣು-ತರಕಾರಿ
ಕೊರೋನಾ ವೈರಸ್ ಹರಡುವಿಕೆಯ ಲಾಕ್‍ಡೌನ್ ಸಮಯದಲ್ಲಿ ತೋಟಗಾರಿಕೆ ಇಲಾಖೆಯು  ಜಿಲ್ಲೆಯ ರೈತರು ಬೆಳದ 11278.25 ಮೇಟ್ರಿಕ್ ಟನ್ ನಷ್ಟು ತೋಟಗಾರಿಕೆ ಉತ್ಪನ್ನಗಳನ್ನು ಜಿಲ್ಲೆ, ಹೊರ ಜಿಲ್ಲೆ ಹಾಗೂ  ಹೊರ ರಾಜ್ಯಗಳ ವಿವಿಧ ಮಾರುಕಟ್ಟೆ  ಸೌಲಭ್ಯ ಕಲ್ಪಿಸಿ  ಸಾಗಾಣಿಕೆಗೆ ರೈತರಿಗೆ ಪಾಸ್ ನೀಡಲಾಗಿದೆ ಎಂದು ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕ ಪ್ರದೀಪ ತಿಳಿಸಿದ್ದಾರೆ.

ತೋಟಗಾರಿಕೆ ಉತ್ಪನ್ನಗಳಾದ ಮಾವು 1950 ಮೆಟ್ರಿಕ್ ಟನ್, ಕಲ್ಲಂಗಡಿ 105 ಮೆಟ್ರಿಕ್ ಟನ್, ಬಾಳೆಹಣ್ಣು 3124 ಮೆಟ್ರಿಕ್ ಟನ್, ಟೊಮೋಟೊ 1567 ಮೆಟ್ರಿಕ್ ಟನ್,  ಹಸಿಮೇಣಸಿನಕಾಯಿ 3718 ಮೆಟ್ರಿಕ್ ಟನ್, ಕ್ಯಾಪ್ಸಿಕಂ 14.25 ಮೆಟ್ರಿಕ್ ಟನ್, ಪಪ್ಪಾಯಿ 65 ಮೆಟ್ರಿಕ್ ಟನ್, ಶುಂಠಿ 375 ಮೆಟ್ರಿಕ್ ಟನ್, ವಿಳ್ಳದೇಲೆ 35 ಮೆಟ್ರಿಕ್ ಟನ್, ಕುಂಬಳಕಾಯಿ120 ಮೆಟ್ರಿಕ್ ಟನ್, 205 ಮೆಟ್ರಿಕ್ ಟನ್ ಎಲೆ ಕೊಸುಗಳನ್ನು ರೈತರಿಂದ ಖರೀದಿ ಮಾಡಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಹಾಗೂ ಜಿಲ್ಲೆಯ ಮಾವಿನ ಹಣ್ಣಿಗೆ ಹಾವೇರಿ ಆಲ್ಫಾನ್ಸೋ ಹೆಸರಿಟ್ಟು ಮಾರಾಟ ಮಾಡಲಾಗುತ್ತಿದೆ. ಮಾವಿನ ಹಣ್ಣು ಖರೀದಿಗೆ  ಪ್ರಕಾಶ ಪಾಟೀಲ -ಮೊ.9164684889,  ಪ್ರವೀಣ- ಮೊ.7349885498, ಮಂಜುನಾಥ –ಮೊ.636150721 ಹಾಗೂ ಶಂಕ್ರಪ್ಪ –ಮೊ.9741976989ನ್ನು ಸಂಪರ್ಕಿಸಬಹುದೆಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರದೀಪ  ತಿಳಿಸಿದ್ದಾರೆ.

1 Comment

  • ಆಲ್ಫಾನ್ಸೋ ಮಾವಿನ ಹಣ್ಣು ಅರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು ತಿಂದು ಮಜಾ ಉಡಾಯಿಸಿ

Leave a Reply

error: Content is protected !!