NEWSನಮ್ಮಜಿಲ್ಲೆ

ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ರೂ. ದೇಣಿಗೆ

ವಿಜಯಪಥ ಸಮಗ್ರ ಸುದ್ದಿ

ಹೊಸಕೋಟೆ: ಕೊರೊನಾ ಹಿನ್ನೆಲೆ ದೇಶವೇ ಲಾಕ್ ಡೌನ್ ಆಗಿರವ ಕಾರಣ ಸಿಎಂ ಕೊರೊನಾ ಪರಿಹಾರ ನಿಧಿಗೆ ಭಾರತೀಯ ಆಹಾರ ನಿಗಮದ ಮಾಜಿ ಸದಸ್ಯ ಹಾಗೂ ನಾಡ ರತ್ನ ಪ್ರಶಸ್ತಿ ಪುರಸ್ಕೃತ ಡಾ.ವಿ.ವಿ.ಸದಾನಂದ್ ಅವರು 10 ಲಕ್ಷ ರೂ. ದೇಣಿಗೆಯನ್ನು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನೀಡಿದರು.

ಬಳಿಕ ಮಾತನಾಡಿದ ಅವರು, ಕೊರೊನಾ ಹಿನ್ನೆಲೆ ದೇಶವೇ ಲಾಕ್ ಡೌನ್ ಆಗಿರುವ ಪರಿಣಾಮ ಸಾವಿರಾರು ಬಡ ಕೂಲಿ ಕಾರ್ಮಿಕರು ನಿರಾಶ್ರಿತರು ಒಪ್ಪೊತ್ತಿನ ಊಟಕ್ಕೂ ಸಂಕಷ್ಟ ಎದುರಿಸುವಂತಾಗಿದೆ. ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮರೋಪಾದಿಯಲ್ಲಿ ಬಡವ ನೆರವಿಗೆ ನಿಂತಿದ್ದಾರೆ. ಈ ಹಿನ್ನೆಲೆ ಸಮಾಜದಲ್ಲಿ ಉಳ್ಳವರು ನೆರವು ನೀಡುವುದರ ಮೂಲಕ ದೇಶದ ಏಳಿಗೆಗೆ ಶ್ರಮಿಸಿ ಮಾನವೀಯತೆ ಮೆರೆಯಬೇಕು ಎಂದರು.

ಯಲಹಂಕ ಶಾಸಕ ವಿಶ್ವನಾಥ್, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮರಿಸ್ವಾಮಿ, ಸವಿತಾ ಸಮಾಜದ ರಾಜ್ಯಾಧ್ಯಕ್ಷ ಎನ್.ಸಂಪತ್ ಕುಮಾರ್, ಮುಖಂಡರಾದ ಕಿರಣ್ ಕುಮಾರ್,ಕಾರ್ತಿಕ್,ಬಸವಶ್ರೀ ಚಾರಿಟೇಬಲ್ ಕಾರ್ಯಾಧ್ಯಕ್ಷ ಎಸ್.ನಾಗೇಂದ್ರ ಆರಾಧ್ಯ ಹಾಜರಿದ್ದರು.

ಅತಿ ಹಿಂದುಳಿದ ಜಾತಿಗಳಲ್ಲಿ ಒಂದಾದ ಸವಿತಾ ಸಮುದಾಯದ ಕರ್ನಾಟಕ ರಾಜ್ಯ ಸವಿತಾ ಸಮಾಜದ ವತಿಯಿಂದ ರಾಜ್ಯದ 30 ಜಿಲ್ಲೆಗಳಿಗೆ ದಿನಸಿ ನೀಡಲು ಪದಾಧಿಕಾರಿಗಳು ತೀರ್ಮಾನಿಸಿದ್ದು, ಸಮಾಜದ ಈ ಕಾರ್ಯಕ್ಕೆ ಮೆಚ್ಚಿ ತಮ್ಮ ಸಮಾಜದ ರಾಜ್ಯ ಸವಿತಾ ಸಮಾಜಕ್ಕೆ 1 ಲಕ್ಷ ರೂ. ಚೆಕ್ ನ್ನು ಸಮಾಜದ ಹೇಳಿಗೆಗಾಗಿ  ರಾಜ್ಯಾಧ್ಯಕ್ಷ ಎನ್.ಸಂಪತ್ ಕುಮಾರ್ ಅವರಿಗೆ ಹಸ್ತಾಂತರಿಸಿದ್ದಾರೆ.

ಕೊರೊನಾ ಲಾಕ್ ಡೌನ್ ಟೈಮ್ ನಲ್ಲಿ ಪ್ರಾಣದ ಹಂಗು ತೊರೆದು ದುಡಿಯುತ್ತಿರುವ ವೈದ್ಯರು, ಪೊಲೀಸರು ಹಾಗೂ ಸ್ವಯಂ ಸೇವಕರಿಗೆ ಡಾ.ವಿ.ವಿ.ಸದಾನಂದ್ ಕೃತಜ್ಞತೆ ತಿಳಿಸಿದರು.

Leave a Reply

error: Content is protected !!