Please assign a menu to the primary menu location under menu

NEWSನಮ್ಮಜಿಲ್ಲೆ

ಮೂರು ದಿನಗಳಲ್ಲಿ ಪಡಿತರ ವಿತರಣೆ ಪೂರ್ಣಗೊಳಿಸಿ

ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಸೂಚನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಮುಂದಿನ ಮೂರು ದಿನಗಳಲ್ಲಿ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಪಡಿತರ ವಿತರಣೆ ಪೂರ್ಣಗೊಳಿಸಬೇಕು ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಸೂಚನೆ ನೀಡಿದ್ದಾರೆ.

ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಇಂದು ವಿಡಿಯೋ ಸಂವಾದ ನಡೆಸಿದ ಅವರು ಭಾನುವಾರ ಸೋಮವಾರ ರಜೆ ಇದ್ದರೂ ಪಡಿತರ ವಿತರಣೆ ನಡೆಸಿ ಜನರಿಗೆ ಆಹಾರಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಪ್ರಧಾನ ಮಂತ್ರಿಯವರು ಘೋಷಿಸಿರುವ ಗರೀಬ್ ಕಲ್ಯಾಣ್ ಪ್ಯಾಕೇಜ್ ಎಲ್ಲಾ ಅರ್ಹ ಬಡವರಿಗೆ ಶೀಘ್ರ ತಲುಪಬೇಕು ಅದು ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗಬೇಕು ಎಂದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ವಾರಕ್ಕೊಮ್ಮೆ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಬೇಕು. ಇದೇ ರೀತಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೇವಲ ಕೇಂದ್ರ ಸ್ಥಾನದಲ್ಲಿರದೆ ತಾಲೂಕು ಹಾಗೂ ಗ್ರಾಮಗಳಿಗೆ ಭೇಟಿ ನೀಡಿ ಪಡಿತರ ವಿತರಣೆ, ಹಾಲು ವಿತರಣೆ, ವಾಹನ ಸಂಚಾರ, ಸಾಮಾಜಿಕ ಅಂತರ ನಿರ್ವಹಣೆ ಕುರಿತು ಪರಿಶೀಲಿಸಿ ಸಮರ್ಪಕವಾಗಿ ನಡೆಯುವಂತೆ ಮಾಡಬೇಕು ಎಂದರು.

ಎಲ್ಲಾ ಅಧಿಕಾರಿಗಳು ಉಚ್ಚನ್ಯಾಯಾಲಯ ನೀಡಿರುವ ಆದೇಶಗಳನ್ನು ಅನುಷ್ಠಾನಗೊಳಿಸಬೇಕು ಯಾವುದೇ ಜಿಲ್ಲೆಯಲ್ಲಿ ಯಾರಿಗೂ ಆಹಾರದ ಕೊರತೆ, ಸರಕು ಸಾಗಾಣಿಕೆ ವಾಹನಗಳ ಸಂಚಾರ ಸಮಸ್ಯೆ ಎದುರಾಗದಂತೆ ಗಮನಹರಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಹೆಳಿದರು.

ರಾಜ್ಯದಲ್ಲಿ ಕೋವಿಡ್-19 ಸಾವಿನ ಸಂಖ್ಯೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಬೇಕು. ವಯಸ್ಸಾಗಿರುವ ಸೋಂಕಿತರ ಬಗ್ಗೆ ಹೆಚ್ಚಿನ ನಿಗಾವಹಿಸಿ ಎಲ್ಲರೂ ಗುಣಮುಖರಾಗುವಂತೆ ನೋಡಿಕೊಳ್ಳಬೇಕು ಇದಕ್ಕೆ ಖಾಸಗಿ ತಜ್ಞ ವೈದ್ಯರ ಸಹಾಯವನ್ನು ಬಳಸಿಕೊಳ್ಳಬೇಕು ಎಂದರು.

ರಾಜ್ಯದಲ್ಲಿ ಪಿ.ಪಿ ಕಿಟ್ ಹಾಗೂ ಎನ್ 95 ಮಾಸ್ಕ್ ಗಳನ್ನು ಅಗತ್ಯಕ್ಕೆ ಅನುಗುಣವಾಗಿ ಪೂರೈಸಲಾಗಿದೆ. ಅವುಗಳನ್ನು ಅವಶ್ಯಕತೆ ಯನುಸಾರ ಬಳಸಿ ಅನಗತ್ಯವಾಗಿ ಎಲ್ಲರೂ  ಬಳಸಿ ವೈದ್ಯರಿಗೆ ಕೊರತೆ ಅಗದಂತೆ ಮಾಡಬೇಡಿ ಎಂದು ಹೇಳಿದರು.

ಇದೇ ರೀತಿ ವಿಶ್ವದಾದ್ಯಂತ ವೆಂಟಿಲೇಟರ್‍ಗಳ ಕೊರತೆ ಇದೆ. ರಾಜ್ಯದಲ್ಲಿ ಹಾಲಿ 750 ವೆಂಟಿಲೇಟರ್‍ಗಳು ಲಭ್ಯತೆ ಇದೆ. ಆದರೆ ಯಾವುದೇ ಕೊರೋನಾ ಸೋಂಕಿತರು ಇದನ್ನು ಬಳಸುವ ಅವಶ್ಯಕತೆ ಹಂತಕ್ಕೆ ಹೋಗಿಲ್ಲ. ಹಾಗಾಗಿ ಹಾಲಿ ಲಭ್ಯ ಸೌಲಭ್ಯದಲ್ಲೇ ಸಮಸ್ಯೆ ನಿಬಾಯಿಸಬಹುದಾಗಿದೆ ಎಂದರು.

ರಾಜ್ಯ ಸರ್ಕಾರ 1570 ಹಾಗೂ ಕೇಂದ್ರ ಸರ್ಕಾರ 47000 ಹೊಸ ವೆಂಟಿಲೇಟರ್ ಗೆ ಆರ್ಡರ್ ಮಾಡಿದೆ. ಪೂರೈಕೆ ತಡವಾಗಲಿದೆ ಹಂತ ಹಂತವಾಗಿ ಪೂರೈಕೆ ಆಗಿಲದೆ. ಅವುಗಳನ್ನು ಅವಶ್ಯಕತೆಗೆ ಅನುಗುಣವಾಗಿ ಜಿಲ್ಲೆಗಳಿಗೆ ಕಳಿಸಲಾಗುವುದು ಎಂದರು

ಪ್ರತಿಯೊಬ್ಬ ಸೋಂಕಿತರು ಹಾಗೂ ಶಂಕಿತರ ವಿವರ ಪತ್ತೆಮಾಡಿ ತಪಾಸಣೆಗೆ ಒಳಪಡಿಸಿ.ಅವರ ಪ್ರಾಥಮಿಕ ಹಾಗೂ ಎರಡನೆ ಹಂತದ ಸಂಪರ್ಕ ಗಳನ್ನು ಗುರುತಿಸಿ ,ಕ್ವಾರಂಟೈನ್ ಅಥವಾ ಐಸೋಲೇಷನ್ ನಲ್ಲಿ ಇರಿಸಿ.ಈ ವಿಷಯದಲ್ಲಿ ಸಣ್ಣ ವಿಳಂಬ ಅಥವಾ ನಿರ್ಲಕ್ಷ್ಯ ಸಲ್ಲ ಎಂದು ಹೇಳಿದರು.

ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್  ದೇಶ ,ವಿದೇಶಗಳಿಂದ ಬಂದವರ ಗುರುತು ಪತ್ತೆ ಹಾಗೂ ದೆಹಲಿಯ ನಿಜಾಮುದ್ದೀನ್ ಜಮಾತ್ ನಲ್ಲಿ ಪಾಲ್ಗೋಂಡು ಹಿಂದಿದರುಗಿದವರನ್ನು ಪತ್ತೆ ಮಾಡಿ ಆರೋಗ್ಯ ತಪಾಸಣೆ ಮಾಡುವ ಕುರಿತು ನಿರ್ದೇಶನಗಳನ್ನು ನೀಡಿದರು

ಅಪರ ಮುಖ್ಯ ಕಾರ್ಯದರ್ಶಿ ವಂದಿತ ಶರ್ಮಾ ಮಾತನಾಡಿ ಯಾವುದೇ ಜಿಲ್ಲೆಯಲ್ಲಿ ರೈತರು ತೊಂದರೆಗೊಳಗಾಗಬಾರದು ಅದಕ್ಕಾಗಿ ಎಲ್ಲಿಯೂ ಎ.ಪಿ.ಎಂ.ಸಿ ಗಳನ್ನು ಮುಚ್ಚಬೇಡಿ ಸ್ಥಳೀಯ ಬಸ್ ನಿಲ್ದಾಣ ಹಾಗೂ ವಿಶಾಲ ಖಾಲಿ ಜಾಗಗಳನ್ನು ತರಕಾರಿ ಮಾರಾಟ ಖರೀದಿಗೆ ಬಳಸಿಕೊಳ್ಳಿ ಎಂದು ಹೇಳಿದರು.

ಯಾವುದೇ ಜಿಲ್ಲೆಯಲ್ಲಿ ಕೃಷಿ ಉತ್ಪನ್ನಗಳು ಮಾರುಕಟ್ಟೆಗಳಿಲ್ಲಿದೆ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಎಲ್ಲಾ ಹಾಪ್ ಕಾಮ್ಸ್‍ಗಳನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಸೂಚಿಸಿದರು.

ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಗೆ ಯಾವುದೇ ಕೊರತೆ ಇಲ್ಲ ಅಗತ್ಯ ಪ್ರಮಾಣದಷ್ಟು ದಾಸ್ತಾನು ಮಾಡಿಕೊಳ್ಳಿ ಪಡಿತರ ಪೂರೈಕೆಗೂ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಿ ಎಂದರು.

ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವಿದ್ ಅಖ್ತರ್ ಮಾತನಾಡಿ ಯಾವುದೇ ಜಿಲ್ಲೆಗೂ ಕೋವಿದ್ ನಿಯಂತ್ರಣ ಕ್ರಮಗಳಿಗೆ ಅನುದಾನದ ಕೊರತೆ ಇಲ್ಲ.ಮುಂದಿನ ಒಂದು ತಿಂಗಳ ಬೇಡಿಕೆ ಪಟ್ಟಿ ಯೋಜಿಸಿ ಪ್ರಸ್ತಾವನೆ ಸಲ್ಲಿಸಿ .ಅಗತ್ಯಕ್ಕೆ ಅನುಸಾರವಾಗಿ ರಾಜ್ಯದಿಂದ  ಪೂರೈಸಲಾಗುವುದು ಎಂದರು.

ವಿಡಿಯೋ ಸಂವಾದದಲ್ಲಿ ಆರೋಗ್ಯ ಇಲಾಖೆ ಆಯುಕ್ತರಾದ ಪಂಕಜ್ ಕುಮಾರ್ ಪಾಂಡೆ ಹಾಗೂ ಮತ್ತಿತರ ಹಿರಿಯ ಅಧಿಕಾರಿಗಳು ಹಾಜರಿದ್ದು ಹಲವು ಸಲಹೆ ಸೂಚನೆಗಳನ್ನು ನೀಡಿದರು.

Leave a Reply

error: Content is protected !!
LATEST
ನಮ್ಮ ಕ್ಲಿನಿಕ್ ಹೆಸರಲ್ಲಿ ನೂರಾರು ಕೋಟಿ ಗುಳುಂ: ಎಎಪಿ ಉಷಾ ಮೋಹನ್ KSRTC- ಫೋನ್‌ ಪೇ ಹಗರಣ- ₹20 ಸಾವಿರ ಲಂಚ ಕೊಟ್ಟ ಡಿಸಿ, ಡಿಟಿಒ ಅಮಾನತುಮಾಡಿ: ಎಂಡಿ ಭೇಟಿ ಮಾಡಿದ ನಾಗರಾಜ್‌ ಇಂದು ಸಾರಿಗೆ ನಿಗಮಗಳಲ್ಲಿ ಚಾಲಕರ ದಿನದ ಸಂಭ್ರಮ - ಘಟಕಗಳಲ್ಲಿ ಹೂಗುಚ್ಛ ನೀಡಿ ಶುಭ ಕೋರಿದ ಸಹೋದ್ಯೋಗಿಗಳು KSRTC ಬಸ್ ನಿಲ್ದಾಣದ ಅವ್ಯವಸ್ಥೆ ಕಂಡು ಡಿಸಿ ಬೆವರಿಳಿಸಿದ  ಉಪಲೋಕಾಯುಕ್ತರು BMTC: ಅತೀ ಶೀಘ್ರದಲ್ಲೇ ಸಂಸ್ಥೆಯ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ- ಎಂಡಿ ರಾಮಚಂದ್ರನ್‌ KKRTC ಬಸ್‌-ಟ್ರ್ಯಾಕ್ಟರ್‌ ನಡುವೆ ಡಿಕ್ಕಿ: ಯುವತಿ ಸಾವು, 18ಮಂದಿಗೆ ಗಾಯ KSRTC: ಭ್ರಷ್ಟಾಚಾರ ಬಯಲು ಮಾಡದಂತೆ ದೂರುದಾರನ ಬಾಯಿ ಮುಚ್ಚಿಸಲು ATI ಮೂಲಕ ₹20 ಸಾವಿರ ಕೊಟ್ಟರೇ ಡಿಸಿ, ಡಿಟಿಒ! ಮಗನ ಎದುರೇ ಪೆಟ್ರೋಲ್‌ ಸುರಿದು ಪತ್ನಿಗೆ ಬೆಂಕಿ ಹಚ್ಚಿದ KSRTC ಮೆಕ್ಯಾನಿಕ್‌ ಚಾಲಕನ ನಿಯಂತ್ರಣ ತಪ್ಪಿ ಹಣ್ಣು ತರಕಾರಿ ತುಂಬಿದ ಲಾರಿ ಪಲ್ಟಿ: 14 ಜನ ಮೃತ 2026ಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ಜಾರಿ ಸಾಧ್ಯತೆ: ರಾಜ್ಯಾಧ್ಯಕ್ಷ ಷಡಾಕ್ಷರಿ