NEWSಕೃಷಿನಮ್ಮರಾಜ್ಯ

ಮೃತ ರೈತನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ವಿತರಣೆ

ಮೃತ ರೈತನ ಪತ್ನಿಗೆ ವೈಯಕ್ತಿವಾಗಿ ಒಂದು ಲಕ್ಷ ರೂ. ನೀಡಿದ ಸಚಿವ ಬಿ.ಸಿ. ಪಾಟೀಲ್‌

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ಲಾಕ್ ಡೌನ್ ಪರಿಣಾಮ ಬೆಳೆದ ಕಲ್ಲಂಗಡಿಯನ್ನು ಮಾರಾಟವಾಗದ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ 31 ರಂದು ಆತ್ಮಹತ್ಯೆಗೆ ಶರಣಾದ ಜಿಲ್ಲೆಯ ಆಳಂದ ತಾಲೂಕಿನ ಲಾಡ್ ಚಿಂಚೋಳಿ ಗ್ರಾಮದ ರೈತ ಚಂದ್ರಕಾಂತ ನಾಗೀಂದ್ರಪ್ಪ ಬಿರಾದರ ಅವರ ಮನೆಗೆ ಮಂಗಳವಾರ ಭೇಟಿ ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್ ಸರ್ಕಾರದಿಂದ 5 ಲಕ್ಷ ರೂ.ಗಳ ಪರಿಹಾರ ಧನದ ಆದೇಶವನ್ನು ಮೃತ ರೈತನ ಪತ್ನಿಗೆ ನೀಡಿದರು.

ಸಚಿವರು ಮೃತ ರೈತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದಲ್ಲದೆ ರೈತ ಸಮುದಾಯಕ್ಕೆ ಆತ್ಮಹತ್ಯೆ ಪರಿಹಾರವಲ್ಲ, ಇದ್ದು ಜಯಿಸಬೇಕು ಕರೆ ನೀಡಿದರು.

ರೈತನ ಕುಟಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ರೀತಿಯ ನೆರವನ್ನು ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ನೀಡಲಿದ್ದಾರೆ ಧೈರ್ಯದಿಂದಿರಿ ಎಂದು ಕುಟುಂಬಸ್ಥರಿಗೆ ಸಚರು ಅಭಯ ನೀಡಿದರು.

ಶಾಸಕ ಸುಭಾಷ ಗುತ್ತೇದಾರ ಮಾತನಾಡಿ ಮೃತ ರೈತನಿಗೆ ಪತ್ನಿ ಸೇರಿದಂತೆ ಇಬ್ಬರು ಗಂಡು ಮಕ್ಕಳು ಇದ್ದಾರೆ ಎಂದು ಸಚಿವರಿಗೆ ಮಾಹಿತಿ ನೀಡಿದರು.

ಇದಲ್ಲದೆ ರಾಷ್ಟ್ರೀಯ ಕೌಟುಂಬಿಕ ನೆರವು ಯೋಜನೆಯಡಿ 20 ಸಾವಿರ ರೂ. ಮತ್ತು ಅಂತ್ಯಸಂಸ್ಕಾರದ ವೆಚ್ಚ 5 ಸಾವಿರ ರೂ. ಸಹ ಕುಟುಂಬಕ್ಕೆ ನೀಡಲಾಯಿತು.

ಪಿಂಚಣಿ ಆದೇಶ ಪ್ರತಿ ವಿತರಣೆ

ಮೃತ ರೈತನ ಪತ್ನಿ ಜಗದೇವಿ ಚಂದ್ರಕಾಂತ ಅವರಿಗೆ ಮಾಹೆಯಾನ 2000 ರೂ. ಒದಗಿಸುವ ವಿಧವಾ ಪಿಂಚಣಿ ಆದೇಶದ ಪ್ರತಿಯನ್ನು ಸಹ ಸಚಿವ ಬಿ.ಸಿ.ಪಾಟೀಲ್‌ ಇದೇ ಸಂದರ್ಭದಲ್ಲಿ ವಿತರಣೆ ಮಾಡಿದರು.

ವೈಯಕ್ತಿಕ ಒಂದು ಲಕ್ಷ ರೂ. ನೀಡಿದ ಸಚಿವರು: ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ವೈಯಕ್ತಿಕವಾಗಿ ರೈತನ ಕುಟುಂಬಕ್ಕೆ ಒಂದು ಲಕ್ಷ ರೂ. ಮೊತ್ತ ನಗದನ್ನು ಇದೇ ಸಂದರ್ಭದಲ್ಲಿ ನೀಡಿ ರೈತನ ಕುಟಂಬಕ್ಕೆ ನೆರವಾದರು.

ಆತ್ಮಹತ್ಯೆ ಪರಿಹಾರವಲ್ಲ

ಇಡೀ ವಿಶ್ವ ಮಹಾಮಾರಿ ಕೊರೊನಾ ಸೊಂಕಿನ ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ ರೈತ ಸಮುದಾಯ ಬೆಳೆ ಮಾರಾಟ ಮತ್ತು ಸೂಕ್ತ ಬೆಲೆ ಸಿಗಲಿಲ್ಲ ಅಂತ ಆತ್ಮಹತ್ಯೆಗೆ ಶರಣಾಗುವುದು ಪರಿಹಾರವಲ್ಲ. ಕೃಷಿ ಚಟುವಟಿಕೆಗೆ ನಿರಂತರ ಸಾಗಲು ಸರ್ಕಾರ ಎಲ್ಲಾ ಕ್ರಮ ಕೈಗೊಂಡಿದೆ. ರಾಜ್ಯದ ಅನ್ನದಾತ ಆತ್ಮ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ರೈತ ಸಮುದಾಯಕ್ಕೆ ಕರೆ ನೀಡಿದರು.

Leave a Reply

error: Content is protected !!