NEWSಕೃಷಿ

ಮೇನಲ್ಲಿ ಕುಟುಂಬದ ಪ್ರತಿ ಸದಸ್ಯನಿಗೆ 10KG ಅಕ್ಕಿ ವಿತರಣೆ

ಪಿಎಂ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪಡಿತರ l  ಆಹಾರ ಆಯೋಗದ ಅಧ್ಯಕ್ಷ ಡಾ; ಕೃಷ್ಣಮೂರ್ತಿ ಹೇಳಿಕೆ

ವಿಜಯಪಥ ಸಮಗ್ರ ಸುದ್ದಿ

ಚಿತ್ರದುರ್ಗ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಮೇ ತಿಂಗಳಲ್ಲಿ ಕುಟುಂಬದ ಪ್ರತಿ ಸದಸ್ಯನಿಗೆ 10 ಕೆ.ಜಿ. ಅಕ್ಕಿ ಹಾಗೂ ಕುಟುಂಬವೊಂದಕ್ಕೆ 1 ಕೆ.ಜಿ ಬೇಳೆ ನೀಡಲಾಗುವುದು ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎನ್.ಕೃಷ್ಣಮೂರ್ತಿ ಹೇಳಿದರು.

ಅವರು ನಿನ್ನೆ ಹಿರಿಯೂರು ಹಾಗೂ ಚಿತ್ರದುರ್ಗ ತಾಲ್ಲೂಕಿನ ಸರ್ಕಾರಿ ಹಾಗೂ ಸೊಸೈಟಿಗಳ ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲನೆ ನಂತರ ಮಾತನಾಡಿದರು.

ಕೋವಿಡ್-19 ಸೋಂಕು ಹರಡುವಿಕೆಯನ್ನು ತಪ್ಪಿಸಲು ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ. ಈ ಪರಿಸ್ಥಿತಿಯಲ್ಲಿ ಬಡ ಜನರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸರ್ಕಾರವು ಬಡವರಿಗೆ, ಹಿಂದುಳಿದವರಿಗೆ ಪಡಿತರ ವಿತರಣೆ ಮಾಡಿದ್ದು ಲಾಕ್‌ಡೌನ್ ಸಮಯದಲ್ಲಿ ಯಾರಿಗೂ ತೊಂದರೆಯಾಗದAತೆ ಸರ್ಕಾರ ನೋಡಿಕೊಂಡಿದ್ದು ಆಯೋಗವು ಸಹ ಇದರ ಜವಾಬ್ದಾರಿ ನಿರ್ವಹಿಸಿದೆ ಎಂದು ತಿಳಿಸಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ 3,63,433 ಬಿಪಿಎಲ್ ಕಾರ್ಡ್ಗಳು, 42485 ಅಂತ್ಯೋದಯ ಯೋಜನೆಯ ಕಾರ್ಡ್ಗಳು ಹಾಗೂ 26061 ಎಪಿಎಲ್ ಕಾರ್ಡ್ಗಳು ಇವೆ. ಸರ್ಕಾರವು ಪಡಿತರ ವಿತರಣೆ ಯೋಜನೆಯಡಿ ಲಾಕ್‌ಡೌನ್ ಅವಧಿಯಲ್ಲಿ ಜನರಿಗೆ ಆಹಾರ ಧಾನ್ಯ ವಿತರಣೆ ಮಾಡಿದ್ದು ಏಪ್ರಿಲ್ ಹಾಗೂ ಮೇ ತಿಂಗಳ ಆಹಾರ ಧಾನ್ಯವನ್ನು ಒಂದೇ ಭಾರಿ ವಿತರಣೆ ಮಾಡಲಾಗಿದ್ದು ಇದು ಸಂಪೂರ್ಣವಾಗಿ ರಾಜ್ಯ ಸರ್ಕಾರದಿಂದಲೇ ನೀಡಲಾಗಿದೆ. ಇದುವರೆಗೆ ಜಿಲ್ಲೆಯಲ್ಲಿ ಶೇ. 94 ರಷ್ಟು ಪಡಿತರ ವಿತರಿಸಲಾಗಿದೆ ಎಂದು ಹೇಳಿದರು.

ಮುಂದಿನ ಮೇ ತಿಂಗಳಲ್ಲಿ ಪ್ರತಿ ಕಾರ್ಡ್ದಾರರಿಗೆ ಪ್ರತಿ ಯುನಿಟ್‌ಗೆ ಏಪ್ರಿಲ್ ಹಾಗೂ ಮೇ ತಿಂಗಳು ಸೇರಿ ತಲಾ 10 ಕೆ.ಜಿ ಅಕ್ಕಿ ಹಾಗೂ ಪ್ರತಿ ಕಾರ್ಡ್ಗೆ ಒಂದು ಕೆಜಿ ಬೇಳೆ ವಿತರಣೆ ಮಾಡುತ್ತಿದ್ದು ಇದು ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿದೆ ಎಂದರು.

ಜಿಲ್ಲೆಯಿಂದ ಯಾವುದೇ ದೂರ ಬಂದಿಲ್ಲ

ಪಡಿತರ ವಿತರಣೆಗೆ ಸಂಬAಧಿಸಿದAತೆ ಚಿತ್ರದುರ್ಗ ಜಿಲ್ಲೆಯಿಂದ ಆಹಾರ ಆಯೋಗಕ್ಕೆ ಹಾಗೂ ಆಹಾರ ಇಲಾಖೆಗೆ ಯಾವುದೇ ದೂರುಗಳು ಬಂದಿಲ್ಲ. ಸಾಮಾನ್ಯ ಜನರಿಗೆ ತೊಂದರೆಯಾಗದAತೆ ಇಲಾಖೆಯ ಉಪನಿರ್ದೇಶಕರು ಕಾರ್ಯನಿರ್ವಹಿಸಿದ್ದಾರೆ ಎಂದು ಅಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲೆಯ ಗೋದಾಮುಗಳಲ್ಲಿ ಸಾಕಷ್ಟು ಆಹಾರ ಧಾನ್ಯ ಸಂಗ್ರಹಿಸಲಾಗಿದೆ. ಗೋದಾಮುಗಳನ್ನು ವೈಜ್ಞಾನಿಕವಾಗಿ ಇಡಬೇಕು. ಮಳೆಗಾಲದಲ್ಲಿ ಗೋದಾಮುಗಳಲ್ಲಿ ಹುಳು, ಶೀಲಿಂದ್ರ ಆಗುವ ಸಾಧ್ಯತೆಗಳಿದ್ದು, ಗೋದಾಮುಗಳ ನಿರ್ವಹಣೆಯಲ್ಲಿ ವೈಜ್ಞಾನಿಕತೆಗೆ ಹೆಚ್ಚು ಆದ್ಯತೆ ನೀಡಬೇಕು, ಕೆಲವೊಂದು ಗೋದಾಮುಗಳಲ್ಲಿ ದಾಸ್ತಾನು ವ್ಯತ್ಯಾಸ ಕಂಡು ಬಂದಿದ್ದು ಈ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ತನಿಖೆ ಮಾಡಿ ಸಮಗ್ರವಾದ ವರದಿ ನೀಡಲು ತಿಳಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಹಾರ ಆಯೋಗದ ಸದಸ್ಯ ಎಚ್.ವಿ.ಶಿವಶಂಕರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಮಧುಸೂದನ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

error: Content is protected !!
LATEST
ಸಾವಿರ ವರ್ಷಗಳ ಇತಿಹಾಸವಿರುವ ಈಶ್ವರ ದೇವಾಲಯ ಜೀರ್ಣೋದ್ಧಾರಕ್ಕೆ ಚಾಲನೆ: ನೇಮಿರಾಜ್ ಕೃಷಿ ಸಚಿವರ ತವರು ನೆಲದಲ್ಲೇ ಕೊಬ್ಬರಿ ಮಾರಿದ ರೈತರ ಪರದಾಟ : ರೈತ ಸಂಘ ಕಿಡಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಪಿಎಸ್ ಪಿಂಚಣಿಗಾರರ ಬೃಹತ್ ಪ್ರತಿಭಟನೆ- ಆಕ್ರೋಶ ಮಳೆ ನೀರ ನೇರವಾಗಿ ಒಳಚರಂಡಿಗೆ ಬಿಡುವವರ ವಿರುದ್ಧ ಜಲಮಂಡಳಿ ಕ್ರಮಕ್ಕೆ ಆಕ್ಷೇಪ: ಡಿಸಿಎಂ ಡಿಕೆಶಿಗೆ ಎಎಪಿ ಬಹಿರಂಗ ಪತ್ರ ಕಿಟಕಿ ಮೂಲಕ ನುಸುಳಿ ಹಣ ದೋಚುತ್ತಿದ್ದ ಖತರ್ನಾಕ್‌ ಅಕ್ಕ-ತಮ್ಮ ಅಂದರ್‌ KSRTC: ನೌಕರರ ಸಮಸ್ಯೆ ನೀಗಿಸುವ ಸಮರ್ಥ ಪಡೆಯೂ ಇಲ್ಲ ಸಮರ್ಥ ನಾಯಕನೂ ಇಲ್ಲ! ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ ಆರೋಪ ಮಹರ್ಷಿ ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ: ಸಚಿವ ನಾಗೇಂದ್ರ ಸ್ಪಷ್... ಪಿ.ಚಂದ್ರಶೇಖರನ್‌ ಆತ್ಮಹತ್ಯೆ ಪ್ರಕರಣ: ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವ ಮಂತ್ರಿಯ ಸಂಪುಟದಿಂದ ಕಿತ್ತುಹಾಕಿ: ಎಎಪಿ KKRTC: ಡಬಲ್ ಡ್ಯೂಟಿ, ದೂರದ ಪ್ರಯಾಣಕ್ಕೆ ವಿಶ್ರಾಂತಿ ಕಡ್ಡಾಯ ಆದರೆ ದೇವದುರ್ಗ ಘಟಕದ ನೌಕರರಿಗೆ ಮರೀಚಿಕೆ!