ದೇಶ-ವಿದೇಶ

ವಿದೇಶದಿಂದ ಬರುವವರ ಬಗ್ಗೆ ಮಾಹಿತಿ ನೀಡಿ: ಜಿಲ್ಲಾಧಿಕಾರಿ ಶರತ್

ಹೋಂ ಕ್ವಾರಾಂಟೀನ್ ಗೆ ಸೂಚಿಸಿದವರು ಮನೆಯಲ್ಲಿಯೇ ಇರಬೇಕು

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ:  ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ವಿದೇಶದಿಂದ ಕಲಬುರಗಿ ಜಿಲ್ಲೆಗಳಿಗೆ ಬರುವ ವ್ಯಕ್ತಿಗಳು ಸ್ವಯಂ ಆಗಿ ಮಾಹಿತಿಯನ್ನು ನೀಡಬೇಕು ಎಂದು ಜಿಲ್ಲಾಧಿಕಾರಿಗಳಾದ ಶರತ್ ಕೋರಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಸಹಾಯಕ ಪೆÇಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಕರೆದಿದ್ದ ಮುಸ್ಲಿಂ ಧಾರ್ಮಿಕ ಮುಖಂಡರು ಹಾಗೂ ನಾಯಕರ ಸಭೆಯನ್ನು ಉದ್ದೇಶಿಸಿ   ಮಾತನಾಡುತ್ತಿದ್ದರು.

ಯಾರಾದರೂ ನಿಮ್ಮ ನೆರೆಹೊರೆಯವರು  ವಿದೇಶದಿಂದ ಬಂದ ಬಗ್ಗೆ ಮಾಹಿತಿ ಇದ್ದರೆ  ಕೂಡ ನೀಡಬೇಕು ಎಂದು ಮನವಿ ಮಾಡಿದರು.

ಈ ಬಗ್ಗೆ ಮಾಹಿತಿ ನೀಡಿದರೆ, ಸುಲಭವಾಗಿ ಕೊರೋನಾ ಶಂಕಿತರನ್ನು ಗುರುತಿಸಬಹುದು. ಯಾರನ್ನು ಹೋಂ ಕ್ವಾರಾಂಟೀನ್ ನಲ್ಲಿ ಇರಲು ಸೂಚಿಸಲಾಗಿದೆಯೋ, ಅವರು ಮನೆಯಲ್ಲಿಯೇ ಇರಬೇಕು ಎಂದು ಹೇಳಿದರು.

ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಭಾಗವಹಿಸುವುದನ್ನು ಕಡಿಮೆ ಮಾಡಬೇಕು. ಯಾರಿಗೂ ಕೈಕುಲುಕಬಾರದು, ಕೈಯಿಂದ ಬಾಯಿ, ಕಣ್ಣು, ಮೂಗುಗಳನ್ನು ಮುಟ್ಟಬಾರದು. ಆಗಾಗ ಕೈ ತೊಳೆಯಬೇಕು ಮುಂತಾದ ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.

ಶ್ವಾಸಕೋಶದ ತೊಂದರೆ ಇರುವವರಿಗೆ ಹೆಚ್ಚು ಸಮಸ್ಯೆ ಆಗಲಿದ್ದು, ಎಚ್ಚರ ವಹಿಸಬೇಕು ಎಂದು ಹೇಳಿದರು.

ಕಲಬುರಗಿ ನಗರ ಪೆÇಲೀಸ್ ಆಯುಕ್ತ ಎಂ.ಎನ್. ನಾಗರಾಜ್ ಅವರು ಮಾತನಾಡಿ, ಜನರು ಓಡಾಡದೆ ಮನೆಯಲ್ಲೇ ಇದ್ದರೆ, ಈ ರೋಗ ತಡೆಗಟ್ಟುವಲ್ಲಿ ಯಶಸ್ವಿಯಾಗಬಹುದು. ಇಲ್ಲದಿದ್ದಲ್ಲಿ ರಾಜ್ಯವμÉ್ಟಯಲ್ಲ, ಇಡೀ ದೇಶವನ್ನೇ  ಅಪಾಯಕ್ಕೆ ತಂದೊಡ್ಡಲಿದೆ ಎಂದು ಅವರು ಎಚ್ಚರಿಸಿದರು.

ಕೊರೋನಾ ವೈರಸ್ ಭೀತಿಯಿಂದ ಸೌದಿ ಅರೇಬಿಯಾದ ಮುಸ್ಲಿಮರ ಪವಿತ್ರ ಕ್ಷೇತ್ರ ಮೆಕ್ಕಾದ ಐತಿಹಾಸಿಕ ಮಸೀದಿಯನ್ನೇ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅದೇ ರೀತಿ ಮಸೀದಿ, ದೇವಸ್ಥಾನ ಮುಂತಾದ ಧಾರ್ಮಿಕ ಸ್ಥಳಗಳಲ್ಲಿ ಹೆಚ್ಚು ಜನ ಸೇರಬಾರದು ಎಂದು ಮನವಿ ಮಾಡಿದರು.

ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುಂದಿನ  ಒಂದು ತಿಂಗಳ ಕಾಲ ಮಹತ್ವದ್ದಾಗಿದೆ. 144  ಸೆಕ್ಷನ್ ಹೇರಿ ರೋಗ ತಡೆಯಲು ಅಸಾಧ್ಯ. ಇದರಲ್ಲಿ ಹಾಗಾಗಿ ಜನರ ಸಹಕಾರ ಅತ್ಯಗತ್ಯ ಎಂದು ಪ್ರತಿಪಾದಿಸಿದರು.

ಡಿಸಿಪಿ ಕಿಶೋರ್ ಬಾಬು, ಎಸಿಪಿಗಳಾದ ಗಿರೀಶ್, ವಿಜಯ್ ಕುಮಾರ್, ಸಂಚಾರ ವಿಭಾಗದ ಎಸಿಪಿ ವಿರೇಶ್ ಕರಡಿಗುಡ್ಡ, ಸಿಪಿಐ  ರಮೇಶ್ ಕಾಂಬ್ಳೆ ಮುಂತಾದ ಪೆÇಲೀಸ್ ಅಧಿಕಾರಿಗಳು ಹಾಜರಿದ್ದರು.

Leave a Reply

error: Content is protected !!