NEWSಸಂಸ್ಕೃತಿ

ಸಂಕಷ್ಟದಲ್ಲಿರುವ ಕಲಾವಿದರು, ಸಾಹಿತಿಗಳಿಗೆ ಆರ್ಥಿಕ ಸಹಾಯ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಪ್ರಸ್ತುತ ಕೋವಿಡ್ 19 ಕೊರೋನಾ ರೋಗಾಣುವಿನಿಂದ ಇಡೀ ರಾಜ್ಯ ಲಾಕ್‍ಡೌನ್ ಆಗಿದ್ದು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರು, ಸಾಹಿತಿಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆರ್ಥಿಕ ಸಹಾಯ ಮಾಡಲು ನಿರ್ಧರಿಸಿದೆ.

ಆರ್ಥಿಕವಾಗಿ ಸಂಕಷ್ಟದಲ್ಲಿರುವ ಎಲ್ಲಾ ಕಲಾ ಪ್ರಕಾರದ ಕಲಾವಿದರು, ಸಾಹಿತಿಗಳು ಅರ್ಜಿ ಸಲ್ಲಿಸಬಹುದಾಗಿದೆ.  ವೃತ್ತಿನಿರತ ಕಲಾವಿದರಾಗಿದ್ದು ಕನಿಷ್ಠ 10 ವರ್ಷ ಕಲಾಸೇವೆ ಮಾಡಿರಬೇಕು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿರಬಾರದು ಮತ್ತು ಯಾವುದೇ ಸರ್ಕಾರಿ ನೌಕರರಾಗಿರಬಾರದು (ರಾಜ್ಯ, ಕೇಂದ್ರ, ನಿಗಮ ಮಂಡಳಿ, ಸರ್ಕಾರಿ ಅನುದಾನಿತ ಸಂಸ್ಥೆಗಳು ಮತ್ತು ಅರೆ ಸರ್ಕಾರಿ ಸಂಸ್ಥೆಗಳು). ಈ ವ್ಯಾಪ್ತಿಗೆ ಒಳಪಡುವ ಕಲಾವಿದರು, ಸಾಹಿತಿಗಳು ತಮ್ಮ ಹೆಸರು ವಿಳಾಸ, ಕಲಾಪ್ರಕಾರ, ಆಧಾರ್ ಸಂಖ್ಯೆ, ದೂರವಾಣಿ ಸಂಖ್ಯೆ ಮತ್ತು ಬ್ಯಾಂಕ್ ಖಾತೆ (ಬ್ಯಾಂಕ್ ಪುಸ್ತಕದ ಜೆರಾಕ್ಸ್ ಪ್ರತಿ ಲಗತ್ತಿಸಿ).

ವಿವರಗಳನ್ನೊಳಗೊಂಡ ಅರ್ಜಿಯನ್ನು ಬಿಳಿಹಾಳೆಯ ಮೇಲೆ ಸ್ವವಿವರದೊಂದಿಗೆ ಸಂಬಂಧಪಟ್ಟ ಜಿಲ್ಲಾ ಸಹಾಯಕ ನಿರ್ದೇಶಕರು, ಅಕಾಡೆಮಿ, ಪ್ರಾಧಿಕಾರಗಳ ರಿಜಿಸ್ಟ್ರಾರ್‌ಗಳಿಗೆ  ಇಮೇಲ್ ವ್ಯಾಟ್ಸ್‌ ಆಪ್ ಹಾಗೂ ಖುದ್ದಾಗಿ ಅರ್ಜಿಯನ್ನು ದಿನಾಂಕ 27-04-2020 ರ ಒಳಗಾಗಿ ಸಲ್ಲಿಸಲು ತಿಳಿಸಲಾಗಿದೆ.

ಇದನ್ನೂ ಓದಿರಿ ರಂಗಭೂಮಿ ಸೇರಿ ಕಲೆಗಾಗಿ ಶ್ರಮಿಸುತ್ತಿರುವವರ ಸಂಕಷ್ಟ ನೀಗಿಸಿ

ಹೆಚ್ಚಿನ ವಿವರಕ್ಕಾಗಿ ಆಯಾ ಜಿಲ್ಲಾ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಅಕಾಡೆಮಿ, ಪ್ರಾಧಿಕಾರಗಳ ರಿಜಿಸ್ಟ್ರಾರ್ ಇವರನ್ನು ಸಂಪರ್ಕಿಸಲು ತಿಳಿಸಿದೆ.

1 Comment

Leave a Reply