NEWSನಮ್ಮರಾಜ್ಯ

ಸಚಿವರ ಎದುರೆ ಗುಂಪು ಗುಂಪಾಗೆ ಬಂದು ಆಹಾರ ಕಿಟ್‌ ಪಡೆದ ಜನತೆ

ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಬೇಜಾದ್ಬಾರಿ ತೋರಿದ ಸಚಿವರು, ಸಂಸದರು

ವಿಜಯಪಥ ಸಮಗ್ರ ಸುದ್ದಿ

ಬಳ್ಳಾರಿ: ಆಹಾರ ಕಿಟ್‌ ವಿತರಿಸುವ ವೇಳೆ ಜನ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಸಚಿವರ ಮುಂದೆಯೇ ಮುಗಿ ಬಿದ್ದ ಘಟನೆ ಬಳ್ಳಾರಿಯಲ್ಲಿ ಇಂದು ನಡೆದಿದೆ.

ಶನಿವಾರ ಆರೋಗ್ಯ ಸಚಿವ ಬಿ. ಶ್ರೀರಾಮುಲು ನೇತೃತ್ವದಲ್ಲಿ ಆಧಿಕಾರಿಗಳು ಆಹಾರ ಕಿಟ್‌ ವಿತರಿಸುತ್ತಿದ್ದರು. ಆ ಕಿಟ್‌ಗಳನ್ನು ಪಡೆಯಲು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನೂಕು ನುಗ್ಗಲಿನಿಂದಲೇ ಗುಂಪುಗುಂಪಾಗಿ ಬಂದು ಪಡೆಯುತ್ತಿದ್ದರು.

ಇಲ್ಲಿ ಜನರಿಗೆ ಅರಿವು ಮೂಡಿಸಬೇಕಾರ ಸಚಿವರೇ ಗುಂಪಾಗಿ ಬಂದು ಆಹಾರ ಕಿಟ್‌ ಸ್ವೀಕರಿಸುತ್ತಿದ್ದವರನ್ನು ನಿಯಂತ್ರಿಸುವ ಗೋಜಿಗೆ ಹೋಗಲಿಲ್ಲ. ದೇಶವೆ ಇಂದು ಕೊರೊನಾ ಭಯದಲ್ಲಿದೆ. ಆದರೆ ಸಚಿವರು ಈರೀತಿ ವಿತರಿಸಿದರೆ ಇತರರಿಗೆ ಯಾವ ರೀತಿಯ ಮೆಸೆಜನ್ನು ನೀಡುತ್ತಾರೆ ಎಂಬುವುದು ನಾಗರಿಕರ ಪ್ರಶ್ನೆಯಾಗಿದೆ.

ಇಂದುಆಹಾರ ಕಿಟ್‌ ವಿತರಿಸುತ್ತಿರುವುದು ಒಳ್ಳೆಯ ಕೆಲಸ ಮತ್ತು ಇಂದಿಗೆ ಅದು ಬಹಳ ಅಗತ್ಯವು ಕೂಡ ಆಗಿದೆ. ಆದರೆ ಅದಕ್ಕೆ ಮುಂಚಿತವಾಗಿ ಮುಂಜಾಗ್ರತೆ ವಹಿಸದೆ ಈ ರೀತಿ ಮಾಡುವುದರಿಂದ ವಿಶ್ವಮಾರಿಯನ್ನು ಇನ್ನಷ್ಟು ಹತ್ತಿರ ಕರೆದುಕೊಂಡಂತೆ ಆಗುವುದಿಲ್ಲವೇ ಎಂಬುದು ಒಂದು ಆತಂಕದ ವಿಷಯ.

ದಾವಣಗೆರೆಯಲ್ಲೂ ಗುಂಪಾಗಿ ಬಂದ ಜನರು

ಇನ್ನು ಸಚಿವ ಎಸ್‌.ಟಿ ಸೋಮಶೇಖರ್‌ ಮತ್ತು ಸಂಸದ ಸಿದ್ದೇಶ್ವರ್‌ ಅವರು ಕೂಡ ದಾವಣಗೆರೆಯಲ್ಲಿ ಇದೇ ರೀತಿ ನಡೆದು ಕೊಂಡಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಒಮ್ಮೆಗೆ ಐದು ವ್ಯಕ್ತಿಗಳು ಮಾತ್ರ ಇರಬೇಕು. ಅದೂ 3ರಿಂದ 6ಅಡಿ ಅಂತರ ಕಾಯ್ದುಕೊಂಡು ಎಂಬ  ಲಾಕ್‌ಡೌನ್‌ ನಿಯಮವನ್ನು ಹೇರಲಾಗಿದೆ. ಆದರೆ ಆ ನಿಯಮವನ್ನೇ ಜನಪ್ರತಿನಿಧಿಗಳು ಪಾಲಿಸದಿದ್ದರೆ ಹೇಗೆ?

ಇನ್ನಾದರೂ ರಾಜ್ಯದಲ್ಲಿ ಹಬ್ಬುತ್ತಿರುವ ವಿಶ್ವಮಾರಿ ಕೊರೊನಾವನ್ನು ಬುಡಸಮೇತ ಕಿತ್ತುಹಾಕಲು ಜನಪ್ರತಿನಿಧಿಗಳಿರಲಿ, ಸಾಮಾನ್ಯ ವ್ಯಕ್ತಿಗಳೇ ಇರಲಿ ಎಲ್ಲರೂ ಸಾಮಾಜಿ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗಿದೆ.

Leave a Reply

error: Content is protected !!
LATEST
ಚಾಮುಂಡಿ ಹುಟ್ಟುಹಬ್ಬ: ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಸಂಭ್ರಮ: ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ...