NEWS

ಸಾಮಾಜಿಕ ಅಂತರಕ್ಕೆ ಮಾರ್ಕಿಂಗ್

ಕೊರೊನಾ ನಿಯಂತ್ರಣಕ್ಕೆ ಜಾಗೃತಿ l ಸಿಇಒ ಡಾ. ಕೆ ವಿ ರಾಜೇಂದ್ರ ಹೇಳಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ಕೊರೊನಾ ಭಿತಿಯಿಂದ ಜನ ತತ್ತರಿಸುವುದನ್ನು ಸ್ವಲ್ಪಮಟ್ಟಿಗೆ ದೂರ ಮಾಡಲು ಮುಂಜಾಗ್ರತೆ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ಮುಂದಾಗುತ್ತಿದ್ದಾರೆ.

ಒಬ್ಬರಿಂದ ಮತ್ತೊಬ್ಬರಿಗೆ ಕೊರೊನಾ ವೈರಸ್‌  ಹರಡದಂತೆ ತಡೆಗಟ್ಟಲು ಕನಿಷ್ಠ ಒಂದು ಮೀಟರ್‌ ದೂರವನ್ನು ಒಬ್ಬರಿಂದ ಒಬ್ಬರು ಅಂತರ ಕಾಯ್ದುಕೊಳ್ಳಬೇಕು ಎಂದು ಸಾರ್ವಜನಿಕ ಸ್ಥಳಗಳು ಮತ್ತು ಅಂಗಡಿ ಮುಂಗಟ್ಟುಗಳ ಬಳಿ ಮಾರ್ಕಿಗ್‌ ಹಾಕಲಾಗುತ್ತಿದೆ.

ಈ ಬಗ್ಗೆ ಬೆಳಗಾವಿ ನಗರ ಮತ್ತು ಜಿಲ್ಲೆಯ ವಿವಿಧೆಡೆ ದಿನಸಿ ಅಂಗಡಿ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಂದ ನಿರ್ದಿಷ್ಟ ಅಂತರದ ಗುರುತು ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ ವಿ ರಾಜೇಂದ್ರ  ತಿಳಿಸಿದ್ದಾರೆ.

ದಿನ ನಿತ್ಯದ ಸಾಮಗ್ರಿಗಳನ್ನು ಖರೀದಿಸಲು ಆಗಮಿಸುವ ಗ್ರಾಹಕರು ಪರಸ್ಪರ ಅಂತರ ಕಾಯ್ದುಕೊಳ್ಳಲು ಇದರಿಂದ ಅನುಕೂಲವಾಗಲಿದೆ ಎಂದರು.

ಪಾಲಿಕೆ ಆಯುಕ್ತ ಕೆ.ಎಚ್‌. ಜಗದೀಶ್ ‌ ನೇತ್ರತ್ವದಲ್ಲಿ ಮಾರ್ಕಿಂಗ್ ಕೆಲಸ ನಡೆದಿದೆ. ಇದೇ ರೀತಿ ಎಲ್ಲ ತಲೂಕು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾರ್ಕಿಂಗ್ ಮಾಡುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Leave a Reply