NEWSಆರೋಗ್ಯ

ಸೇವೆ ಗುರುತಿಸಿ ಪ್ರೋತ್ಸಾಹಿಸುವ ಗುಣ ಸಮಾಜಕ್ಕೆ ಇರಬೇಕು

ಆಶಾ ಕಾರ್ಯಕರ್ತೆಯರಿಗೆ ಅಭಿನಂದನೆ ಸಮಾರಂಭದಲ್ಲಿ ಡಾ.ಕೆ.ಮೋಹನ್ ಅಭಿಮತ

ವಿಜಯಪಥ ಸಮಗ್ರ ಸುದ್ದಿ

ಮಡಿಕೇರಿ: ವೈದ್ಯಕೀಯ ವ್ಯವಸ್ಥೆಯಲ್ಲಿ ಸೇವಾ ಮನೋಭಾವ ಮುಖ್ಯವಾಗಿದ್ದು ಸೇವೆಯನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ಗುಣ ಸಮಾಜಕ್ಕೆ ಇರಬೇಕೆಂದು ಕೊಡಗು ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಕರೆ ನೀಡಿದ್ದಾರೆ.

ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ರೈತ ಸಹಕಾರ ಭವನದಲ್ಲಿ ಕುಶಾಲನಗರ ಕೂಡಿಗೆ ವ್ಯಾಪ್ತಿಯಲ್ಲಿ  ಕಾರ್ಯ ನಿರ್ವಹಿಸುವ ಆಶಾಕಾರ್ಯಕರ್ತೆಯರಿಗೆ ಪತ್ರಿಕೆ ವತಿಯಿಂದ ಕೊಡಮಾಡಿದ ಪ್ರಶಂಸನಾ ಪತ್ರ, ಸ್ಮರಣಿಕೆಗಳ ಗೌರವ ಸಲ್ಲಿಸಿ ಮಾತನಾಡಿದ ಅವರು, ನಮ್ಮ ವೈದ್ಯಕೀಯ ವ್ಯವಸ್ಥೆಯಲ್ಲಿ ಮಾಹಿತಿಯ ಮುಖ್ಯ ಮೂಲ ಮತ್ತು ಗ್ರಾಮೀಣ ಮಟ್ಟದಲ್ಲಿ ಕೊರೊನಾ ವಿರುದ್ದ ಇತರ ಎಲ್ಲಾ ಆರೋಗ್ಯ ಕ್ರಮಗಳಂತೆ ಹಗಲು ರಾತ್ರಿ ದುಡಿಯುತ್ತಿರುವ ಆಶಾ ಕಾರ್ಯಕರ್ತಯರನ್ನು ಅಭಿನಂದಿಸಿ ಪ್ರೋತ್ಸಾಹಿಸಿದ್ದ ಪ್ರಜಾಸತ್ಯ ಬಳಗದವರು ಮಾದರಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು  ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್  ಆಶಾಕಾರ್ಯಕರ್ತರಿಗೆ ಪ್ರೋತ್ಸಾಹ ನೀಡಿ ಗೌರವ ಸಲ್ಲಿಸಿದ  ಕಾರ್ಯಕ್ರಮವನ್ನು ಶ್ಲಾಘಿಸಿದರು.

ಹಾಸನ ಹಾಲು ಒಕ್ಕೂಟದ ನಿರ್ದೇಶಕರು ಮತ್ತು ಕೂಡುಮಂಗಳೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ಮಾತನಾಡಿ, ಕೊರೊನಾ ಎಂಬ ಮಹಾಮಾರಿಯ ನರ್ತನ ತಡೆಯಲು ಹಗಲಿರುಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತರ ಸೇವೆಯನ್ನು ನಾವೆಲ್ಲಾರೂ ಸ್ಮರಿಸಬೇಕು. ಈ ನಿಟ್ಟಿನಲ್ಲಿ  ಕಾಣದ ಕ್ರಿಮಿ ವೈರಸ್ ವಿರುದ್ಧ ಜನಜಾಗೃತಿ ಮೂಡಿಸಿ ಆರೋಗ್ಯವಂತ ಸಮಾಜ ಕಟ್ಟುವಲ್ಲಿ ಶ್ರಮಿಸುತ್ತಿರುವ ಆಶಾಕಾರ್ಯಕರ್ತರಿಗೆ ಹಮ್ಮಿಕೊಂಡ ಸಮಾರಂಭ ಅರ್ಥಪೂರ್ಣವಾಗಿದೆ ಎಂದು ಹೇಳಿದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್ ಹಾಗೂ ಪತ್ರಕರ್ತ ಕೆ.ಕೆ.ನಾಗರಾಜಶೆಟ್ಟಿ ಮಾತನಾಡಿ, ಕೊರೊನಾ  ವಾರಿಯರ್ಸ್‍ಗಳ ಶ್ರಮಿಕ  ಸೇವೆಯಿಂದಾಗಿ ಕೊಡಗು ಕೊರೋನಾ ಮುಕ್ತವಾಗಿದೆ. ಅಂತಹ ವಾರಿಯರ್ಸ್ ಗಳಿಗೆ ಪ್ರಜಾಸತ್ಯ ಪತ್ರಿಕಾ ಸಂಸ್ಥೆಯ ಮುಖ್ಯಸ್ಥರಾದ ಡಾ.ನವೀನ್ ಕುಮಾರ್ ಅವರು ತಾವು ಸೇವೆ ಸಲ್ಲಿಸುತ್ತಿರುವುದಲ್ಲದೆ ಕೊರೊನಾ ವಿರುದ್ಧ  ಎಲೆ ಮರೆಯ ಕಾಯಿಯಂತೆ ವೈದ್ಯಕೀಯ ವ್ಯವಸ್ಥೆಯ ಬೆನ್ನುಲುಬಾಗಿ ಕೆಲಸ ಮಾಡುವವರನ್ನು ಅಭಿನಂದಿಸುತ್ತಿರುವುದು ಅನನ್ಯವಾದುದು ಎಂದು ಶ್ಲಾಘಿಸಿದರು.

ಕೊಡಗು ಜಿಲ್ಲೆಯನ್ನು ಕೊರೋನಾ  ಮುಕ್ತ ಜಿಲ್ಲೆಯಾಗಿಸುವಲ್ಲಿ ಕೊರೋನಾ ವಾರಿಯರ್ಸ್‍ಗಳು ಮಾಡುತ್ತಿರುವ ಕರ್ತವ್ಯಕ್ಕಿಂತಲೂ ಮಿಗಿಲಾದ ಸೇವೆಯಲ್ಲಿ ಡಾ.ನವೀನ್ ಕುಮಾರ್ ಅವರು ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಚಾರ. ಜಿಲ್ಲೆಯ ಪೌರ ಕಾರ್ಮಿಕರು, ಪತ್ರಕರ್ತರು, ಪೊಲೀಸರು ಸೇರಿದಂತೆ ಎಲ್ಲರಿಗೂ ಉಚಿತವಾದ ವೈದ್ಯಕೀಯ ಚಿಕಿತ್ಸೆಯನ್ನು ನೀಡುವ ಮೂಲಕ ತಮ್ಮದೇ ಆದ ಸೇವೆಯಲ್ಲಿ ಡಾ.ನವೀನ್ ಅವರು ತೊಡಗಿಸಿಕೊಂಡಿದ್ದಾರೆ. ಇದೀಗ ಆಶಾ ಕಾರ್ಯಕರ್ತರ ಸೇವೆಯನ್ನು ಗುರ್ತಿಸಿ ಗೌರವಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಇದೇ ಸಂದರ್ಭ ಕಾರ್ಯ ಕ್ರಮದಲ್ಲಿದ್ದ  ಪತ್ರಕರ್ತ ಕೆ.ಎಸ್.ಮೂರ್ತಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಜಾಸತ್ಯ ಪತ್ರಿಕೆಯ ಸಂಪಾದಕ  ಬಿ.ಸಿ.ನವೀನ್ ಕುಮಾರ್ ಮಾತನಾಡಿ, ಆಶಾ ಕಾರ್ಯಕರ್ತರ ಮೇಲೆ ಎಲ್ಲೋ ಜರುಗಿದ ದುರ್ಘಟನೆಗಳನ್ನು ಮನಸ್ಸಿಗೆ ಹಚ್ವಿಕೊಳ್ಳದೇ ನಿರ್ಮಲ ಭಾವದಿಂದ ತಮ್ಮ ಸೇವೆಯಲ್ಲಿ ತಾವು ಮುಂದುವರಿಯಬೇಕೆಂದು ಅವರು ಕರೆಕೊಟ್ಟರು.

ಕೊಡಗು ಜಿಲ್ಲೆ ಕೊರೋನಾ ಮುಕ್ತ ಜಿಲ್ಲೆಯಾಗುವಲ್ಲಿ ವೈದ್ಯರು, ಪೆÇಲೀಸರು, ಆಶಾ ಕಾರ್ಯಕರ್ತರು, ಪೌರಕಾರ್ಮಿಕರು,  ಪತ್ರಕರ್ತರು ಹಾಗು  ಶುಶ್ರೂಶಕರ ಸೇವೆ ಅಪಾರ. ಆದ್ದರಿಂದಲೇ ಅವರೆಲ್ಲರಿಗೂ ನಮ್ಮ ಸಂಸ್ಥೆಯಿಂದ ಆರೋಗ್ಯ ಶಿಬಿರಗಳನ್ನು  ಹಮ್ಮಿಕೊಳ್ಳಲಾಗಿದೆ ಎಂದು ಡಾ.ನವೀನ್ ಹೇಳಿದರು. ಆಶಾ ಕಾರ್ಯಕರ್ತರು ದೂರದಲ್ಲಿ ನಡೆದ ಕಹಿ  ಘಟನೆಗಳಿಂದ ಎದೆಗುಂದದೇ ತಮ್ಮ ಸೇವೆಯ ಮೂಲಕ ಆರೋಗ್ಯವಂತ ಸಮಾಜಕಟ್ಟಲು ಕರೆಕೊಟ್ಟರು.

ಸೋಮವಾರಪೇಟೆ ತಾಲೂಕು ವೈದ್ಯಾಧಿಕಾರಿ ಡಾ.ಶ್ರೀನಿವಾಸ್, ಹಿರಿಯ ಪತ್ರಕರ್ತರಾದ ಬಿ.ಸಿ.ದಿನೇಶ್, ಕೂಡಿಗೆ ಗಣೇಶ್, ಕೆ.ಆರ್.ಜಗದೀಶ್  ಇದ್ದರು.

Leave a Reply

error: Content is protected !!
LATEST
ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಗೆ ಹರಿದು ಬಂತು ಕೋಟಿ ಕೋಟಿ ಹಣ