NEWSನಮ್ಮರಾಜ್ಯ

ಹತ್ತು ದಿನಗಳಲ್ಲಿ 1.37ಲಕ್ಷ ಪಿಎಫ್ ಹಿಂಪಡೆಯುವಿಕೆ ಪೂರ್ಣ

ಭವಿಷ್ಯನಿಧಿ ಸಹಾಯಕ ಆಯುಕ್ತ ತಪಸ್ ಕುಮಾರ್ ಘೋಷ್ ಮಾಹಿತಿ

ವಿಜಯಪಥ ಸಮಗ್ರ ಸುದ್ದಿ

ಬಳ್ಳಾರಿ: ನೌಕರರ ಭವಿಷ್ಯ ನಿಧಿ ಸಂಘಟನೆಯು ಹತ್ತು ದಿನದೊಳಗೆ ಸುಮಾರು 1.37 ಲಕ್ಷ ಪಿಎಫ್ ಕ್ಲೇಮ್ಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಭವಿಷ್ಯನಿಧಿ ಸಹಾಯಕ ಆಯುಕ್ತ ತಪಸ್ ಕುಮಾರ್ ಘೋಷ್ ತಿಳಿಸಿದ್ದಾರೆ.

ಕೋವಿಡ್-19 ಮಹಾಮಾರಿಯಿಂದ ಉಂಟಾಗಿರುವ ಬಿಕ್ಕಟ್ಟನ್ನು ಎದುರಿಸಲು ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಯೋಜನೆಯ ಪ್ರಕಾರ ಪ್ಯಾರಾ 68ಐ (3)ರ ಅಡಿಯಲ್ಲಿ ಮಾರ್ಚ್ 28ರಂದು ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದು, ಈ ಮೂಲಕ ಪಿಎಫ್‌ ಖಾತೆ ನೌಕರರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಹೇಳಿದರು.

ಕೊರೊನಾ ಹಿನ್ನೆಲೆಯಲ್ಲಿ ಪಿಎಫ್ ಖಾತೆಯಲ್ಲಿ ನೌಕರರ ಪಾಲಿನ ಹಣದಲ್ಲಿ ಶೇ.75ರಷ್ಟು ಮೊತ್ತವನ್ನು ಹಾಗೂ ಮೂಲ ವೇತನ, ತುಟ್ಟಿ ಭತ್ಯೆಗೆ ಸಮಾನವಾದ ಹಣವನ್ನು ಕಡಿಮೆ ಹಣ ಉಳ್ಳವರು ಮುಂಗಡ ಹಣವನ್ನು ಪಡೆಯಬಹುದು, ಹಾಗೆಯೇ ಯಾವುದೆ ರೀತಿಯ ಆದಾಯ ತೆರಿಗೆ ಕಡಿತಕ್ಕೆ ಒಳಪಡುವುದಿಲ್ಲ ಎಂದು ತಿಳಿಸಿದ್ದಾರೆ.

ನೌಕರರ ಭವಿಷ್ಯ ನಿಧಿ ಸಂಘಟನೆಯು ಕೇವಲ 24ಗಂಟೆಗಳಲ್ಲಿ ಚಂದದಾರರಿಗೆ ಅನುಕೂಲವಾಗುವ ರೀತಿ ಮಾರ್ಚ್ 29ರಂದು ಹೊಸ ಸಾಫ್ಟ್ವೇರ್ನ್ನು ಪರಿಚಯಿಸಿದ್ದಾರೆ. ಹಾಗೆಯೇ ಯಾವುದೆ ಕಾಗದದ ವಹಿವಾಟು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದಿರಿಸಿ ಹಾಗೂ ಕೆವೈಸಿ ಸರಿಯಾಗಿರುವ ಎಲ್ಲಾ ಅರ್ಜಿಗಳನ್ನು ಪೂರ್ಣಗೊಳಿಸಿದೆ ಮತ್ತು ಕ್ಷೇಮ್ಗಳು ಸ್ವಯಂಚಾಲಿತವಾಗಿ ಇತ್ಯರ್ಥವಾಗುವ ರೀತಿ ಭವಿಷ್ಯನಿಧಿ ಸಂಘಟನೆಯು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಕೋವಿಡ್-19 ಮಹಾಮಾರಿಯಿಂದ ಉಂಟಾಗಿರುವ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾರ್ಮಿಕರಿಗೆ ಅನುಕೂಲವಾಗಲು ಹೊಸ ನಿಯಮದನ್ವಯವಾಗಿ 1.37 ಲಕ್ಷ ಕ್ಲೇಮ್ಗಳ ಮೊತ್ತ 279.65 ಕೋಟಿ ರೂ ಹಣವನ್ನು ಪಿಎಫ್ ಚಂದದಾರರು ಹಿಂಪಡೆದಿದ್ದಾರೆ ಮತ್ತು 72 ಗಂಟೆಗಳಿಗಿAತ ಕಡಿಮೆ ಅವಧಿಯಲ್ಲಿ ಪರಿಷ್ಕರಿಸಿದ ಹಣ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಭವಿಷ್ಯನಿಧಿ ಸಂಘಟನೆಯು ಜನ್ಮದಿನಾಂಕದ ಯಾವುದೆ ತಿದ್ದುಪಡಿಗಳಿದ್ದಲ್ಲಿ ಸಡಲಿಕೆಯನ್ನು ನೀಡಿರುತ್ತಾರೆ. ಅದಕ್ಕೆ ಸರಿಯಾದ ಪುರಾವೆಯಿರುವ ಆಧಾರ್ ಹಾಗೂ ಜನ್ಮದಿನಾಂಕದ ಪತ್ರವನ್ನು ಸರಿಯಾದ ಪುರಾವೆ ಎಂದು ಒಪ್ಪಿಕೊಳ್ಳಲಾಗಿದ್ದು, ಆದರೆ ಎರಡು ದಾಖಲೆಗಳಲ್ಲಿರುವ ವ್ಯತ್ಯಾಸ 3 ವರ್ಷಗಳ ಒಳಗಿರಬೇಕು.ಇಂತಹ ಪುರಾವೆ ಭವಿಷ್ಯನಿಧಿಯು ಗಣನೆಗೆ ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

error: Content is protected !!
LATEST
ಭ್ರಷ್ಟಾಚಾರ, ಕಮಿಷನ್‌ ದಂಧೆ ನಿಲ್ಲಿಸಿದರೆ ಗ್ಯಾರಂಟಿ ಯೋಜನೆಗಳಿಗೂ ಕೊಟ್ಟು ಹಣ ಉಳಿಯುತ್ತದೆ : ಎಎಪಿ ಜೂ.24ರಂದು ಶಿವಮೊಗ್ಗದಲ್ಲಿ ರಾಷ್ಟ್ರ, ರಾಜ್ಯ ರೈತ ಮುಖಂಡರ ಸಮಾವೇಶ: ಕುರುಬೂರ್ ಶಾಂತಕುಮಾರ್ ಸಂತ್ರಸ್ತೆ ಅಪರಹರಣ ಪ್ರಕರಣ: ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ಮಂಜೂರು KSRTCಯಿಂದ 300ಕ್ಕೂ ಹೆಚ್ಚು ಹೊಸ ಮಾರ್ಗಗಳಲ್ಲಿ ಬಸ್‌ ಓಡಾಟ: ಸಚಿವ ರಾಮಲಿಂಗಾರೆಡ್ಡಿ BMTC: 50ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್​​ಗಳ ಚಾಲಕರಿಗೆ ಗೇಟ್‌ಪಾಸ್‌ ಅತ್ಯಾಚಾರ ಆರೋಪಿ ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣನ ಎಸ್‌ಐಟಿ ಕಸ್ಟಡಿ ಅಂತ್ಯ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ವಿರೋಧಿಸಿ ನಾಳೆ ರಾಜ್ಯಾದ್ಯಂತ ಎಎಪಿ ಪ್ರತಿಭಟನೆ ನಟ ದರ್ಶನ್‌ ಸ್ಥಿತಿಗೆ ಮರುಗಿ ಅಭಿಮಾನಿ ಅನ್ನನೀರು ಬಿಟ್ಟು ಆತ್ಮಹತ್ಯೆಗೆ ಶರಣು? KSRTC ‘ಅಶ್ವಮೇಧ’ಗಳಿಂದ ಸಂಸ್ಥೆಗೆ ಶೇ.10ಕ್ಕೂ ಹೆಚ್ಚು ಲಾಭ : ಸಚಿವ ರಾಮಲಿಂಗಾರೆಡ್ಡಿ ಅತೀ ಶೀಘ್ರದಲ್ಲೇ NWKRTC ಒಡಲು ಸೇರಲಿವೆ 350 ಹೊಸ ಎಲೆಕ್ಟ್ರಿಕ್​ ಬಸ್‌ಗಳು