NEWSಸಂಸ್ಕೃತಿ

ಹಿರಿಯ ಸಾಹಿತಿ ಡಾ. ರಾಜೇಗೌಡ ಹೊಸಹಳ್ಳಿ ನಿಧನ

ವಿಜಯಪಥ ಸಮಗ್ರ ಸುದ್ದಿ

ಹಾಸನ: ಹಿರಿಯ ಸಾಹಿತಿಗಳು ಹಾಗೂ ಸಂಸ್ಕೃತಿ ಚಿಂತಕರೂ ಆದ ಆಲೂರು ತಾಲೂಕು ಮರಸು ಹೊಸಹಳ್ಳಿಯ ಡಾ. ರಾಜೇಗೌಡ ಹೊಸಹಳ್ಳಿ ಅವರು ಇಂದು ನಿಧನರಾದರು.
 ಜಿಲ್ಲೆಯ ಆಲೂರು ತಾಲೂಕಿನ ಮರಸು ಹೊಸಹಳ್ಳಿ ಗ್ರಾಮದಲ್ಲಿ 1949 ರ ಜುಲೈ 6 ರಂದು ಎಚ್.ಎಸ್ ರಂಗಪ್ಪ ಹಾಗೂ ರಂಗಮ್ಮನವರ ಪುತ್ರರಾಗಿ ಜನಿಸಿದ ಇವರು 1974 ರಲ್ಲಿ ಮಂಗಳೂರಿನ ಮಂಗಳ ಗಂಗೋತ್ರಿಯಲ್ಲಿ ಕನ್ನಡ ಎಂ.ಎ. ಪದವಿ ಪಡೆದು 1976 ರಲ್ಲಿ ನೋಂದಣಿ ಹಾಗೂ ಮುದ್ರಾಂಕ ಇಲಾಖೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ 2006 ರಲ್ಲಿ ಸ್ವಯಂ ನಿವೃತ್ತಿ ಪಡೆದರು.  ಈ ನಡುವೆ ಸಾಹಿತ್ಯ ಪ್ರವೃತ್ತಿಯಾಗಿ 2001 ಡಾಕ್ಟರೇಟ್ ಪ್ರಶಸ್ತಿ ಪಡೆದಿದ್ದರು.
 ತಮ್ಮ ಜೀವನ ಕಾಲದಲ್ಲಿ ಸತ್ಯಭೋಜರಾಜ, ಮಗನ ತಿಂದ ಮಾರಾಯನ ದುರ್ಗ, ಕೋಳಿ ಮತ್ತು ತುಳಸಿ ಕಟ್ಟೆ, ಜಾನಪದ ಸಂಕಥನ, ಅಕ್ಕಯ್ಯನ ಸಂಸಾರ, ತಾಳ ಬಂದೋ ತಂಬೂರಿ ಬಂದೋ, ನೋಂದಣಿ ಕೈಪಿಡಿ, ಮಲೆನಾಡ ಸೆರಗಲ್ಲಿ ನಿಂತು, ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಜಾನಪದೀಯತೆ, ಅರಿವಿನ ಕುರುಹು, ಉದರದೊಳು ಹಸಿರುಕ್ಕಿ, ಗಾಂಧಿವಾದಿ ಬಿ.ಎನ್ ಬೋರಣ್ಣಗೌಡ, ಗಾಂಧಿ ಸಂಕಥನ, ದೇವರ ನಾಲಿಗೆಯನ್ನು ಕತ್ತರಿಸುವ ಕಥನ, ಆಧುನಿಕತೆ ಎಂಬ ಮಾಯಾ ಕತ್ತರಿ, ಮಹಾತ್ಮ ಗಾಂಧಿ( ಅಂತಿಮ ಹಂತ) ಎಂಬ ಪ್ರಮುಖ ಕೃತಿಗಳನ್ನು ಇವರು ರಚಿಸಿದ್ದರು.
 ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಸಾಹಿತಿಗಳು ಹಾಗೂ ಜಿಲ್ಲಾ ಜಾನಪದ ಪರಷತ್ ಅಧ್ಯಕ್ಷ ಹಂಪನಹಳ್ಳಿ ತಿಮ್ಮೇಗೌಡ, ಸಾಹಿತಿ ರೂಪಾ ಹಾಸನ್,ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷರಾದ ರವಿ ನಾಕಲಗೂಡು, ಕೊಟ್ರೇಶ್ ಉಪ್ಪಾರ್, ಶ್ರೀ ಪಡ್ರೆ, ಅಪ್ಪಾಜಿ ಗೌಡ, ಮಾಂತೇಶ್, ಪ್ರಗತಿಪರರಾದ ಸುಬ್ಬ ಸ್ವಾಮಿ, ಕಿಶೋರ್ ಕುಮಾರ್ ಮತ್ತಿತರರು ಡಾ. ರಾಜೇಗೌಡ ಹೊಸಹಳ್ಳಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Leave a Reply

error: Content is protected !!
LATEST
ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಗೆ ಹರಿದು ಬಂತು ಕೋಟಿ ಕೋಟಿ ಹಣ ಸಾರಿಗೆ ನೌಕರರ ವೇತನದಲ್ಲಿ ಹಣ ಕಟ್‌ ಮಾಡಿ ಎಲ್‌ಐಸಿ ಪಾಲಿಸಿಗೆ ಪಾವತಿಸದ ಬಗ್ಗೆ ದೂರು ಕೊಟ್ಟರೆ ಅಮಾನತು: ಸಚಿವ ರಾಮಲಿಂಗ... BMTC: ಚಾಲಕ ಕಂ. ನಿರ್ವಾಹಕರು ಆಗಸ್ಟ್‌ 14ರೊಳಗೆ ಸಂಪೂರ್ಣ ನಿರ್ವಾಹಕರಾಗಿ ಬದಲಾಗಬೇಕು: ಸಿಟಿಎಂ ಆದೇಶ