NEWSದೇಶ-ವಿದೇಶ

ಕೊರೊನಾ ವೈರಸ್‌ ಜೀನೋಮ್‌ ಸೀಕ್ವೇನ್ಸ್‌ ಡಿಕೋಡ್‌ !?

ಗುಜರಾತ್‌ ವಿಜ್ಞಾನಿಗಳ ಸಾಧನೆಗೆ ಗುಜರಾತ್ ಸಿಎಂ ಕಚೇರಿ ಟ್ವೀಟ್ ಮೂಲಕ ಮೆಚ್ಚುಗೆ

ವಿಜಯಪಥ ಸಮಗ್ರ ಸುದ್ದಿ

ಅಹಮದಾಬಾದ್: ಕೊರೊನಾ ವೈರಸ್ ಗೆ ಮದ್ದು ಕಂಡುಹಿಡಿಯುವ ನಿಟ್ಟಿನಲ್ಲಿ ಗುಜರಾತ್‌ ವಿಜ್ಞಾನಿಗಳು ಕೋವಿಡ್-19 ಗೆ ಕಾರಣವಾಗಿರುವ ವೈರಾಣುವಿನ ಜೀನೋಮ್ ಸೀಕ್ವೆನ್ಸ್ ಡಿಕೋಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಿಎಂ ಕಚೇರಿ ಶ್ಲಾಘಿಸಿದೆ.

ಗುಜರಾತ್ ಮುಖ್ಯಮಂತ್ರಿ ಕಚೇರಿ ಟ್ವೀಟ್ ಮೂಲಕ ವಿಜ್ಞಾನಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅದರ ಬಗ್ಗೆ ವಿವರನ್ನು ನೀಡಲಾಗಿದೆ.

ಜೀನೋಮ್‌ ಎಂದರೆ ವಂಶವಾಹಿಗಳ ಗುಚ್ಛ. ಇದು ವೈರಾಣುಗಳ ನಿರ್ದಿಷ್ಟ ಗುಣಲಕ್ಷಣಗಳನ್ನು ನಿರ್ಧರಿಸುತ್ತದೆ. ಜೀನೋಮ್ ಸೀಕ್ವೆನ್ಸ್ ಅಥವಾ  ವಂಶವಾಹಿಳ ಗುಚ್ಛದ ಅನುಕ್ರಮವನ್ನು ಡಿಕೋಡ್ ಮಾಡುವುದರಿಂದ ವೈರಾಣುವಿನ ಮೂಲವನ್ನು ತಿಳಿದು ಸೂಕ್ತ ಚಿಕಿತ್ಸಾ ವಿಧಾನಕ್ಕೆ ಸಹಕಾರಿಯಾಗಲಿದೆ.

ಆ ನಿಟ್ಟಿನಲ್ಲಿ ಸಂಶೋಧನೆ ಆರಂಭಿಸಿದ್ದು, ಮೊದಲ ಬಾರಿಗೆ ಭಾರತದಲ್ಲಿ ಗುಜರಾತ್‌ನ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರ (ಜಿಬಿಆರ್‌ಸಿ)ದ ವಿಜ್ಞಾನಿಗಳು ಜೀನೋಮ್ ಸೀಕ್ವೆನ್ಸ್ ಡಿಕೋಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿದೆ.

ಜೀನೋಮ್ ಸೀಕ್ವೆನ್ಸ್ ವೈರಸ್‌ನ ಮೂಲ, ಔಷಧಗಳ ಟಾರ್ಗೆಟ್ ಹಾಗೂ ಚುಚ್ಚುಮದ್ದುಗಳನ್ನು ನೀಡುವುದರಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಟ್ವಿಟರ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದೆ.

ಈಗಾಗಲೇ ಐಸಿಎಂಆರ್ ನಲ್ಲಿನ ಸಂಶೋಧಕರು ಭಾರತದಲ್ಲಿರುವ ಎರಡು ಬಾವಲಿ ಪ್ರಬೇಧಗಳಲ್ಲಿ ಕೊರೋನಾ ವೈರಸ್ ಗುರುತಿಸಿದ್ದು, ಮುಂದಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಳನ್ನು ಹರಡುವ ಸಾಮರ್ಥ್ಯವಿರುವ ಹೊಸ ಪ್ರಬೇಧಗಳನ್ನು ತಿಳಿಯಲು ಬಾವಲಿಗಳ ಮೇಲೆ ನಿಗಾ ವಹಿಸಲು ಸೂಚಿಸಲಾಗಿದೆ.

ಗುಜರಾತ್‌ ವಿಜ್ಞಾನಿಗಳು ಮಾಡಿರುವ ಪ್ರಯೋಗ ಯಶಸ್ವಿಯಾದರೆ ಇಡೀ ವಿಶ್ವಕ್ಕೆ ಭಾರತ ಗುರುವಾಗುವುದರಲ್ಲೊಇ ಯಾಗುದೇ ಸಂಶಯವಿಲ್ಲ ಎಂದು ಈಗಾಲೇ ನಾಗರಿಕರು ಮೆಚ್ಚುಗೆ ಮಾತನಾಡುತ್ತಿದ್ದಾರೆ.

 

 

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ