ರಾಯಚೂರು: ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಜೂಜಾಟದಲ್ಲಿ ನಿರತರಾಗಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ ಸುಮಾರು 36 ಜನ ಆರೋಪಿಗಳನ್ನು ಬಂಧಿಸಿ, ಒಟ್ಟು 31 ಸಾವಿರ ರೂ. ನಗದು ವಶಪಡಿಸಿಕೊಂಡಿರುವ ಘಟನೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ನಲ್ಲರೆಡ್ಡಿ, ಬೂದೆಪ್ಪ, ರಾಮಪ್ಪ, ಈರಣ್ಣ, ಮಹಾದೇವ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ತುರುವಿಹಾಳ ಠಾಣೆಯಲ್ಲಿ ರಾಘವೇಂದ್ರ, ಲಾಲಸಾಬ, ಬಾಲಪ್ಪ, ಸೋಮಣ್ಣ, ದ್ಯಾಮಣ್ಣ, ಚಂದುಸಾಬ, ಶ್ಯಾಮಣ್ಣ, ಹನುಮಂತ, ಮುತ್ತಣ್ಣ, ದೇವಪ್ಪ ಮತ್ತು ತಿಪ್ಪಣ್ಣ ಎಂಬುವರನ್ನು ಬಂಧಿಸಲಾಗಿದೆ. 1,860 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಬಳಗಾನೂರು ಠಾಣೆಯಲ್ಲಿ ಸೂಗಪ್ಪ, ಬಸವಲಿಂಗಪ್ಪ, ಮೌನೇಶ ಮತ್ತು ಮಾನ್ವಿ ಠಾಣೆಯಲ್ಲಿ ರಾಮನಾಯಕ, ಮಲ್ಲಪ್ಪ, ಗೂಡುಸಾಬ್, ಬಸವರಾಜ, ಖಾಜಾ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಒಟ್ಟು ನಾಲ್ಕು ಪ್ರಕರಣಗಳಲ್ಲಿ ಸುಮಾರು 36 ಜನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿತರಿಂದ 31,210 ರೂ ನಗದು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಆಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.