ಬೆಂಗಳೂರು: 16ನೇ ವಿಧಾನಸಭಾ ಚುನಾವಣೆ ಅಖಾಡ ಕರ್ನಾಟಕದಲ್ಲಿ ರಂಗೇರಿದ್ದು, ನಿನ್ನೆ (ಮೇ8) ಮೈಕಾಸುರನ ಅಬ್ಬರದ ಪ್ರಚಾರಕ್ಕೆ ತೆರೆ ಬಿದ್ದಿದೆ. ಹೀಗಾಗಿ ಇಂದು (ಮೇ9) ಮನೆ ಮನೆ ಪ್ರಚಾರದಲ್ಲಿ ಅಭ್ಯರ್ಥಿಗಳು ತೊಡಗಿದ್ದಾರೆ.
ಅಂತಿಮವಾಗಿ ಇಂದು ರಾತ್ರಿ ವರೆಗೂ ಮನೆಮನೆಗಳಿಗೆ ಭೇಟಿ ನೀಡುತ್ತಿರುವ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಕಾರ್ಯಕರ್ತರು ಹಾಗೂ ಮುಖಂಡರು ಮತದಾರರನ್ನು ತಮ್ಮತ್ತ ಒಲಿಸಿಕೊಳ್ಳಲು ಅಂತಿಮ ಕಸರತ್ತು ನಡೆಸುತ್ತಿದ್ದಾರೆ.
ಇನ್ನು ಚುನಾವಣಾ ಆಯೋಗವು ಮತದಾನಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ಭೂತ್ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಿರುವ ಭೂತ್‌ಗಳಿಗೆ ಕಳುಹಿಸುವುದರಲ್ಲಿ ನಿರತವಾಗಿದೆ.
ಒಟ್ಟಾರೆ, ರಾಜ್ಯದ ಮತರಾರರು ಕೂಡ ತಮ್ಮ ನೆಚ್ಚಿನ ಅಭ್ಯರ್ಥಿಯನ್ನು ಆರಿಸಿಕೊಳ್ಳಲು ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದು, ತಮಗೆ ಮತ್ತು ತಮ್ಮ ಕ್ಷೇತ್ರಗಳಿಗೆ ಯಾರು ಹೆಚ್ಚು ಸಹಕಾರಿಯಾಗಿದ್ದಾರೆ ಎಂಬುದರ ಮೇಲೆ ವೋಟ್ ಹಾಕುವುದಕ್ಕೆ ಸಿದ್ಧರಾಗಿದ್ದಾರೆ.
ಹೀಗಾಗಿ ನಾಳೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದ್ದು ಸಂಜೆ 6ಗಂಟೆವರೆಗೂ ನಡೆಯಲಿದೆ. ಆದ್ದರಿಂದ ಪ್ರತಿಯೊಬ್ಬ ಮತದಾರರು ತಪ್ಪದೆ ಬಂದು ತಮಗೆ ಇಷ್ಟವಾದ ಅಭ್ಯರ್ಥಿ ಪರ ಮತಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಿಷ್ಟಗೊಳಿಸಬೇಕಿದೆ.