NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ಬಸ್‌ನಲ್ಲಿ ಸಾಮರ್ಥ್ಯಕ್ಕಿಂತ ಒಬ್ಬ ಹೆಚ್ಚು ಪ್ರಯಾಣಿಕ ಇದ್ದಾನೆ ಎಂದು ಚಾಲಕನಿಗೆ 200 ರೂ. ದಂಡ ಹಾಕಿದ ಗುಬ್ಬಿ ಪಿಎಸ್‌ಐ

ವಿಜಯಪಥ ಸಮಗ್ರ ಸುದ್ದಿ

ಗುಬ್ಬಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಚಾಲನಾ ಸಿಬ್ಬಂದಿ ಎಂದರೆ ಎಲ್ಲರಿಗೂ ಒಂದುರೀತಿ ಸಲುಗೆ, ಇವರು ಏನು ಮಾಡಿಯಾರು ಎಂಬ ತಾತ್ಸಾರ. ಹೀಗಾಗಿ ಇವರು ಘಟಕಗಳ ಅಧಿಕಾರಿಗಳಿಂದಲೂ ಕಿರುಕುಳ ಎದುರಿಸುತ್ತಾರೆ. ಅದರ ಜತೆಗೆ ಇತರ ಇಲಾಖೆಯ ಅಧಿಕಾರಿಗಳು ಇವರನ್ನು ಕೀಳಾಗಿ ನಡೆಸಿಕೊಳ್ಳುತ್ತಾರೆ.

ಹೌದು! ಸಾರಿಗೆ ನೌಕರರೇನು ಬಿಟ್ಟಿ ಬಿದ್ದಿದ್ದಾರ? ಇತ್ತ ತಮ್ಮ ನಿಗಮದ ಅಧಿಕಾರಿಗಳಿಂದಲೇ ತುಳಿತಕ್ಕೊಳಗಾಗುವುದು, ಅತ್ತ ಇನ್ನಾವುದೋ ಇಲಾಖೆಯ ಅಧಿಕಾರಿ ಮಾನವೀಯತೆ ಮರೆತು ನಡೆದುಕೊಳ್ಳುವುದು. ಈ ನಡೆಯಿಂದ ನೌಕರರಿರಲಿ ಜನರಿಗೂ ಬೇಸರವಾಗುತ್ತಿದೆ. ಅಷ್ಟರ ಮಟ್ಟಿಗೆ ವ್ಯವಸ್ಥೆ ಹಾಳಾಗಿ ಹೋಗಿದೆ.

ಇವರು ಸಾರ್ವಜನಿಕ ಸೇವಕರು ಎಂಬ ಭಾವನೆ ಸ್ವತಃ ಸಾರ್ವಜನಿಕ ಸೇವೆ ಮಾಡುತ್ತಿರುವವರಲ್ಲೇ ಇಲ್ಲವಾಗಿದೆ. ಅದೇನೇ ಇರಲಿ ಪ್ರಸ್ತುತ ಸಾರಿಗೆ ನಿಗಮಗಳಲ್ಲಿ ಚಾಲಕ ಮತ್ತು ನಿರ್ವಾಹಕರಾಗಿ ಕೆಲಸ ಮಾಡುತ್ತಿರುವವರು ಬರಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಓದಿಕೊಂಡಷ್ಟೆ ಬಂದಿಲ್ಲ. ಅವರಲ್ಲೂ ಪದವಿ, ಸ್ನಾತಕೋತ್ತರ ಪದವಿ ಪಡೆದವರು ಇದ್ದಾರೆ. ಅಂದರೆ ಯಾವುದೇ ಒಬ್ಬ ಪ್ರಥಮ ದರ್ಜೆ ಅಧಿಕಾರಿಗೂ ಕಡಿಮೆ ಇಲ್ಲದಂತ ವಿದ್ಯಾಭ್ಯಾಸ ಮಾಡಿದ್ದಾರೆ. ಆದರೆ ಏನೋ ಒಂದು ಸೇವೆ, ಜೀವನ ನಡೆಸುವುದಕ್ಕೆ ಕೆಲಸ ಯಾವುದಾದರೇನು ಎಂದು ಸಾರಿಗೆ ನಿಗಮಗಳಲ್ಲಿ ದುಡಿಯುತ್ತಿದ್ದಾರೆ.

ಆದರೆ, ಇದಾವುದನ್ನು ಪರಿಗಣಿಸದೆ ಸಾರಿಗೆ ಚಾಲನಾ ಸಿಬ್ಬಂದಿ ಎಂದರೆ ಈ ಅಧಿಕಾರಿಗಳಿಗೆ ಏನು ಅನಿಸುತ್ತದೋ ಗೊತ್ತಿಲ್ಲ. ಅವರೊಂದಿಗೆ ಮನುಷ್ಯರ ರೀತಿ ವರ್ತಿಸುವ ಬದಲು ಮೃಗಗಳಂತೆ ನಡೆದುಕೊಳ್ಳುತ್ತಾರೆ. ಅದಕ್ಕೆ ತಾಜಾ ಉದಾಹರಣೆ ಎಂದರೆ ಮೊನ್ನೆ ಗುಬ್ಬಿ ಪೊಲೀಸ್‌ ಸಬ್‌ ಇನ್ಸ್‌ಪೇಕ್ಟರ್‌ ಒಬ್ಬರು ತಿಪಟೂರು ಘಟಕದ 67AB ಮಾರ್ಗದ ವಾಹನದಲ್ಲಿ ಒಬ್ಬ ಪ್ರಯಾಣಿಕ ಬಸ್‌ ಸಾಮರ್ಥ್ಯಕ್ಕಿಂತ (rather than capacity) ಹೆಚ್ಚಾಗಿದ್ದಾನೆ. ಏಕೆ ಸಾಮರ್ಥ್ಯ ಮೀರಿ ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಿದ್ದೀಯೆ ಎಂದು ಹೇಳಿ ಚಾಲನಾ ಸಿಬ್ಬಂದಿಗೆ ಕೇಸು ಬರೆದು 200 ರೂಪಾಯಿ ದಂಡವನ್ನು ಹಾಕಿದ್ದಾರೆ.

ಸರಿ ಇವರ ಕರ್ತವ್ಯ ನಿಷ್ಠೆಯನ್ನು ಗೌರವಿಸೋಣ, ಆದರೆ ಇವರು ಕಣ್ಣ ಎದು‌ರು ಟಂಟ‌ಂ, ಆಟೋಗಳಲ್ಲಿ ಕುರಿಮಂದೆಯಂತೆ ಜನರನ್ನು ತುಂಬಿಕೊಂಡು ಹೋಗುತ್ತಿದ್ದರೂ ಅವರನ್ನು ಏಕೆ ತಡೆದು ದಂಡ ಕೇಸು ಹಾಕುವುದಿಲ್ಲ. ಜನರಲ್ಲಿ ಸಾರಿಗೆ ಬಸ್‌ ಎಂದರೆ ಅದು ಸರ್ಕಾರಿ ಬಸ್‌ ಎಂಬ ನಂಬಿಕೆ. ಆದರೆ ಇಂಥ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಹೆಚ್ಚುವರಿ ಒಬ್ಬ ಪ್ರಯಾಣಿಕ ಪ್ರಯಾಣಿಸಲು ಅನುಮತಿ ನೀಡಿದ ಕಾರಣಕ್ಕೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ 200 ರೂ. ದಂಡ ವಿಧಿಸಿರುವುದು ಎಷ್ಟು ಸರಿ ಎಂದು ಜನರೆ ಕೇಳುತ್ತಿದ್ದಾರೆ.

ಅಲ್ಲದೆ, ಹಬ್ಬ ಹರಿದಿನಗಳು ಮತ್ತು ನಿತ್ಯ ಕೆಲಸದ ಸಮಯದಲ್ಲಿ ಹಾಗೂ ಕೆಲಸ ಮುಗಿಸಿ ಮನೆಗೆ ಹೊರಡುವ ಸಮಯದಲ್ಲಿ ಸಾಮಾನ್ಯವಾಗಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರು ಪ್ರಯಾಣಿಸುತ್ತಾರೆ. ಅಂದರೆ ಈವರೆಗೂ ಅವರನ್ನು ಏಕೆ ತಡೆದು ದಂಡಹಾಕಿಲ್ಲ. ಸೀಟ್‌ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಬಸ್‌ನಲ್ಲಿ ಹತ್ತಿಸಿಕೊಳ್ಳಬಾರದು ಎಂದರೆ ಈಗ ಸಾರಿಗೆ ನಿಗಮಗಳಲ್ಲಿ ಇರುವ ಬಸ್‌ಗಳಿಗಿಂತ ಎರಡುಪಟ್ಟು ಹೆಚ್ಚು ಬಸ್‌ಗಳನ್ನು ಖರೀದಿಸಬೇಕು. ಜತೆಗೆ ಅಷ್ಟೇ ನೌಕರರನ್ನು ನೇಮಕ ಮಾಡಿಕೊಳ್ಳಬೇಕು.

ಆದರೆ, ಸರ್ಕಾರಕ್ಕೆ ಈಗಿರುವ ನೌಕರರಿಗೇ ಸರಿಯಾಗಿ ವೇತನ ಕೊಡಲು ಆಗದೆ ಖಾಸಗಿಯವರಿಗೆ ಮಾರುತ್ತಿದೆ. ಅಂಥದರಲ್ಲಿ ಸಾಮರ್ಥ್ಯ ಮೀರಿ ಹತ್ತಿಸಿಕೊಳ್ಳದೆ ಹೋದರೆ ಇನ್ನಷ್ಟು ನಷ್ಟವನ್ನು ಅನುಭವಿಸಬೇಕಾಗುತ್ತದೆ. ಈ ಬಗ್ಗೆ ಸರ್ಕಾರವೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

ಇತ್ತ ಪೊಲೀಸ್‌ ಇಲಾಖೆಯನ್ನು ಚೂ ಬಿಟ್ಟು ಅತ್ತ ಸಾರಿಗೆ ನೌಕರರಿಗೂ ಹೆಚ್ಚು ಆದಾಯ ತರಬೇಕು ಎಂದು ಶಿಕ್ಷೆ ನೀಡುವುದನ್ನು ಮೊದಲು ನಿಲ್ಲಿಸಬೇಕು. ಈ ರೀತಿ ಹುಚ್ಚಾವರ್ತನೆಯನ್ನು ಸರ್ಕಾರ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಜನರೆ ಪಾಠ ಕಲಿಸುತ್ತಾರೆ. ಇಂಥ ಸರ್ಕಾರಕ್ಕೆ ಮಾನ ಮರ್ಯಾದೆ ಎಂಬುವುದು ಇದೆಯೇ ಎಂದು ಈಗಾಗಲೇ ಜನರು ಎಲೆಅಡಿಕೆ ಹಾಕಿಕೊಂಡು ಹೊಗಳುತ್ತಿದ್ದಾರೆ.

ಸಬ್ ಇನ್ಸ್‌ಪೇಕ್ಟರ್‌ ನಡೆಗೆ ಸಾರ್ವಜನಿಕರ ಆಕ್ರೋಶ: ಕಾಲೇಜು ವಿದ್ಯಾರ್ಥಿಗಳು, ಅಂಗವಿ, ಪತ್ರಕರ್ತರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಕ್ರೀಡಾಪಟುಗಳು ಸರಿದಂತೆ ಅನೇಕರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಅಲ್ಲದೆ ಹಿರಿಯ ನಾಗರಿಕರಿಗೆ 25% ವಿನಾಯ್ತಿ ನೀಡಿದೆ. ಇಷ್ಟೆಲ್ಲಾ ಸವಲತ್ತುಗಳನ್ನು ವಿತರಿಸಿ ಸಾರ್ವಜನಿಕರಿಗೆ ನಿತ್ಯ ಸೇವೆ ಒದಗಿಸುತ್ತಿರುವ ಸಾರಿಗೆ ಸಿಬ್ಬಂದಿಗೆ 200 ರೂ. ದಂಡ ವಿಧಿಸಿರುವ ಗುಬ್ಬಿ ಸಬ್ ಇನ್ಸ್‌ಪೇಕ್ಟರ್‌ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ