ಬೆಂಗಳೂರು: ರಾಜ್ಯದಲ್ಲಿ ಭಾನುವಾರ (ಏ.12) 16 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ, ಅದರಲ್ಲಿ , ಶೂನ್ಯದಲ್ಲಿದ್ದ ವಿಜಯಪುರದಲ್ಲೇ 6, ಮೈಸೂರಿನಲ್ಲಿ ಒಂದು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 232 ಕ್ಕೆ ಏರಿದೆ.
ನ್ಯೂಡೆಲ್ಲಿಯ ನಿಜಾಮುದ್ದೀನ್ ಧರ್ಮಸಭೆಗೆ ಹೋಗಿ ಬಂದಿದ್ದ ತಬ್ಲಿಘಿಗಳು ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಸೋಂಕು ಹಬ್ಬಿಸಿದ್ದರು. 1,300 ಮಂದಿ ಪೈಕಿ ನಿನ್ನೆಯವರೆಗೂ 55 ಮಂದಿಗೆ ಸೋಂಕು ತಗುಲಿತ್ತು. ಆ ಸಂಖ್ಯೆ ಈಗ ಹೆಚ್ಚಾಗಿದೆ.
ಇಂದು ಬೆಳಕಿಗೆ ಬಂದ 16 ಸೋಂಕಿತರ ಪೈಕಿ 6 ಮಂದಿಗೆ ಜಮಾತ್ ನಂಟಿದೆ. ಕೊರೊನಾಗೆ ಬಲಿಯಾದ ಕಲಬುರಗಿಯ ವೃದ್ಧ(ರೋಗಿ ನಂಬರ್ 177)ನ ಕುಟುಂಬದಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡಿದೆ.
ಇದನ್ನೂ ಓದಿರಿ ಇಂದು ಮೈಸೂರಿನಲ್ಲಿ ಮತ್ತೆ 5 ದೃಢ, 214ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ
ಮೃತ ವೃದ್ಧನ ಸೊಸೆಗೆ ಕೊರೊನಾ ಪಾಸಿಟಿವ್ ಬಂದಿದೆ. ಅಲ್ಲದೇ, ಬಹಮನಿ ಆಸ್ಪತ್ರೆಯಲ್ಲಿದ್ದಾಗ ವೃದ್ಧನನ್ನು ನೋಡಿಕೊಂಡಿದ್ದ ಆಯಾಗೂ ಸೋಂಕು ವ್ಯಾಪಿಸಿದೆ. ಬೆಳಗಾವಿಯ ನಾಲ್ವರಿಗೂ ಕೂಡ ಜಮಾತ್ ನಂಟು ಇರುವುದು ಖಚಿತಪಟ್ಟಿದೆ.
ಇಂದಿನ ಪ್ರಕರಣ
* ರೋಗಿ ನಂ.220 – ಕಲಬುರಗಿಯ 24 ವರ್ಷದ ಮಹಿಳೆ – ಕೇಸ್ ನಂ.177ರ ಸೊಸೆ
* ರೋಗಿ ನಂ.222 – ಕಲಬುರಗಿಯ 38 ವರ್ಷದ ಮಹಿಳೆ – ಕೇಸ್ ನಂ.177ರ ಸಂಪರ್ಕ – ಆಸ್ಪತ್ರೆ ಆಯಾ
* ರೋಗಿ ನಂ.223 – ಬೆಳಗಾವಿಯ ರಾಯಭಾಗದ 19 ವರ್ಷದ ಯುವಕ – ಕೇಸ್ ನಂ.150ರ ಸಂಪರ್ಕ
* ರೋಗಿ ನಂ.224 – ಬೆಳಗಾವಿಯ ಹಿರೇಬಾಗೇವಾಡಿಯ 38 ವರ್ಷದ ಪುರುಷ – ಕೇಸ್ ನಂ.128ರ ಸಂಪರ್ಕ
* ರೋಗಿ ನಂ.225 – ಬೆಳಗಾವಿಯ ರಾಯಭಾಗದ 55 ವರ್ಷದ ಪುರುಷ – ಕೇಸ್ ನಂ.150ರ ಸಂಪರ್ಕ
* ರೋಗಿ ನಂ.226 – ಬೆಳಗಾವಿಯ ರಾಯಭಾಗದ 25 ವರ್ಷದ ಯುವಕ – ಕೇಸ್ ನಂ.150ರ ಸಂಪರ್ಕ