NEWSನಮ್ಮಜಿಲ್ಲೆನಮ್ಮರಾಜ್ಯ

24 ದಿನ ಪೂರ್ಣಗೊಳಿಸಿದ ನೌಕರರ ಕೂಟದ ಬೃಹತ್‌ ಸೈಕಲ್‌ ಜಾಥಾ – ಇಂದು ಬಾಗಲಕೋಟೆಯಲ್ಲಿ ಒಗ್ಗಟ್ಟು ಪ್ರದರ್ಶನ

ವಿಜಯಪಥ ಸಮಗ್ರ ಸುದ್ದಿ

ಬಾಗಲಕೋಟೆ: ಬಳ್ಳಾರಿಯಿಂದ ಅ.10ರಿಂದ ಆರಂಭವಾಗಿರುವ ಸಾರಿಗೆ ನೌಕರರ ಕೂಟದ ಬೃಹತ್‌ ಸೈಕಲ್‌ ಜಾಥಾ ಇಂದು 24ನೇ ದಿನಕ್ಕೆ ಕಾಲಿಟ್ಟಿದ್ದು, ಜಿಲ್ಲೆಯನ್ನು ಪ್ರವೇಶಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಬಳ್ಳಾರಿ- ಹೊಸಪೇಟೆ – ಕೊಪ್ಪಳ – ರಾಯಚೂರು – ಯಾದಗಿರಿ – ಬೀದರ್‌ ಮತ್ತು ಕಲಬುರಗಿ, ವಿಜಯಪುರ ಮತ್ತು ಇಂದು ಬಾಗಲಕೋಟೆಯನ್ನು ಜಾಥಾ ಆರಂಭವಾದ ಈ 24 ದಿನದಲ್ಲಿ ಸುತ್ತಿದ್ದು, ಈ ಮೂಲಕ ಸರ್ಕಾರಕ್ಕೆ ನಮ್ಮ ಹೋರಾಟ ಸರ್ಕಾರದ ವಿರುದ್ಧವಲ್ಲ ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಬೇಕು ಎಂಬುದನ್ನು ತಿಳಿಸುತ್ತಿದೆ. ಅಲ್ಲದೆ ವೇತನ ಆಯೋಗ ಮಾದರಿಯಂತೆ ನಮಗೂ ವೇತನ ನೀಡಬೇಕು ಎಂದು ಆಗ್ರಿಸುವ ಪೋಸ್ಟರ್‌ಗಳನ್ನು ಹಿಡಿದು ನಗರದಲ್ಲಿ ಜಾಥಾ ನಡೆಸಿತು.‌

ಅಲ್ಲದೆ ನಾವು ಶಾಂತಿಯುತವಾಗಿ ಈ ಜಾಥಾ ನಡೆಸುತ್ತಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಕರ್ತವ್ಯ ನಿರತ ನೌಕರರನ್ನು ಕರೆಯುತ್ತಿಲ್ಲ ಎಂದು ಕೂಟದ ಅಧ್ಯಕ್ಷ ಚಂದ್ರಶೇಖರ್‌ ತಿಳಿಸಿದ್ದಾರೆ.

ಅ.27ರಂದು ಕಲಬುರಗಿಯಲ್ಲಿ ಮಹಾ ಸಮಾವೇಶ ಆಯೋಜಿಸಿದ ಬಳಿಕ ಜಾಥಾವು ವಿಜಯಪುರದತ್ತ ಹೊರಟಿತ್ತು. ಕೇವಲ ಎರಡೆ ದಿನದಲ್ಲಿ 160 ಕಿಮಿ ಕ್ರಮಿಸಿದ್ದು, 800ಕ್ಕೂ ಹೆಚ್ಚು ಕಿಮೀ ಸೈಕಲ್‌ ಜಾಥಾ ಕ್ರಮಿಸಿದೆ. ಸದ್ಯ ಜಾಥಾಗೆ ನೌಕರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಜಾಥಾವನ್ನು ನೌಕರರು ಒಕ್ಕೊರಲಿನಿಂದ ಬೆಂಬಲಿಸುತ್ತಿದ್ದಾರೆ.

ಇನ್ನು ಯಾದಗಿರಿ ಜಿಲ್ಲೆಯಿಂದ ಅ.17ರಂದು 190 ಕಿಮೀ ದೂರದ ಬೀದರ್‌ನತ್ತ ಜಾಥಾ ಹೊರಟಿತ್ತು. ಅ.20ರಂದು ಬೀದರ್‌ ತಲುಪಿತ್ತು. ಅ.21ರಂದು ಬೀದರ್‌ನಲ್ಲಿ ಜಾಗೃತಿ ಸಮಾವೇಶ ಮಾಡಿ ಬಳಿಕ ಬೀದರ್‌ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಹಮ್ಮಿಕೊಂಡಿರುವ ಈ ಬೃಹತ್‌ ಸೈಕಲ್‌ ಜಾಥಾ ಇಂದಿಗೆ 24ನೇ ದಿನ ಪೂರೈಸಿದೆ. ಇನ್ನು ಈಗಾಗಲೇ ರಾಜ್ಯದ 9 ಜಿಲ್ಲೆಗಳಲ್ಲಿ ಜಾಥಾ ಯಶಸ್ವಿಯಾಗಿದ್ದು, ಮುಂದೆ ಸಾಗುತ್ತಿದೆ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ